ಕನ್ನಡ ವ್ಯಾಕರಣ ಯಾಕೆ ಬೇಕು?

Kannada vykarana yaake beeku (1)

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 260
ಅಚ್ಚು: ಮೊದಲನೇ ಅಚ್ಚು, 2009
ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ  down_arrow

ಕೊಂಡುಕೊಳ್ಳಿರಿ
munnota 
totalkannada
navakarnataka


 

ವಿವರಗಳು

ಕನ್ನಡ ವ್ಯಾಕರಣ (ಸೊಲ್ಲರಿಮೆ) ಎಂಬುದು ಯಾವ ಕೆಲಸಕ್ಕೂ ಬಾರದ ಕಗ್ಗಂಟಲ್ಲ; ಕನ್ನಡದಲ್ಲಿ ಓದಲು-ಬರೆಯಲು ಕಲಿಯುವುದು, ಇಂಗ್ಲಿಶ್‍ನಂತಹ ಬೇರೆ ನುಡಿಗಳನ್ನು ಕಲಿಯುವುದು, ಕನ್ನಡದಿಂದ ಬೇರೊಂದು ನುಡಿಗೆ ಇಲ್ಲವೇ ಬೇರೊಂದು ನುಡಿಯಿಂದ ಕನ್ನಡಕ್ಕೆ ನುಡಿಮಾರುವುದು (ಅನುವಾದಿಸುವುದು) ಮೊದಲಾದ ನುಡಿಗೆ ಸಂಬನಿದಿಸಿದಂತಹ ಹಲವಾರು ಕೆಲಸಗಳನ್ನು ನಡೆಸುವಲ್ಲಿ ಅದು ನೆರವನ್ನು ಕೊಡಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.

ಆದರೆ ಈ ರೀತಿ ನೆರವನ್ನು ಪಡೆಯಬೇಕಿದ್ದಲ್ಲಿ, ನಿಜವಾದ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ನಿಜವಾದ ಕನ್ನಡ ವ್ಯಾಕರಣಗಳಲ್ಲ; ಹಾಗಾಗಿ, ಅವು ಮೇಲಿನ ಕೆಲಸಗಳನ್ನು ನಡೆಸುವಲ್ಲಿ ಯಾವ ನೆರವನ್ನೂ ಕೊಡುವುದಿಲ್ಲ.

ಕನ್ನಡದ ನಿಜವಾದ ವ್ಯಾಕರಣ ಎಂತಹುದು ಎಂಬುದನ್ನು ತಿಳಿಯುವುದರೊಂದಿಗೆ, ಕನ್ನಡಕ್ಕೆ ಸಂಬಂದಿಸಿದಂತಹ ಒಂದೊಂದು ಕೆಲಸಕ್ಕೂ ಆ ತಿಳಿವನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ, ಮತ್ತು ಅಂತಹ ತಿಳಿವನ್ನು ಕೊಡಬಲ್ಲ ಹಲವಾರು ಬಳಕೆಯ ವ್ಯಾಕರಣಗಳನ್ನೂ ಬರೆಯಬೇಕಾಗುತ್ತದೆ. ಇವತ್ತು ಕನ್ನಡದಲ್ಲಿ ಈ ಎರಡು ಬಗೆಯ ಕೆಲಸಗಳನ್ನೂ ನಡೆಸಬೇಕಾಗುತ್ತದೆ.

ಈ ಪುಸ್ತಕವನ್ನು ಬರೆದ ಶಂಕರಬಟ್ಟರು ಇವತ್ತಿನ ಕನ್ನಡ ವ್ಯಾಕರಣಗಳು ನಿಜಕ್ಕೂ ಯಾಕೆ ಕನ್ನಡ ವ್ಯಾಕರಣಗಳಲ್ಲ ಎಂಬುದನ್ನು ವಿವರಿಸುವುದಕ್ಕಾಗಿ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕವನ್ನು ಹತ್ತು ವರ್‍ಶಗಳಶ್ಟು ಹಿಂದೆಯೇ ಬರೆದಿದ್ದರು. ನಿಜಕ್ಕೂ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತೋರಿಸಿಕೊಡುವುದಕ್ಕಾಗಿ ಅವರು ಈಗ ಕನ್ನಡದ ಸೊಲ್ಲರಿಮೆ ಎಂಬ ಪುಸ್ತಕವನ್ನು ಬರೆಯತೊಡಗಿದ್ದಾರೆ. ಅವರಂತಹ ಇನ್ನೂ ಹಲವಾರು ನುಡಿಯರಿಗರು ಈ ಕೆಲಸದಲ್ಲಿ ಇವತ್ತು ತೊಡಗಿಸಿಕೊಳ್ಳಬೇಕಾಗಿದೆ.

 

facebooktwitter