ಮಾತಿನ ಒಳಗುಟ್ಟು

ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 130
ಅಚ್ಚು: ಎರಡನೇ ಅಚ್ಚು, 2013
ಹೊರಪಡಿಕೆ: ಬಾಶಾ ಪ್ರಕಾಶನ
ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ down_arrow

ಕೊಂಡುಕೊಳ್ಳಿರಿ
munnota 
totalkannada
navakarnataka


 

ವಿವರಗಳು

ಮಾತಿನ ಬಗ್ಗೆ ಏನೇ ಹೇಳುವುದಿದ್ದರೂ ಅದರ ಒಳಗುಟ್ಟನ್ನು ಅರಿಯುವುದು ಅಗತ್ಯ ಎಂಬುದನ್ನು ಈ ಪುಸ್ತಕ ತೋರಿಸಿಕೊಡುತ್ತದೆ. ನಮ್ಮ ನಾಲಿಗೆಯ ತುದಿಯಲ್ಲೇ ಕುಣಿಯುತ್ತಿದೆಯಾದರೂ ಕಣ್ಣು, ಕಿವಿ ಮೊದಲಾದವುಗಳ ಹಾಗೆ ನಮ್ಮ ಮಾತೂ ತುಂಬಾ ಸಂಕೀರ್‍ಣವಾದುದು. ಅದರ ಕುರಿತಾಗಿ ಎಶ್ಟು ಕಲಿತರೂ, ಎಶ್ಟು ಸಂಶೋದನೆ ನಡೆಸಿದರೂ ನಮಗೆ ಅದು ಪೂರ್‍ತಿ ಅರ್‍ತವಾಗಿದೆಯೆಂದು ಹೇಳುವ ಎದೆಗಾರಿಕೆ ಇವತ್ತು ಯಾರಿಗೂ ಇಲ್ಲ.

ಹೀಗಿದ್ದರೂ ಮಾತಿನ ಕುರಿತಾಗಿ ಇವತ್ತು ನಾವು ಪಡೆದುಕೊಂಡಿರುವ ತಿಳಿವಳಿಕೆಯನ್ನು ಆದಶ್ಟು ಮಟ್ಟಿಗೆ ಬಳಸಿಕೊಳ್ಳುವುದು ಅವಶ್ಯ. ಅದು ಎಂತಹುದು ಎಂಬುದನ್ನು ಈ ಪುಸ್ತಕದಲ್ಲಿ ಚುಟುಕಾಗಿ ವಿವರಿಸಲಾಗಿದೆ. ಮಾತಿನ ಕುರಿತು ನುಡಿಗಳ ಕುರಿತು, ಓದು-ಬರಹದ ಕುರಿತು ನಮ್ಮಲ್ಲಿ ಹಲವಾರು ಅನಿಸಿಕೆಗಳಿವೆ. ಇವುಗಳಲ್ಲಿ ಹಲವು ಸರಿಯಿಲ್ಲ ಎಂಬುದನ್ನು ಈ ತಿಳಿವಳಿಕೆಯ ಆದಾರದ ಮೇಲೆ ಹೇಳಲು ಸಾದ್ಯವಿದೆ.

ಉದಾಹರಣೆಗಾಗಿ ಮಕ್ಕಳಿಗೆ ಇಂಗ್ಲಿಶ್ ಚೆನ್ನಾಗಿ ಬರಬೇಕೆಂಬುದು ಅವರನ್ನು ತಾಯಿನುಡಿಯಿಂದ ದೂರಮಾಡಿದರೆ ಇಲ್ಲವೇ ತಾಯಿನುಡಿಯ ಮೇಲೆ ಅವರಿಗೆ ಕೀಳರಿಮೆಯುಂತಾಗುವ ಹಾಗೆ ಮಾಡಿದರೆ, ಅವರಿಂದ ಮಾತಿನ ಬುಡಕಟ್ಟನ್ನೇ ಕಿತ್ತುಕೊಂಡ ಹಾಗಾಗುತ್ತದೆ. ನಿಜಕ್ಕೂ ಎರಡು ಇಲ್ಲವೇ ಹೆಚ್ಚು ನುಡಿಗಳನ್ನು ಕಲಿತ ಮಕ್ಕಳು ಒಂದೇ ನುಡಿ ಕಲಿತವರಿಗಿಂತ ಹಲವು ವಿಶಯಗಳಲ್ಲಿ ಮುಂದಿರುವುದು ಕಂಡುಬಂದಿದೆ.

ಇದನ್ನು ತಿಳಿಯದಿರುವ ಹಲವು ಮಂದಿ ಕನ್ನಡಿಗರು ಇಂಗ್ಲಿಶ್ ನುಡಿಯ ಮೇಲಿರುವ ಮೋಹದಿಂದಾಗಿ ಇವತ್ತು ತಮ್ಮ ಮಕ್ಕಳನ್ನು ಅವರ ತಾಯಿನುಡಿಯಿಂದ ದೂರಮಾಡುತ್ತಿದ್ದಾರೆ ಮತ್ತು ಆ ಮೂಲಕ ಅವರ ಬುದ್ದಿಶಕ್ತಿಯನ್ನೇ ಹಾಳುಗೆಡವುತ್ತಿದ್ದಾರೆ.

 

facebooktwitter