ಬಾಶೆಯ ಬಗೆಗೆ ನೀವೇನು ಬಲ್ಲಿರಿ?

Bhaashe

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 208
ಅಚ್ಚು: ತಿದ್ದಿ ದೊಡ್ಡದು ಮಾಡಿರುವ ನಾಲ್ಕನೇ ಮುದ್ರಣ, 2010
ಹೊರಪಡಿಸುಗರು: ಬಾಶಾ ಪ್ರಕಾಶನ
ಕೆಳಗಿಳಿಸಿಕೊಳ್ಳಿ  down_arrow

ಕೊಂಡುಕೊಳ್ಳಿರಿ
munnota
totalkannada
navakarnataka


 

ವಿವರಗಳು

ಕಣ್ಣುಗಳೆರಡು ನಮ್ಮ ಮೂಗಿನ ತುದಿಯಲ್ಲೇ ಇವೆಯಾದರೂ ಅವು ನೋಯತೊಡಗಿದುವೆಂದರೆ ನಾವು ಸೀದಾ ಡಾಕ್ಟರಲ್ಲಿಗೆ ಓಡುತ್ತೇವೆ. ನಮ್ಮ ವಶದಲ್ಲೇ ಇವೆಯಾದರೂ ಅವುಗಳ ಒಳಗುಟ್ಟು ನಮಗೆ ತಿಳಿದಿಲ್ಲ. ನಮ್ಮ ನಾಲಗೆಯ ತುದಿಯಲ್ಲೇ ಕುಣಿಯುವ ಬಾಶೆಯೂ ಇಂತಹದೇ. ಬೇಕಾದಂತೆ ಅದನ್ನು ನಾವು ಬಳಸಬಲ್ಲೆವು. ಆದರೆ ಅದರ ಒಳಗುಟ್ಟು ಮಾತ್ರ ನಮಗೆ ತಿಳಿಯದು.

ಆದರೆ, ಕಣ್ಣಿನ ನೋವಿನ ಹಾಗೆ ಬಾಶೆಯ ನೋವು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಹಿಂಸಿಸುವುದಿಲ್ಲ. ಅದರ ತೊಂದರೆಯನ್ನು ಇಡೀ ಸಮಾಜವೇ ಒಟ್ಟಾಗಿ ಅನುಬವಿಸುತ್ತದೆ. ಇದಕ್ಕಾಗಿಯೋ ಏನೋ, ಬಾಶಾ ಸಮಸ್ಯೆಯನ್ನು ಪರಿಹರಿಸಲು ಯಾರೂ ಬಾಶಾ ಪಂಡಿತರಲ್ಲಿಗೆ ಓಡುವುದಿಲ್ಲ. ಆದರೆ, ಇದರಿಂದಾಗುವ ಅನಾಹುತಗಳು ಮಾತ್ರ ಹಲವು. ಲಿಪಿಯ ಹೆಸರಿನಲ್ಲಿ (ಇತ್ತೀಚೆಗಿನ ಋಕಾರದ ಸಮಸ್ಯೆ), ಬಾಶಾ ಮಾದ್ಯಮದ ವಿಶಯದಲ್ಲಿ, ವ್ಯಾಕರಣದ ವಿಶಯದಲ್ಲಿ ನಾವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಹಲವಿವೆ ಎಂಬುದನ್ನು ಈ ಪುಸ್ತಕ ತೋರಿಸಿ ಕೊಡುತ್ತದೆ. ಇಂತಹ ವಿಶಯಗಳಿಗೆ ಸಂಬಂದಿಸಿದಂತೆ ನಮ್ಮ ಸಮಾಜದಲ್ಲಿ ಬೇರೆ ಬೇರೆ ನಿರ್‍ದಾರಗಳನ್ನು ಮಾಡುವವರು ಅವಶ್ಯವಾಗಿಯೂ ತಿಳಿದಿರಬೇಕಾದ ವಿಶಯಗಳಿವು.

 

facebooktwitter