ಕನ್ನಡ ಬರಹದ ಸೊಲ್ಲರಿಮೆ-೭

sollarime-7

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 296
ಅಚ್ಚು: 2019
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

ಕೊಂಡುಕೊಳ್ಳಿರಿ
munnota


 ವಿವರಗಳು

ಕನ್ನಡಕ್ಕೆ ಕನ್ನಡದ್ದೇ ಆದ ಒಂದು ವ್ಯಾಕರಣವನ್ನು ಒದಗಿಸಿಕೊಡುವ ಡಿ.ಎನ್.ಶಂಕರ್ ಬಟ್ ಅವರ ಪ್ರಯತ್ನದಲ್ಲಿ ಇದು ಏಳನೆಯ ಮತ್ತು ಕೊನೆಯ ತುಂಡು. ಇದರಲ್ಲಿ ಅಲ್ಲಗಳೆತದ ಸೊಲ್ಲುಗಳು, ಕೇಳ್ವಿಸೊಲ್ಲುಗಳು, ಸೆಲವುಸೊಲ್ಲುಗಳು ಮತ್ತು ಬೆರಗುಸೊಲ್ಲುಗಳು ಎಂಬುದಾಗಿ ನಾಲ್ಕು ಪಸುಗೆಗಳಿವೆ.

ಮೊದಲನೆಯ (ಹದಿನಯ್ದನೇ) ಪಸುಗೆಯಲ್ಲಿ ತಿಳಿಸುವ ಎಸಕ/ಇರುಹಗಳನ್ನು ಇಲ್ಲವೇ ಅವುಗಳ ಒಂದು ಪಾಂಗನ್ನು ಅಲ್ಲಗಳೆಯುವ ಬಗೆ ಹೇಗೆ ಎಂಬುದನ್ನು ವಿವರಿಸಲಾಗಿದೆ. ಇದಲ್ಲದೆ, ಸೆಲವು, ಕೇಳ್ವಿ ಮೊದಲಾದ ಬೇರೆ ಬಗೆಯ ಸೊಲ್ಲುಗಳನ್ನು ಅಲ್ಲಗಳೆಯುವ ಬಗೆಯನ್ನೂ ಇದರಲ್ಲಿ ತಿಳಿಸಲಾಗಿದೆ.

ಎರಡನೆಯ (ಹದಿನಾರನೇ) ಪಸುಗೆಯಲ್ಲಿ ಸೊಲ್ಲುಗಳು ತಿಳಿಸುವ ಎಸಕ/ಇರುಹಗಳ ಕುರಿತಾಗಿ ಇಲ್ಲವೇ ಅವುಗಳ ಒಂದು ಪಾಂಗಿನ ಕುರಿತಾಗಿ ಕೇಳ್ವಿಯನ್ನೆತ್ತುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ.

ಮೂರನೇ (ಹದಿನೇಳನೇ) ಪಸುಗೆಯಲ್ಲಿ ಸೊಲ್ಲುಗಳನ್ನು ಬಳಸಿ ಇನ್ನೊಬ್ಬರಿಂದ ಒಂದು ಎಸಕವನ್ನು ಮಾಡಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ, ಮತ್ತು ಕೊನೆಯ (ಹದಿನೆಂಟನೇ) ಪಸುಗೆಯಲ್ಲಿ ಆಡುಗನು ತನ್ನ ಬೆರಗು, ನಲಿವು, ಕಿರಿಕಿರಿ, ಮೊದಲಾದ ಅನಿಸಿಕೆಗಳನ್ನು ಸೊಲ್ಲುಗಳ ಒಂದು ಬಗೆಯ ಮೂಲಕ ತಿಳಿಸುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ.

ನೂರಾರು ನುಡಿಗಳಲ್ಲಿ ಸೊಲ್ಲುಗಳನ್ನು ಹೇಗೆ ಕಟ್ಟಲಾಗುತ್ತದೆ ಎಂಬುದನ್ನು ಅವುಗಳ ವ್ಯಾಕರಣಗಳಿಂದ ತಿಳಿದುಕೊಂಡು, ಕನ್ನಡದಲ್ಲಿ ಸೊಲ್ಲುಗಳನ್ನು ಕಟ್ಟುವ ಬಗೆಯನ್ನು ಈ ಹದಿನೆಂಟು ಪಸುಗೆಗಳಲ್ಲಿ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

facebooktwitter