ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ


ಬರಹಗಾರರು:
ಡಾ. ಡಿ. ಎನ್. ಶಂಕರ ಬಟ್
ಪುಟಗಳು: 248
ಅಚ್ಚು: ಮೊದಲನೇ ಅಚ್ಚು, 2014
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

ಮೊದಲೆರಡು ಪಸುಗೆಗಳನ್ನು ಕೆಳಗಿಳಿಸಿಕೊಳ್ಳಿ   down_arrow

ಕೊಂಡುಕೊಳ್ಳಿರಿ 
munnota      ಕೊಂಡುಕೊಳ್ಳಿರಿ
sapna_logo
navakarnataka


 

ವಿವರಗಳು

ಇವತ್ತು ಕನ್ನಡ ಬರಹಗಾರರು ಹೊಸಪದಗಳು ಬೇಕಾದಾಗಲೆಲ್ಲ ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಅವಗಳನ್ನು ಕಟ್ಟಿಕೊಳ್ಳುವ ಕೆಟ್ಟ ಚಾಳಿಗೆ ಬಿದ್ದಿದ್ದಾರೆ. ಇದರಿಂದಾಗಿ ಕನ್ನಡ ಬರಹದಲ್ಲಿ ಸಂಸ್ಕ್ರುತ ಎರವಲುಗಳ ಎಣಿಕೆ ಹೆಚ್ಚಾಗುತ್ತಿದ್ದು, ಕನ್ನಡ ಬರಹ ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿಯುವಂತಾಗಿದೆ.

ಬೆಳವಣಿಗೆಯನ್ನು ಪಡೆದಿರುವ ಇಂಗ್ಲಿಶ್‍ನಂತಹ ಬರಹಗಳಲ್ಲಿ ಹಲವಾರು ಪದಗಳಿಗೆ ಏಳೆಂಟು ಹುರುಳುಗಳಿರುತ್ತವೆ; ಆದರೆ, ಕನ್ನಡದಲ್ಲಿ ಅಂತಹವೇ ಪದಗಳಿಗೆ ಒಂದೆರಡು ಹುರುಳುಗಳಶ್ಟೇ ಇರುತ್ತವೆ; ಹೆಚ್ಚಿನ ಹುರುಳುಗಳು ಬೇಕಾಗುವಲ್ಲೆಲ್ಲ ಕನ್ನಡ ಪದಗಳನ್ನು ಬಳಸುವ ಬದಲು ಸಂಸ್ಕ್ರುತ ಎರವಲುಗಳನ್ನು ಬಳಸುತ್ತಿರುವುದರಿಂದಾಗಿಯೇ ಈ ರೀತಿ ಕನ್ನಡ ಪದಗಳು ಬೆಳವಣಿಗೆಯಲ್ಲಿ ಹಿಂದೆ ಬಿದ್ದಿವೆ.

ಕನ್ನಡ ಬರಹಗಾರರಿಗೆ ಸಂಸ್ಕ್ರುತ ಎರವಲುಗಳ ಮೇಲಿರುವ ಈ ಒಲವಿನಿಂದಾಗಿ ಓದುಗರಲ್ಲಿಯೂ ಕನ್ನಡ ಪದಗಳ ಕುರಿತಾಗಿ ಕೀಳರಿಮೆ ಬೆಳೆದುಬಂದಿದೆ. ಇದನ್ನು ಹೋಗಲಾಡಿಸಲು, ಮತ್ತು ಕನ್ನಡ ಬರಹ ಎಲ್ಲಾ ಕನ್ನಡಿಗರನ್ನೂ ತಲಪುವಂತಾಗಲು ಇವತ್ತು ಅವುಗಳಲ್ಲಿ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸಲು ತೊಡಗಬೇಕಾಗಿದೆ.

ಇದಲ್ಲದೆ, ಎಲ್ಲಾ ಬಗೆಯ ಅರಿವುಗಳನ್ನೂ ಕನ್ನಡದವೇ ಆದ ಪದಗಳನ್ನು ಬಳಸಿ ತಿಳಿಸಲು ಬರುತ್ತದೆ ಎಂಬುದನ್ನು ಕನ್ನಡ ಬರಹಗಾರರು ಮನಗಾಣುವಂತೆ ಮಾಡಬೇಕಾಗಿದೆ. ಹೀಗೆ ಮಾಡುವಲ್ಲಿ ನೆರವಾಗುವುದೇ ಈ ಕಡತದ ಗುರಿಯಾಗಿದೆ.

 

facebooktwitter