ಕನ್ನಡ ಬಾಶೆಯ ಕಲ್ಪಿತ ಚರಿತ್ರೆ

kannadad_bhasheya_kalpitha_charithre

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 136
ಅಚ್ಚು: ಮೊದಲನೇ ಅಚ್ಚು, 1995
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

ಕೊಂಡುಕೊಳ್ಳಿರಿ
munnota

navakarnataka


 ವಿವರಗಳು

ಕನ್ನಡ ಬಾಶೆಯ ಚರಿತ್ರೆಯನ್ನು ಈ ಪುಸ್ತಕದಲ್ಲಿ ಎರಡು ಬೇರೆಬೇರೆ ಗಟಕಗಳಾಗಿ ವಿಂಗಡಿಸಿ, ಅವುಗಳಲ್ಲಿ ಪ್ರತಿಯೊಂದಕ್ಕೂ ಬೇರೆಬೇರೆ ಮೂಲಬಾಶೆಗಳನ್ನು ಕಲ್ಪಿಸಿ ಅವುಗಳ ಮೂಲಕ ಆ ಚರಿತ್ರೆಯನ್ನು ವಿವರಿಸಲಾಗಿದೆ. ಕನ್ನಡ, ತಮಿಳು, ತೆಲುಗು ಮೊದಲಾದ ದ್ರಾವಿಡ ಬಾಶೆಗಳಿಗೆಲ್ಲ ಮೂಲವಾಗುವಂತಹ ’ಮೂಲದ್ರಾವಿಡ’ ಬಾಶೆಯಿಂದ ಕನ್ನಡವೂ ಮತ್ತು ಕನ್ನಡದ ಉಪಬಾಶೆಗಳಿಗೆಲ್ಲ ಮೂಲವಾಗುವಂತಹ ಮೂಲ ಕನ್ನಡದಿಂದ ಆದುನಿಕ ಕನ್ನಡದ ಈ ಬೇರೆಬೇರೆ ಪ್ರಬೇದಗಳೂ ಹೇಗೆ ಇಳಿದುಬಂದಿರಬಹುದೆಂಬುದನ್ನು ಈ ಎರಡು ಗಟ್ಟಗಳ ಮೂಲಕ ’ಕಲ್ಪಿಸಿ’ ಹೇಳುವ ಪ್ರಯತ್ನವೇ ಈ ಪುಸ್ತಕ.

ಬಾಶೆಯೊಂದರ ಚರಿತ್ರೆಯನ್ನು ಈ ರೀತಿ ಮೂಲಬಾಶೆಯೊಂದನ್ನು ಕಲ್ಪಿಸಿ ವಿವರಿಸುವ ಕ್ರಮ ಪಾಶ್ಚಾತ್ಯದೇಶಗಳಲ್ಲಿ ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ ಈ ರೀತಿಯ ಸಂಶೋದನೆ ನಡೆದಿರುವುದು ಬಹಳ ಕಡಿಮೆ. ಬರಹದ ಬೇರೆಬೇರೆ ರೂಪಗಳನ್ನು ಮಾತ್ರವೇ ಆದರಿಸಿ ಬಾಶೆಯ ಲಿಕಿತ ಚರಿತ್ರೆಯನ್ನು ಬರೆಯುವುದೇ ಕನ್ನಡದಲ್ಲಿ ಪ್ರಚಲಿತವಾಗಿರುವ ಮುಕ್ಯ ವಿದಾನ. ಈ ಎರಡು ರೀತಿಯ ವಿದಾನಗಳ ಗುಣಾವಗುಣಗಳನ್ನು ಈ ಪುಸ್ತಕದಲ್ಲಿ ವರ‍್ಣಿಸಲಾಗಿದೆ. ಮತ್ತು ಇವೆರಡು ಹೇಗೆ ಒಂದಕ್ಕೊಂದು ಪೂರಕವಾಗಬಲ್ಲುವೆಂಬುದನ್ನು ಸೂಚಿಸಲಾಗಿದೆ.

facebooktwitter