ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?

Cover-page-Kannadakke-mahaprana-yaake-beda

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 96
ಅಚ್ಚು: ಮೊದಲನೇ ಅಚ್ಚು, 2017
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

ಕೊಂಡುಕೊಳ್ಳಿರಿ 
munnota  
totalkannada
navakarnataka


 ವಿವರಗಳು

ಕನ್ನಡ ಬರಹಗಳಲ್ಲಿ ಸಂಸ್ಕ್ರುತದ ಎರವಲು ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯುವುದಕ್ಕಾಗಿ ಮಹಾಪ್ರಾಣ ಬರಿಗೆ(ಅಕ್ಶರ)ಗಳು, ಷಕಾರ, ಋಕಾರ, ವಿಸರ‍್ಗ ಮೊದಲಾದ ಹತ್ತಿಪ್ಪತ್ತು ಹೆಚ್ಚಿನ ಬರಿಗೆಗಳನ್ನು ಬಳಸಲಾಗುತ್ತದೆ. ಕನ್ನಡದವೇ ಆದ ಪದಗಳನ್ನು ಬರೆಯಲು ಇವು ಬೇಕಾಗುವುದಿಲ್ಲ.

ಬೇರೆಲ್ಲಾ ಎರವಲು ಪದಗಳನ್ನೂ ಅವನ್ನು ಹೇಗೆ ಉಲಿಯುತ್ತೇವೋ ಹಾಗೆ ಬರೆಯುತ್ತೇವೆ. ಸಂಸ್ಕ್ರುತದ ಎರವಲು ಪದಗಳನ್ನು ಮಾತ್ರ ಉಲಿಯುವ ಹಾಗೆ ಬರೆಯದೆ, ಸಂಸ್ಕ್ರುತದಲ್ಲಿರುವ ಹಾಗೆ ಬರೆಯುತ್ತೇವೆ.

ನಿಜಕ್ಕೂ ಕನ್ನಡದ ಮಟ್ಟಿಗೆ ಇದು ಅವಶ್ಯವಿಲ್ಲ. ಈ ಹೆಚ್ಚಿನ ಬರಿಗೆಗಳು ಕನ್ನಡ ಬರವಣಿಗೆಯನ್ನು ಕಲಿಯುವ ಮಕ್ಕಳಿಗೆ ಮತ್ತು ಆಮೇಲೆ ಅದನ್ನು ಬಳಸುವ ದೊಡ್ಡವರಿಗೆ ಅನವಶ್ಯಕವಾಗಿ ತೊಂದರೆ ಕೊಡುತ್ತಿವೆ.

ಮೇಲ್ವರ‍್ಗದ ಮಕ್ಕಳಿಗಿಂತಲೂ ಕೆಳವರ‍್ಗದ ಮಕ್ಕಳಿಗೆ ಅವು ಹೆಚ್ಚು ತೊಂದರೆ ಕೊಡುತ್ತಿವೆ. ಅವುಗಳಿಂದಾಗಿ ಹೆಚ್ಚಿನ ಕೆಳವರ‍್ಗದ ಮಕ್ಕಳೂ ಬರಹದಿಂದ ದೂರ ಉಳಿಯುವಂತಾಗಿದೆ.

ಈ ತೊಡಕನ್ನು ಹೋಗಲಾಡಿಸಲು, ಮತ್ತು ಕೆಳವರ‍್ಗದ ಮಕ್ಕಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಬೇರೆ ಎರವಲು ಪದಗಳ ಹಾಗೆ ಸಂಸ್ಕ್ರುತ ಎರವಲು ಪದಗಳನ್ನೂ ಉಲಿಯುವ ಹಾಗೆ ಬರೆಯಲು ತೊಡಗಬೇಕು, ಮತ್ತು ಕನ್ನಡ ಬರವಣಿಗೆಯಲ್ಲಿ ಈ ಹತ್ತಿಪ್ಪತ್ತು ಹೆಚ್ಚಿನ ಬರಿಗೆಗಳನ್ನು ಬಳಸದಿರಬೇಕು.

 

 

facebooktwitter