ಕನ್ನಡ ನುಡಿಯ ಬಗೆಗೆ ಚಿಂತನೆ


ಬರಹಗಾರರು:
ಡಾ. ಡಿ. ಎನ್. ಶಂಕರ ಬಟ್
ಪುಟಗಳು: 278
ಅಚ್ಚು: ಮೊದಲನೇ ಅಚ್ಚು, 2006

ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ   down_arrow

 

 

 


 

ವಿವರಗಳು

ಕನ್ನಡ ನುಡಿಯ ಬಗೆಗೆ ಡಾ. ಡಿ. ಎನ್. ಶಂಕರ ಬಟ್ ಅವರ ಚಿಂತನೆಗಳನ್ನು, ಈ ಹೊತ್ತಗೆಯಲ್ಲಿ, ಮೂರು ಬಾಗಗಳಲ್ಲಿ ಕೊಡಲಾಗಿದೆ : (1) ಕನ್ನಡದ ವ್ಯಾಕರಣ, (2) ಕನ್ನಡದ ಬರಹ ಮತ್ತು (3) ಕನ್ನಡದ ಚರಿತ್ರೆ. ಇವು ಮುಕ್ಯವಾಗಿ, ಶಂಕರ ಬಟ್ಟರು ಕೆಲಸದಿಂದ ನಿವ್ರುತ್ತರಾದ ಮೇಲೆ, ಅದರಲ್ಲೂ ಇದರ ಆರೇಳು ವರುಶಗಳ ಹಿಂದೆ ಬರೆದ ಪುಸ್ತಕಗಳಿಂದ ಆಯ್ದ ಬಾಗಗಳು.

ಆದರೆ ಈ ಬರವಣೆಗೆಗೆ ಅದಕ್ಕಿಂತ ಮೊದಲು ಕಳೆದ ನಲುವತ್ತು ವರ್‍ಶಗಳಲ್ಲಿ ಅವರು ನಡೆಸಿದ ಸಂಶೋದನೆ ಆದಾರವಾಗಿದೆ. ಮುಕ್ಯವಾಗಿ ಜಗತ್ತಿನ ಬೇರೆ ಬೇರೆ ಬಾಶೆಗಳ ನಡುವೆ ಎಂತಹ ಸಾಮ್ಯ ಮತ್ತು ವ್ಯತ್ಯಾಸಗಳಿರಲು ಸಾದ್ಯ ಎಂಬ ವಿಶಯದ ಮೇಲೆ ಅವರ ಈ ಸಂಶೋದನೆ ನಡೆದಿತ್ತು. ಬಾಶೆಗಳ ವ್ಯಾಕರಣಗಳು ಹಲವಾರು ರೀತಿಗಳಲ್ಲಿ ಬಿನ್ನವಾಗಿರಲು ಸಾದ್ಯ ಮತ್ತು ವ್ಯಾಕರಣದ ಮೂಲತತ್ವಗಳೂ ಇದಕ್ಕೆ ಹೊರತಲ್ಲ ಎಂಬುದು ಈ ಸಂಶೋದನೆಯಿಂದ ಅವರಿಗೆ ಮನವರಿಕೆಯಾಗಿತ್ತು.

ಈ ತಿಳುವಳಿಕೆಯ ಆದಾರದ ಮೇಲೆ ಕನ್ನಡಕ್ಕೆ ಅದರದೇ ಆದ ಹೊಸದೊಂದು ವ್ಯಾಕರಣ ಪರಂಪರೆಯನ್ನು ಸಿದ್ದಪಡಿಸುವುದು ಯಾಕೆ ಅವಶ್ಯ ಎಂಬುದನ್ನು ಮೊದಲನೇ ಬಾಗದಲ್ಲಿ ವಿವರಿಸಿದ್ದಾರೆ. ಕನ್ನಡ ಬರಹ ಬರಿಯ ಮೇಲ್ವರ್‍ಗದವರ ಸೊತ್ತಾಗಿ ಉಳಿಯದೆ ಎಲ್ಲರ ಸೊತ್ತಾಗುವ ಹಾಗೆ ಮಾಡಲು, ಕನ್ನಡದ ಮಟ್ಟಿಗೆ ಕೆಲವು ಅನವಶ್ಯವಾಗಿರುವ ನಿಯಮಗಳನ್ನು ತೆಗೆದು ಹಾಕುವುದು ಒಳಿತು ಎಂಬುದನ್ನು ಎರಡನೇ ಬಾಗದಲ್ಲಿ ತೋರಿಸಿಕೊಟ್ಟಿದ್ದಾರೆ. ಮೂರನೇ ಬಾಗದಲ್ಲಿ ಕನ್ನಡ ನುಡಿಯೊಂದಿಗೆ ತಮಿಳು, ತೆಲುಗು, ತುಳು, ಗೋಂಡಿ ಮುಂತಾದ ದ್ರಾವಿಡ ನುಡಿಗಳೊಂದಿಗೆ ಇರುವ ನಂಟನ್ನು, ಯಾವ ರೀತಿಯ ಬದಲಾವಣೆಗಳ ಮೂಲಕ ಇವು ಒಂದು ಮೂಲ ನುಡಿಯಿಂದ ಬೆಳೆದು ಬಂದವು, ಮತ್ತು ಅನಂತರ ಕನ್ನಡ ನುಡಿ ಬೇರೆ ಬೇರೆ ಒಳನುಡಿಗಳಾಗಿ ಹೇಗೆ ಒಡೆದುಕೊಂಡಿದೆ ಎಂಬುದನ್ನು ವಿವರಿಸಿದ್ದಾರೆ.

facebooktwitter