ಕನ್ನಡ ಪದಗಳ ಒಳರಚನೆ

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 328
ಅಚ್ಚು: ಮೊದಲನೇ ಅಚ್ಚು, 2010

ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ down_arrow

ಕೊಂಡುಕೊಳ್ಳಿರಿ
munnota 
totalkannada
navakarnataka


ವಿವರಗಳು

ಸಂಸ್ಕ್ರುತ ಪದಗಳ ಒಳರಚನೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆಯೋ ಅವನ್ನೇ ಬಳಸಿ ಕನ್ನಡ ಪದಗಳ ಒಳರಚನೆಯನ್ನೂ ವರ‍್ಣಿಸುವುದು ರೂಡಿ. ಆದರೆ, ಕನ್ನಡ ಸಂಸ್ಕ್ರುತಕ್ಕಿಂತ ತೀರ ಬಿನ್ನವಾದ ಬಾಶೆಯಾದ ಕಾರಣ, ಈ ವಿದಾನದ ಮೂಲಕ ನಮಗೆ ಕನ್ನಡ ಪದಗಳ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಬರುವುದಿಲ್ಲ.

ಇದಕ್ಕೆ ಬದಲಾಗಿ, ಕನ್ನಡ ಪದಗಳನ್ನು ನೇರವಾಗಿ ಪರಿಶೀಲಿಸಿ, ಅವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಲ್ಲಿವೆ, ಹೇಗೆ ಕನ್ನಡದಲ್ಲಿ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಬೇರೆ ಪದಗಳನ್ನು ಉಂಟುಮಾಡಲಾಗುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.

ಇದರಿಂದಾಗಿ, ಕನ್ನಡ ಪದಗಳ ಒಳರಚನೆ ಈ ಪುಸ್ತಕದಲ್ಲಿ ಹೆಚ್ಚು ಸ್ಪಶ್ಟವಾಗಿ ಮೂಡಿಬಂದಿದೆ. ಸಂಸ್ಕ್ರುತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿದೆ. ಹಾಗಾಗಿ ಅವನ್ನು ವರ‍್ಣಿಸುವಾಗಲೂ ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಬಳಸಿಕೊಳ್ಳುವುದು ಸರಿಯಲ್ಲ. ಇದು ಯಾಕೆ ಎಂಬುದನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

facebooktwitter