ಕನ್ನಡನುಡಿಯ ಹಿನ್ನಡವಳಿ
ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 95
ಅಚ್ಚು: ಮೊದಲನೇ ಅಚ್ಚು, 2016
ಹೊರಪಡಿಕೆ: ಡಾ. ಡಿ. ಏನ್. ಶಂಕರ ಬಟ್
ವಿವರಗಳು
ಕನ್ನಡ ನುಡಿಯ ಹಿನ್ನಡವಳಿ(ಚರಿತ್ರೆ)ಯನ್ನು ಈ ಕಿರುಕಡತದಲ್ಲಿ ಅಡಕವಾಗಿ ತಿಳಿಸಿಕೊಡಲಾಗಿದೆ. ಇದಕ್ಕಾಗಿ ಬರಿಯ ಕನ್ನಡದ ಶಾಸನಗಳ ಮತ್ತು ಕಾವ್ಯಗಳ ನಡುವಿನ ಬೇರ್ಮೆಗಳನ್ನಶ್ಟೇ ಬಳಸುವ ಬದಲು, ತಮಿಳು, ತೆಲುಗು, ಗೋಂಡಿ, ಕುಡುಕ್ ಮೊದಲಾದ ಬೇರೆ ದ್ರಾವಿಡ ನುಡಿಗಳಿಗೂ ಕನ್ನಡಕ್ಕೂ ನಡುವಿರುವ ಬೇರ‍್ಮೆಗಳನ್ನೂ ಬಳಸಿಕೊಳ್ಳಲಾಗಿದೆ.
ಈ ಎಲ್ಲಾ ದ್ರಾವಿಡ ನುಡಿಗಳಿಗೂ ಮೊದಲಿಗಿದ್ದ ಮುನ್ದ್ರಾವಿಡವೆಂಬ ಕಲ್ಪಿತ ನುಡಿಯಿಂದ ಕನ್ನಡ ಹೇಗೆ ಬೆಳೆದುಬಂದಿದೆ ಎಂಬುದನ್ನು, ಮತ್ತು ಹಾಗೆ ಬೆಳೆದುಬಂದಿರುವ ಮುನ್ಗನ್ನಡವೆಂಬ ಇನ್ನೊಂದು ಕಲ್ಪಿತ ನುಡಿಯಿಂದ ಇವತ್ತು ಬಳಕೆಯಲ್ಲಿರುವ ಹಲವಾರು ಕನ್ನಡದ ಒಳನುಡಿಗಳು ಹೇಗೆ ಬೆಳೆದುಬಂದಿವೆ ಎಂಬುದನ್ನು ಈ ಹಿನ್ನಡವಳಿ ಅಡಕವಾಗಿ ತಿಳಿಸುತ್ತದೆ.
1979ರಲ್ಲಿ ಶಂಕರ ಬಟ್ಟರು ಬರೆದ ಕನ್ನಡ ಬಾಶೆಯ ಸಂಕ್ಶಿಪ್ತ ಚರಿತ್ರೆ ಎಂಬ ಪುಸ್ತಕವನ್ನೇ ತಿದ್ದಿ ಸರಿಪಡಿಸಿ ಈ ಕಿರುಕಡತವನ್ನು ತಯಾರಿಸಲಾಗಿದೆ. ಇದಲ್ಲದೆ ಇತ್ತೀಚೆಗೆ, ಎಂದರೆ 2007ರಲ್ಲಿ ಹೊರಬಂದ ಕನ್ನಡ ನುಡಿ ನಡೆದು ಬಂದ ದಾರಿ ಎಂಬ ಪುಸ್ತಕವನ್ನೂ ಇದರ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗಿದೆ.