ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ‍್ತವ್ಯವಸ್ತೆ

vakyagala_olarachane_arthavyavasthe

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 639
ಅಚ್ಚು: ಮೊದಲನೇ ಅಚ್ಚು, 1978
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

ಕೊಂಡುಕೊಳ್ಳಿರಿ
munnota           ಕೊಂಡುಕೊಳ್ಳಿರಿ

navakarnataka


 ವಿವರಗಳು

ಮೊದಲಿಗೆ 1978ರಲ್ಲಿ ಪ್ರಕಟವಾಗಿದ್ದ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ‍್ತವ್ಯವಸ್ತೆ ಎಂಬ ಪುಸ್ತಕವನ್ನು ಕೆಲವು ಮಾರ‍್ಪಾಡುಗಳೊಂದಿಗೆ ಇದೀಗ ಕನ್ನಡ ವಾಕ್ಯಗಳ ಒಳರಚನೆ ಮತ್ತು ಅರ‍್ತವ್ಯವಸ್ತೆ ಎಂಬ ಹೆಸರಿನಲ್ಲಿ ಮರುಮುದ್ರಿಸಲಾಗುತ್ತಿದೆ. ಇದರಲ್ಲಿ ಮುಕ್ಯವಾಗಿ ಕನ್ನಡ ವಾಕ್ಯಗಳನ್ನು ಅರ‍್ತಮಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ವಿವರಿಸುವ ಉದ್ದೇಶದಿಂದ ಆ ವಾಕ್ಯಗಳ ಹಿಂದಿರುವ ವ್ಯಾಕರಣ ನಿಯಮಗಳನ್ನು ಪರಿಶೀಲಿಸಲಾಗಿದೆ.

ಸುಮಾರು ಒಂದು ಸಾವಿರ ವರ‍್ಶಗಳಿಂದಲೂ ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳೆಲ್ಲ ಮುಕ್ಯವಾಗಿ ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನಗಳಾಗಿವೆ. ಆದರೆ, ಇಂಡೋ-ಯುರೋಪಿಯನ್ ಎಂಬ ನುಡಿಕುಟುಂಬಕ್ಕೆ ಸೇರಿದ ಸಂಸ್ಕ್ರುತ ನುಡಿಯ ವ್ಯಾಕರಣಕ್ಕೂ ದ್ರವಿಡಿಯನ್ ಎಂಬ ಅದಕ್ಕಿಂತ ತೀರ ಬೇರಾಗಿರುವ ನುಡಿಕುಟುಂಬಕ್ಕೆ ಸೇರಿದ ಕನ್ನಡ ನುಡಿಯ ವ್ಯಾಕರಣಕ್ಕೂ ಅಜಗಜಾಂತರವಿದೆ. ಹಾಗಾಗಿ, ಮೇಲಿನ ಪ್ರಯತ್ನಗಳೆಲ್ಲ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲಿ ಸೋತುಹೋಗಿವೆ.

ಇಂತಹ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ವಿವರಿಸುವ ಮೊದಲ ಪ್ರಯತ್ನ ಈ ಪುಸ್ತಕವಾಗಿದೆ. ಇದನ್ನೇ ಇನ್ನಶ್ಟು ವಿವರವಾಗಿ, ಮತ್ತು ವ್ಯಾಕರಣ ನಿಯಮಗಳಿಗೆ ಹೆಚ್ಚಿನ ಪ್ರಾಮುಕ್ಯತೆಯನ್ನು ಕೊಟ್ಟು ವಿವರಿಸುವ ಪ್ರಯತ್ನವನ್ನು ಕನ್ನಡ ಬರಹದ ಸೊಲ್ಲರಿಮೆ ಎಂಬ ಇನ್ನೊಂದು ಪುಸ್ತಕದಲ್ಲಿ ನಡೆಸಲಾಗುತ್ತಿದೆ. ಅದರ ಆರು ಬಾಗಗಳು ಈಗಾಗಲೇ ಪ್ರಕಟವಾಗಿದ್ದು, ಏಳನೆಯ ಮತ್ತು ಕೊನೆಯ ಬಾಗ ಒಂದೆರಡು ತಿಂಗಳಲ್ಲಿ ಪ್ರಕಟವಾಗಲಿದೆ.

facebooktwitter