ಇಂಗ್ಲಿಶ್-ಕನ್ನಡ ಪದನೆರಕೆ

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್, ಯೋ ಬರತ್ ಕುಮಾರ್, ವಿವೇಕ್ ಶಂಕರ್
ಪುಟಗಳು: 740
ಅಚ್ಚು: ಮೊದಲನೇ ಅಚ್ಚು, 2015
ಹೊರಪಡಿಕೆ: ಡಾ. ಡಿ. ಏನ್. ಶಂಕರ ಬಟ್

ಸಣ್ಣ ವರಸೆಯನ್ನು ಕೆಳಗಿಳಿಸಿಕೊಳ್ಳಿ down_arrow

ಕೊಂಡುಕೊಳ್ಳಿರಿ
munnota
totalkannada


 ವಿವರಗಳು

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದ್ದೇ ಆದ ಪದಗಳನ್ನು ಕೊಡುವ ಒಂದು ಒಡರ‍್ಚನ್ನು ಈ ಪದನೆರಕೆಯಲ್ಲಿ ಮಾಡಲಾಗಿದೆ.

ಅಂತಹ ಪದಗಳು ಕನ್ನಡದಲ್ಲಿ ಇಲ್ಲದಿರುವಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ, ಇಲ್ಲವೇ ಪದಗಳನ್ನು ಜೋಡಿಸಿ, ಹೊಸದಾಗಿ ಪದಗಳನ್ನು ಉಂಟು ಮಾಡುವ ಕೆಲಸವನ್ನೂ ಇಲ್ಲಿ ನಡೆಸಲಾಗಿದೆ.

ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವವರು ಹೆಚ್ಚಾಗಿ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸುತ್ತಾರೆ. ಆದರೆ ಈ ರೀತಿ ಉಂಟು ಮಾಡಿದ ಪದಗಳು ಕನ್ನಡದ ಮಟ್ಟಿಗೆ ತೊಡಕು ತೊಡಕಾಗಿರುತ್ತವೆ, ಮತ್ತು ಕನ್ನಡದ ಸೊಬಗನ್ನು ಕೆಡಿಸುತ್ತವೆ. ಹಾಗಾಗಿ, ಅಂತಹ ಪದಗಳನ್ನು ಬಳಸಿರುವ ಬರಹಗಳು ಹೆಚ್ಚಿನ ಕನ್ನಡಿಗರಿಂದಲೂ ದೂರವೇ ಉಳಿಯುತ್ತವೆ.

ಇದಲ್ಲದೆ, ಇಂತಹ ಪದಗಳನ್ನು ಬಳಸಿ ಕನ್ನಡಕ್ಕೆ ಬೇಕಾಗಿರುವ ಹಲವು ಬಗೆಯ ಬೇರ‍್ಮೆಗಳನ್ನು ಕಚಿತವಾಗಿ ತಿಳಿಸಲು ಬರುವುದಿಲ್ಲ ಮತ್ತು ಇದರಿಂದಾಗಿ, ಅವನ್ನು ಬಳಸಿರುವ ಅರಿಮೆಯ ಬರಹಗಳಲ್ಲಿ ಕೆಲವು ಬಗೆಯ ಗೊಂದಲಗಳು ಸೇರಿಕೊಳ್ಳುತ್ತವೆ.

ಕನ್ನಡದವೇ ಆದ ಪದ ಮತ್ತು ಒತ್ತುಗಳನ್ನು ಬಳಸಿ ನಮಗೆ ಬೇಕಾಗುವ ಪದಗಳನ್ನು ಉಂಟುಮಾಡಿದಲ್ಲಿ ಅವು ಕನ್ನಡದ ಸೊಲ್ಲುಗಳಲ್ಲಿ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳಬಲ್ಲುವು ಮತ್ತು ಕನ್ನಡದ ಸೊಗಡನ್ನೂ ಕೆಡಿಸದೆ ಉಳಿಸಿಕೊಳ್ಳಬಲ್ಲುವು. ಅವನ್ನು ಬಳಸಿ ಬರೆದ ಅರಿಮೆಯ ಬರಹಗಳು ವಿಶಯಗಳನ್ನು ಹೆಚ್ಚು ಮನದಟ್ಟಾಗುವಂತೆ ಓದುಗರಿಗೆ ತಿಳಿಸಬಲ್ಲುವು. ಅಂತಹ ಹಲವಾರು ಪದಗಳನ್ನು ಇಲ್ಲಿ ಉಂಟುಮಾಡಲಾಗಿದೆಯಲ್ಲದೆ ಹೊಸದಾಗಿ ಅಂತಹ ಪದಗಳನ್ನು ಉಂಟುಮಾಡಲು ಹೊರಡುವವರಿಗೂ ಈ ಪದನೆರಕೆ ಒತ್ತಾಸೆಯಾಗಬಲ್ಲುದು.

 

 

facebooktwitter