ಡಾ. ಡಿ. ಎನ್. ಶಂಕರ ಬಟ್
ಡಾ.ಡಿ.ಎನ್. ಶಂಕರ ಬಟ್ ಅವರು ಜಗತ್ತಿನ ಹೆಸರಾಂತ ನುಡಿಯರಿಗರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕ್ರುತದಲ್ಲಿ ಎಂ.ಎ. ಮತ್ತು ಪುಣೆ ವಿಶ್ವವಿದ್ಯಾಲದಿಂದ ನುಡಿಯರಿಮೆ(linguistcs)ಯಲ್ಲಿ ಪಿ.ಎಚ್.ಡಿ. ಪಡೆದಿರುವ ಬಟ್ಟರು, ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ.
ಕನ್ನಡ ನುಡಿಯ ಬಗ್ಗೆ ಶಂಕರ ಬಟ್ಟರು ಹಲವು ವರುಶಗಳ ಆಳವಾದ ಅರಕೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಬಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ.
ಕನ್ನಡ ನುಡಿಯರಿಮೆಯ ತಿಳುವಳಿಕೆಯನ್ನು ಬಳಸಿಕೊಂಡು ಶಂಕರ ಬಟ್ಟರು ಮುಂದಿಟ್ಟಿರುವ ’ಎಲ್ಲರ ಕನ್ನಡ’ ಎಂಬ ಬರಹಗನ್ನಡದ ಚವ್ಕಟ್ಟು, ಮುಂಚೂಣಿಯ ಸುದ್ದಿಮಾದ್ಯಮಗಳಲ್ಲಿ ಇಂದು ಚರ್‍ಚೆಯಾಗುತ್ತಿದ್ದು, ನಾಡಿನ ಹಲವಾರು ಚಿಂತಕರು, ನುಡಿಯರಿಗರಲ್ಲದೆ ಸಾಮಾನ್ಯ ಕನ್ನಡಿಗರೂ ಇದರ ಬಗ್ಗೆ ಮೆಚ್ಚುಗೆಯನ್ನು, ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇಂದಿನ ಬರಹಗನ್ನಡವು ಆಡುನುಡಿಯಿಂದ ತುಂಬಾನೇ ದೂರ ಉಳಿದಿದ್ದರಿಂದ ಬರಹವು ಇಂದು ಹಲವು ಕನ್ನಡಿಗರಿಗೆ ಎಟುಕದಂತಾಗಿದೆ. ಈ ತೊಂದರೆಯನ್ನು ನೀಗಿಸಲು ಬರಹಗನ್ನಡವನ್ನು ಆಡುಗನ್ನಡಕ್ಕೆ ಹೆಚ್ಚು ಹೆಚ್ಚು ಹತ್ತಿರವಾಗಿಸುವುದು ಇಂದಿನ ಅಗತ್ಯವೆಂದು ಬಟ್ಟರು ಹೇಳುತ್ತಾರೆ. ಸಂಸ್ಕ್ರುತ ಇಲ್ಲವೇ ಇತರ ಎರವಲು ಪದಗಳೇ ತುಂಬಿರುವ ಇಂದಿನ ಬರಹಗನ್ನಡದಲ್ಲಿ ಹೆಚ್ಚು ಕನ್ನಡದ್ದೇ ಪದಗಳನ್ನು ಬಳಸುವುದು ಮತ್ತು ಕನ್ನಡ ಬರಹಕ್ಕೆ ಬೇಕಿರದ ಮಹಾಪ್ರಾಣ ಅಕ್ಶರಗಳನ್ನು ಕನ್ನಡಕ್ಕೆ ಒಗ್ಗುವಂತೆ ಅಲ್ಪಪ್ರಾಣಗಳನ್ನಾಗಿ ಬರೆಯುವಂತಹ ಕೆಲವು ತಕ್ಕುದಾದ ಲಿಪಿ ಮಾರ್‍ಪಾಡುಗಳನ್ನು ಬಟ್ಟರು ಮುಂದಿಟ್ಟಿದ್ದಾರೆ.
ಇವರ ಮೇಲುಮಟ್ಟದ ನುಡಿಯರಿಮೆಯ ಕೆಲಸವನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯವು ಇವರಿಗೆ ‘ನಾಡೋಜ’ ಪದವಿಯನ್ನು ನೀಡಿದ್ದರೆ, ಕರ್‍ನಾಟಕ ಸರಕಾರವು ಪಂಪ ಪ್ರಶಸ್ತಿಯನ್ನು ನೀಡಿ ಗವ್ರವಿಸಿದೆ. ಈಗ ಶಿವಮೊಗ್ಗ ಜಿಲ್ಲೆಯ ಚಿಕ್ಕ ಹಳ್ಳಿಯೊಂದರಲ್ಲಿ ನೆಲೆಸಿರುವ ಶಂಕರ ಬಟ್ಟರು, ತಮ್ಮ ಎಂಬತ್ತನೆಯ ಹರೆಯದಲ್ಲೂ ನುಡಿಯರಿಮೆಯ ಸುತ್ತ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ.
ಹುಟ್ಟು
15 ಜುಲಯ್ 1935
ಪುತ್ತೂರು, ಕರ್‍ನಾಟಕ, ಬಾರತ
ಕಲಿಕೆ
- ನಾಡೋಜ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2010
- ಇಂಗ್ಲೇಂಡಿನಲ್ಲಿ ಬ್ರಿಟಿಶ್ ಕವ್ನ್ಸಿಲ್ ಪೆಲೋ ಆಗಿ ಒಂದು ವರ್‍ಶ ಒಳನುಡಿ ಸರ್‍ವೇಕ್ಶಣ ವಿದಾನಗಳ ಕಲಿಕೆ, 1966.
- ಪಿ.ಎಚ್.ಡಿ (ನುಡಿಯರಿಮೆ), ಪುಣೆ ವಿಶ್ವವಿದ್ಯಾಲಯ, 1962
- ಎಂ.ಎ. (ಸಂಸ್ಕ್ರುತ), ಮದ್ರಾಸ್ ವಿಶ್ವವಿದ್ಯಾಲಯ, 1960
ಹುದ್ದೆಗಳಲ್ಲಿದ್ದಿದ್ದು
- ಅತಿತಿ ವಿಜ್ನಾನಿ, ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್, ಲಯ್ಪ್ಸಿಗ್, ಜರ್‍ಮನಿ, ಜನವರಿ-ಜುಲಯ್ 2001
- ವಿಸಿಟಿಂಗ್ ಪೆಲೋ, ಸೆಂಟರ್ ಪಾರ್ ಟಯ್ಪೊಲಾಜಿಕಲ್ ಸ್ಟಡೀಸ್, ಲಾ ಟ್ರೋಬೆ ವಿಶ್ವವಿದ್ಯಾಲಯ, ಬಂಡೂರ (ಮೆಲ್ಬರ್‍ನ್), ಆಸ್ಟ್ರೇಲಿಯಾ, ಆಗಸ್ಟ್-ಅಕ್ಟೋಬರ್ 2000
- ವಿಸಿಟಿಂಗ್ ಸ್ಕಾಲರ್, ಆಂಟ್ವೆರ್‍ಪ್ ವಿಶ್ವವಿದ್ಯಾಲಯ, ಬೆಲ್ಜಿಯಂ, ಜುಲಯ್-ಡಿಸೆಂಬರ್ 1997
- ಸಂಶೋದನಾ ವಿಜ್ನಾನಿ, ಯು.ಜಿ.ಸಿ., ಬಾರತೀಯ ಬಾಶಾ ಸಂಸ್ತಾನ, ಮಯ್ಸೂರಿನೊಡನೆ, 1988-95
- ನುಡಿಯರಿಮೆಯ ಪ್ರೊಪೆಸರ್, ಮಣಿಪುರ ವಿಶ್ವವಿದ್ಯಾಲಯ, ಇಂಪಾಲ್, 1985-88
- ನುಡಿಯರಿಮೆಯ ಪ್ರೊಪೆಸರ್, ಅಯ್.ಎಸ್.ಡಿ.ಎಲ್, ತಿರುವನಂತಪುರಂ, 1979-85
- ಟಿಬೆಟೋ-ಬರ್‍ಮನ್ ರೀಡರ್, ಡೆಕನ್ ಕಾಲೇಜು, ಪುಣೆ, 1965-79
- ರಿಸರ್‍ಚ್ ಅಸೋಸಿಯೇಟ್, ಲ್ಯಾಂಗ್ವೇಜ್ ಯುನಿವರ್‍ಸಲ್ಸ್ ಯೋಜನೆ, ಸ್ಟ್ಯಾನ್ಪೋರ್‍ಡ್ ವಿಶ್ವವಿದ್ಯಾಲಯ, ಸ್ಟ್ಯಾನ್ಪೋರ್‍ಡ್, ಯು.ಎಸ್.ಎ., 1973-5
- ಸಂಶೋದನೆ ನೆರವಿಗ, ಮರಾಟಿ ಒಳನುಡಿ ಸರ್‍ವೇಕ್ಶಣ ಯೋಜನೆ, ಡೆಕನ್ ಕಾಲೇಜು, ಪುಣೆ, 1963
ದ್ರಾವಿಡನುಡಿಗಳ ಲೆಕ್ಚರರ್, ಪುಣೆ ವಿಶ್ವವಿದ್ಯಾಲಯ, 1963
ಕೆಲವು ಹೊತ್ತಗೆಗಳು
- ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು, ಡಿ.ಎನ್.ಶಂಕರ ಬಟ್, ಬಿ.ಮಂಚಾಲೆ, ಸಾಗರ, 2017
- ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?, ಡಿ.ಎನ್.ಶಂಕರ ಬಟ್, ಬಿ.ಮಂಚಾಲೆ, ಸಾಗರ, 2017
- ಹವ್ಯಕ-ಕನ್ನಡ, ಡಿ.ಎನ್.ಶಂಕರ ಬಟ್, ಬಿ.ಮಂಚಾಲೆ, ಸಾಗರ, 2017
- ಕನ್ನಡನುಡಿಯ ಹಿನ್ನಡವಳಿ, ಡಿ.ಎನ್.ಶಂಕರ ಬಟ್, ಬಿ.ಮಂಚಾಲೆ, ಸಾಗರ, 2016
- ಕನ್ನಡದ ಸೊಲ್ಲರಿಮೆ, ಡಿ.ಎನ್.ಶಂಕರ ಬಟ್, ಬಿ.ಮಂಚಾಲೆ, ಸಾಗರ, 2016
- ಕನ್ನಡ ವ್ಯಾಕರಣವನ್ನು ಕಲಿಸುವುದು ಹೇಗೆ?, ಸಪ್ನ ಬುಕ್ ಹವ್ಸ್, 2016
- ಇಂಗ್ಲಿಶ್-ಕನ್ನಡ ಪದನೆರಕೆ, ಡಿ.ಎನ್.ಶಂಕರ ಬಟ್, ಬೀಮನ ಕೋಣೆ, ಸಾಗರ, 2015
- ಕನ್ನಡ ಬರಹದ ಸೊಲ್ಲರಿಮೆ – ೫, ಡಿ.ಎನ್.ಶಂಕರ ಬಟ್, ಹೆಗ್ಗೋಡು, ಸಾಗರ, 2015
- ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ, ಡಿ.ಎನ್.ಶಂಕರ ಬಟ್, ಮುಂಗರವಳ್ಳಿ, ಸಾಗರ, 2014
- ಕನ್ನಡ ಬರಹದ ಸೊಲ್ಲರಿಮೆ – ೪, ಡಿ.ಎನ್.ಶಂಕರ ಬಟ್, ಹೆಗ್ಗೋಡು, ಸಾಗರ, 2013
- ಕನ್ನಡ ಬರಹದ ಸೊಲ್ಲರಿಮೆ – ೩, ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ, 2012
- ಕನ್ನಡ ಬರಹದ ಸೊಲ್ಲರಿಮೆ – ೨, ಬಾಶಾ ಪ್ರಕಾಶನ, ಹುಂಚ, ಹೊಸನಗರ, 2011
- ಮಾತು ಮತ್ತು ಬರಹದ ನಡುವಿನ ಗೊಂದಲ, ಬಾಶಾ ಪ್ರಕಾಶನ, ಆರಗ, ತೀರ‍್ತಹಳ್ಳಿ, 2011
- ಕನ್ನಡ ಬರಹದ ಸೊಲ್ಲರಿಮೆ – ೧, ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ, 2010
- ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, ಬಾಶಾ ಪ್ರಕಾಶನ, ಹೆಗ್ಗೋಡು, 2009
- ಮಾತಿನ ಒಳಗುಟ್ಟು, ಬಾಶಾ ಪ್ರಕಾಶನ, ಹೆಗ್ಗೋಡು, 2009
- ಕನ್ನಡ ನುಡಿ ನಡೆದು ಬಂದ ದಾರಿ, ಬಾಶಾ ಪ್ರಕಾಶನ, ಹೆಗ್ಗೋಡು, 2007
- ಕನ್ನಡ ಬರಹವನ್ನು ಸರಿಪಡಿಸೋಣ, ಬಾಶಾ ಪ್ರಕಾಶನ, ಮಯ್ಸೂರು, 2005
- ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?, ಬಾಶಾ ಪ್ರಕಾಶನ, ಮಯ್ಸೂರು, 2005
- Pronouns: A Cross Linguistic Study, Oxford, Oxford University Press, 2004
- ಕನ್ನಡ ವಾಕ್ಯಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, 2004
- ಕನ್ನಡ ಸರ್‍ವನಾಮಗಳು, ಬಾಶಾ ಪ್ರಕಾಶನ, ಮಯ್ಸೂರು, 2003
- ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಬಾಶಾ ಪ್ರಕಾಶನ, ಮಯ್ಸೂರು, 2000
- Introducing grammatical notions, University of Pune, Pune, 2000
- The prominence of tense, aspect and Mood: a new basis for language typology, John Benjamins, Amsterdam, 1999.
- ಕನ್ನಡ ಶಬ್ದರಚನೆ, ಕ್ರಯ್ಸ್ತ ಕಾಲೇಜು, ಕನ್ನಡ ಸಂಗ, ಬೆಂಗಳೂರು, 1999. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, 2002.
- Manipuri grammar (written jointly with M.S. Ningomba), Lincom Europa, Munich, 1997
- The adjectival category, John Benjamins, Amsterdam, 1994
- Grammatical relations, Routledge, London, 1991. Reprinted by Bejing World Publishers, Bejing in 1992.
- An introduction to linguistics, Teachers’ Forum, Imphal. 1986
- Identification, Dravidian Linguistics Association, Trivandrum, 1981
- Referents of noun phrases, Deccan College, Pune, 1979
- ಕನ್ನಡ ವಾಕ್ಯಗಳು, ಗೀತಾ ಬುಕ್ ಹವ್ಸ್, ಮಯ್ಸೂರು, 1978
- Pronominalization, Deccan College, Pune, 1978
- Sound change, Bhasha Prakashan, Pune, 1972, Revised edition, published by Motilal Banarsidass, New Delhi, 1999.
- The Koraga language, Deccan College, Pune, 1971
- Outline grammar of Havyaka, Deccan College, Pune, 1971
- ಬಾಶೆಯ ಬಗೆಗೆ ನೀವೇನು ಬಲ್ಲಿರಿ?, ಬಾಶಾ ಪ್ರಕಾಶನ, ಪುಣ, 1970, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಗ, ಪುತ್ತೂರು, 1998; ತಿದ್ದಿದ ಮೂರನೆ ಒಬ್ಬೆ: ಬಾಶಾ ಪ್ರಕಾಶನ, 2002.
- ಕನ್ನಡ ಬಾಶೆಯ ಸಂಕ್ಶಿಪ್ತ ಚರಿತ್ರೆ, ಬಾಶಾ ಪ್ರಕಾಶನ, ಪುಣೆ, 1970; ತಿದ್ದಿದ ಒಬ್ಬೆ: ಕನ್ನಡ ಬಾಶೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1995.
- Tankhur Naga vocabulary, Deccan College, Pune, 1969
- Boro grammar and vocabulary, Deccan College, Pune, 1968
- Descriptive analysis of Tulu, Deccan College, Pune, 1967.
ಅರಿಮೆಯ ಪೇಪರುಗಳು (ಸುಮಾರು 150ರಲ್ಲಿ ಆಯ್ದ ಕೆಲವು)
- “The Indefinite-interrogative puzzle”, Linguistic Typology, 4, 2000.
- “Lexical suppletion in baby talk”, Anthropological Linguistics 1962-3
- “Adjectives”. (Jointly with R. Pustet). Handbücher zur Sprach- und Kommunikationswissenschaft: Morphology. Mouton de Gruyter, Berlin.2000
“Havyaka Kannada: Modality and negation” (jointly with van der Auwera, J.) Indian Linguistics, 2000. - “Functional constraints on word-formation rules”. The yearbook of South Asian languages and linguistics, 2000. New Delhi: Sage
- Review article on Stassen, L. 1997, Intransitive predication, and Wetzer, H. 1996, The typology of adjectival predication. Linguistic Typology, 3.1, 1999
- “Word classes and sentential functions”. In Comrie, B., and Vogel, P.M. (eds.), An anthology of word classes, Mouton de Gruyter, Berlin, 1999
- “Indefinite pronouns in Kannada”. In The life of Language: Papers in Linguistics in honor of W.Bright, 369-83. Berlin: Mouton de Gruyter, 1998.
- “Tulu”. In Steever, S. (ed.), The Dravidian Languages, (158-177), Routledge, London, 1997.
- “Need for a dualistic theory of language”, IJDL 14, 1985
- “Word and its meaning in the Indian Grammatical Tradition”, IJDL 14, 1985
- “Physical identification in Kannada”, Studies in Linguistic Sciences 11, 1982
- “A general study of palatalization”, in Greenberg et al (eds.) Universals of Human Language, Stanford University Press, Stanford, 1978
- “Multiple case roles”, Lingua 42, 1977
- “Ambiguity in negative sentences”, Glossa 11, 1977
- “Dichotomy in phonological change”, Lingua 39, 1976
- “A semantic constraint on neg-raising rule”, Papers in Linguistics 8, 1975
- “The basis of comparative method”, Language Sciences 35, 1975
- “Two studies on nasalization”, Nasalfest 1975
- “Retroflection and retraction”, Journal of Phonetics 2, 1975
- “The Phonology of liquid consonants”, Working Papers in Language Universals 16, 73-104.
- “Kudux indicatives”, Indo-Iranian Journal 12, 1970
- “Age grading and sound change”, Word 26, 1970
- “Is sound change gradual?”, Linguistics 40, 1968
- “The rate of language change”, Linguistics 39, 1968.