ಕನ್ನಡ ಬರಹದ ಸೊಲ್ಲರಿಮೆ – ೫

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 202
ಅಚ್ಚು: ಮೊದಲನೇ ಅಚ್ಚು, 2015
ಹೊರಪಡಿಕೆ: ನವಕರ‍್ನಾಟಕ ಪ್ರಕಾಶನ

ಹೊತ್ತಗೆಯ ಮೊದಲ ಎರಡು ಪಸುಗೆಗಳನ್ನು ಕೆಳಗಿಳಿಸಿಕೊಳ್ಳಿ    down_arrow

ಕೊಂಡುಕೊಳ್ಳಿರಿ
munnota
totalkannada


 

ವಿವರಗಳು

ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣವೊಂದನ್ನು ಒದಗಿಸಿಕೊಡುವ ಡಿ. ಎನ್. ಶಂಕರ ಬಟ್ ಅವರ ಪ್ರಯತ್ನದಲ್ಲಿ ಇದು ಅಯ್ದನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ‘ಪರಿಚೆಪದಗಳು’ ಮತ್ತು ‘ಎಣಿಕೆಪದಗಳು’ ಎಂಬ ಎರಡು ಪಸುಗೆಗಳಿವೆ.

ಈ ತುಂಡಿನ ಮೊದಲನೇ ಪಸುಗೆಯಲ್ಲಿ ಅಗಲ, ಉದ್ದ, ಕೆಂಪು, ಉರುಟು, ಮೊದಲಾದ ಹೆಸರುಪರಿಚೆಗಳನ್ನು ಮತ್ತು ಮೆಲ್ಲಗೆ, ಹಿಂದೆ, ಬಳಿಕ, ತುಸು, ಮೊದಲಾದ ಎಸಕಪರಿಚೆಗಳನ್ನು ಗುಂಪಿಸುವುದು ಹೇಗೆ, ಅವನ್ನು ಬೇರೆ ಬಗೆಯ ಪದಗುಂಪುಗಳಿಂದ ಬೇರ‍್ಪಡಿಸುವುದು ಹೇಗೆ, ಸೊಲ್ಲುಗಳಲ್ಲಿ ಅವನ್ನು ಹಂತಪದಗಳೊಂದಿಗೆ ಮತ್ತು ಹೋಲಿಕೆಯ ನುಡಿತಗಳೊಂದಿಗೆ ಬಳಸುವುದು ಹೇಗೆ ಎಂಬುದನ್ನೂ ಈ ಪಸುಗೆಯಲ್ಲಿ ತಿಳಿಸಲಾಗಿದೆ.

ಈ ಅಯ್ದನೇ ತುಂಡಿನ ಎರಡನೇ ಪಸುಗೆಯಲ್ಲಿ ಒಂದು, ಎರಡು, ಮೂರು ಮೊದಲಾದ ಎಣಿಕೆಯ ಪದಗಳನ್ನು ಹೆಸರುಪದ ಮತ್ತು ಪರಿಚೆಪದಗಳಿಂದ ಬೇರ‍್ಪಡಿಸುವುದು ಹೇಗೆ, ಅವನ್ನು ಬಳಸಿರುವ ಪದಗಳಲ್ಲಿ ಕಾಣಿಸುವ ಇಟ್ಟಳಗಳು ಎಂತಹವು, ಮತ್ತು ಸೊಲ್ಲುಗಳಲ್ಲಿ ಅವುಗಳ ಬಳಕೆಯೆಂತಹುದು ಎಂಬುದನ್ನು ತಿಳಿಸಲಾಗಿದೆ.

 

 

facebooktwitter