ಕನ್ನಡ ಬರಹದ ಸೊಲ್ಲರಿಮೆ-೬

kannada-sollarime-6

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 315
ಅಚ್ಚು: ಮೊದಲನೇ ಅಚ್ಚು, 2018
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

ಕೊಂಡುಕೊಳ್ಳಿರಿ
munnota
totalkannada
navakarnataka


 ವಿವರಗಳು

ಕನ್ನಡಕ್ಕೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಒದಗಿಸಿಕೊಡುವ ಡಿ.ಎನ್.ಶಂಕರ ಬಟ್ ಅವರ ಪ್ರಯತ್ನದಲ್ಲಿ ಇದು ಆರನೆಯ ತುಂಡಾಗಿ ಹೊರಬರುತ್ತಿದೆ. ಇದರಲ್ಲಿ ಒಳಸೊಲ್ಲುಗಳ ಬಳಕೆ ಮತ್ತು ಸೊಲ್ಲುಗಳ ಜೋಡಣೆ ಎಂಬ ಎರಡು ಪಸುಗೆಗಳಿವೆ.

ಮೊದಲನೇ(ಹದಿಮೂರನೇ) ಪಸುಗೆಯಲ್ಲಿ ಒಂದು ಸೊಲ್ಲನ್ನು ಇನ್ನೊಂದು ಸೊಲ್ಲಿನ ಪಾಂಗನ್ನಾಗಿ, ಎಸಕಪರಿಚೆಯನ್ನಾಗಿ, ಇಲ್ಲವೇ ಅದರಲ್ಲಿ ಬರುವ ಪದದ ಪರಿಚೆನುಡಿತವನ್ನಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ. ಸೊಲ್ಲಿನಲ್ಲಿ ಕೆಲವು ಮಾರ‍್ಪಾಡುಗಳನ್ನು ಮಾಡಿ ಅದನ್ನು ಈ ರೀತಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಬಹುದು, ಇಲ್ಲವೇ ಅದರಲ್ಲಿ ಯಾವ ಮಾರ‍್ಪಾಡನ್ನೂ ಮಾಡದೆ ಹಾಗೆಯೇ ಎತ್ತುಪದಗಳೊಂದಿಗೆ ಸೇರಿಸಿಯೂ ಇಂತಹ ಕೆಲಸಗಳಲ್ಲಿ ತೊಡಗಿಸಬಹುದು. ಇದನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಈ ಹದಿಮೂರನೇ ಪಸುಗೆಯಲ್ಲಿ ತಿಳಿಸಲಾಗಿದೆ.

ಎರಡನೇ(ಹದಿನಾಲ್ಕನೇ) ಪಸುಗೆಯಲ್ಲಿ ಒಂದು ಇಲ್ಲವೇ ಹೆಚ್ಚು ಸೊಲ್ಲುಗಳನ್ನು ಜೋಡಿಸಿ ಒಂದೇ ಸೊಲ್ಲನ್ನಾಗಿ ಮಾಡುವುದಕ್ಕಾಗಿ ಮತ್ತು, ಇಲ್ಲವೇ, ಆದರೆ ಎಂಬಂತಹ ಪದಗಳನ್ನು ಬಳಸುವುದು, ಊ, ಓ, ಎಂಬಂತಹ ಒಟ್ಟುಗಳನ್ನು ಬಳಸುವುದು, ಇಲ್ಲವೇ ಮಾಡಿ, ಮಾಡುವ, ಮಾಡದೆ ಎಂಬಂತಹ ಎಸಕಪದಗಳ ಜೋಡಿಸುವ ರೂಪಗಳನ್ನು ಬಳಸುವುದು ಎಂಬಂತಹ ಹೊಲಬುಗಳ ಬಳಕೆಯನ್ನು ತಿಳಿಸಲಾಗಿದೆ.

ಕನ್ನಡಕ್ಕೆ ಅದರದೇ ಆದ ಸೊಲ್ಲರಿಮೆಯ ನಡವಳಿಯನ್ನು ಬೆಳೆಸುವುದಕ್ಕಾಗಿ ಈ ಪುಸ್ತಕದಲ್ಲಿ ಕನ್ನಡದವೇ ಆದ ಕೆಲವು ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆ. ಇವುಗಳ ಪಟ್ಟಿಯೊಂದನ್ನು ಪುಸ್ತಕದಲ್ಲಿ ಮೊದಲಿಗೇನೆ ಕೊಡಲಾಗಿದೆ.

facebooktwitter