ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 253
ಅಚ್ಚು: ತಿದ್ದಿ ದೊಡ್ಡದು ಮಾಡಿರುವ ಏಳನೇ ಅಚ್ಚು, 2013
ಹೊರಪಡಿಕೆ: ಡಿ. ಎನ್. ಶಂಕರ ಬಟ್

ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ   down_arrow

ಕೊಂಡುಕೊಳ್ಳಿರಿ
munnota 
totalkannada
navakarnataka


ವಿವರಗಳು

ಒಂದು ಬಾಶೆಯಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ವ್ಯಾಕರಣದ ಮುಕ್ಯ ಉದ್ದೇಶ. ಕನ್ನಡದಲ್ಲಿ ಪ್ರಕಟವಾಗಿರುವ ವ್ಯಾಕರಣಗಳಾವುವೂ ಈ ಉದ್ದೇಶವನ್ನು ಸಾದಿಸುವಲ್ಲಿ ಸಪಲವಾಗಿಲ್ಲ. ಅವೆಲ್ಲ ಮುಕ್ಯವಾಗಿ ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ.

ಈ ನಿಯಮಗಳು ಕನ್ನಡ ವ್ಯಾಕರಣ ನಿಯಮಗಳಿಗಿಂತ ಬಹಳಶ್ಟು ಬಿನ್ನವಾಗಿವೆಯಾದ ಕಾರಣ ಕನ್ನಡ ಪದಗಳ ಮತ್ತು ವಾಕ್ಯಗಳ ರಚನೆಯನ್ನು ಸರಿಯಾಗಿ ವಿವರಿಸಲಾರವು. ನಿಜಕ್ಕೂ ಕನ್ನಡದ ವ್ಯಾಕರಣ ನಿಯಮಗಳು ಎಂತಹವು, ಕನ್ನಡ ವ್ಯಾಕರಣಗಳಲ್ಲಿ ಅದರಲ್ಲೂ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ವ್ಯಾಕರಣಗಳಲ್ಲಿ ಬರುವ ನಿಯಮಗಳಿಗಿಂತ ಅವು ಹೇಗೆ ಬಿನ್ನವಾಗಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕನ್ನಡ ಬಾಶೆಯಲ್ಲಿ ಮತ್ತು ಅದರ ವ್ಯಾಕರಣದಲ್ಲಿ ಆಸಕ್ತಿಯಿರುವವರೆಲ್ಲ ಅವಶ್ಯವಾಗಿ ಓದಬೇಕಾದ ಪುಸ್ತಕವಿದು.

ಇದನ್ನು ಬರೆದಿರುವ ಡಿ.ಎನ್.ಶಂಕರ ಬಟ್ಟರು ಸಂಸ್ಕ್ರುತದಲ್ಲಿ ಎಂ.ಎ. ಮತ್ತು ಬಾಶಾವಿಗ್ನಾನದಲ್ಲಿ ಪಿ.ಹೆಚ್.ಡಿ ಮಾಡಿ, ಪುಣೆ, ತಿರುವನಂತಪುರ, ಇಂಪಾಲ್ ಮತ್ತು ಮಯ್ಸೂರುಗಳಲ್ಲಿ ಸಂಶೋದನೆ ಮತ್ತು ಕಲಿಸುವಿಕೆಗಳನ್ನು ಮಾಡಿ ನಿವ್ರುತ್ತರಾಗಿದ್ದಾರೆ. ಇದಲ್ಲದೆ ಇಂಗ್ಲೆಂಡಿನಲ್ಲಿ ಒಂದು ವರ‍್ಶ, ಅಮೇರಿಕದಲ್ಲಿ ಒಂದೂವರೆ ವರ‍್ಶ, ಬೆಲ್ಜಿಯಮ್ ನಲ್ಲಿ ಆರು ತಿಂಗಳು, ಜರ‍್ಮನಿಯಲ್ಲಿ ಆರು ತಿಂಗಳು ಮತ್ತು ಆಸ್ಟ್ರೇಲಿಯಾದಲ್ಲಿ ಮೂರು ತಿಂಗಳು ಸಂಶೋದನೆ ಮಾಡಿದ್ದಾರೆ. ಇಂಗ್ಲಿಶಿನಲ್ಲಿ ಇವರು ಬರೆದ ಪುಸ್ತಕಗಳು ಮತ್ತು ಲೇಕನಗಳು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪ್ರಕಟಿತವಾಗಿ ವಿಮರ‍್ಶಕರ ಮನ್ನಣೆ ಪಡೆದಿವೆ. ಇತ್ತೀಚೆಗೆ ಸರ‍್ವನಾಮಗಳ ಮೇಲೆ ಇವರು ಬರೆದ ಪುಸ್ತಕವನ್ನು ಆಕ್ಸ್‍ಪರ‍್ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ.

ನೂರಾರು ಬಾಶೆಗಳ ವ್ಯಾಕರಣಗಳನ್ನು ಪರಿಶೀಲಿಸಿ, ಅವುಗಳ ನಡುವೆ ಯಾವ ರೀತಿಯಲ್ಲೆಲ್ಲ ವ್ಯತ್ಯಾಸಗಳು ಕಾಣಿಸಿಕೊಳ್ಳಬಲ್ಲುವು ಎಂಬುದನ್ನು ಕಂಡುಹಿಡಿಯುವುದಕ್ಕಾಗಿ ಅವರು ಸುಮಾರು ನಲವತ್ತು ವರ‍್ಶಗಳ ಸಂಶೋದನೆ ಮಾಡಿದ್ದಾರೆ. ಈ ಸಂಶೋದನೆಯ ಮೂಲಕ ತಾವು ಪಡೆದ ತಿಳುವಳಿಕೆಯನ್ನು ಅವರೀಗ ಕನ್ನಡ ವ್ಯಾಕರಣವನ್ನು ಅರಿಯುವ ಪ್ರಯತ್ನದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

 

facebooktwitter