Archive of ‘ನುಡಿಯರಿಮೆ’ category
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-15
(ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು)
ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು
ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಪರಿಚೆಪದವಾಗಿರುತ್ತದೆ; ಮೊದಲನೆಯ ಪದ ಹೆಸರುಪದವಾಗಿರಬಹುದು (sugar-free, blood-red), ಇಲ್ಲವೇ ಪರಿಚೆಪದವಾಗಿರಬಹುದು (icy cold, bluish-green). ಎರಡನೆಯದಾಗಿ ಬರುವ ಪರಿಚೆಪದವನ್ನು ಹೆಸರುಪದಕ್ಕೆ ಇಲ್ಲವೇ ಎಸಕಪದಕ್ಕೆ ಒಟ್ಟನ್ನು ಸೇರಿಸಿ ಪಡೆದಿರಲೂ ಬರುತ್ತದೆ (blue-eyed, clear-sighted).
ಇಂತಹ ಇಂಗ್ಲಿಶ್ ಜೋಡುಪದಗಳಲ್ಲಿ ಮೊದಲನೆಯ ಪದವಾಗಿ ಹೆಸರುಪದ ಬಂದಿರುವವೇ ಹೆಚ್ಚು ಬಳಕೆಯಲ್ಲಿವೆ. ಈ ಹೆಸರುಪದಕ್ಕೆ ಪರಿಚೆಪದದ ಒಂದು ಪಾಂಗನ್ನು ತಿಳಿಸುವ ಕೆಲಸ ಇರಬಲ್ಲುದು; ಎತ್ತುಗೆಗಾಗಿ, sugar-free ಎಂಬುದರಲ್ಲಿ ಬಂದಿರುವ sugar ಎಂಬ ಹೆಸರುಪದ free ಎಂಬುದರ ಒಂದು ಪಾಂಗಾಗಿದೆ (free of sugar).
ಮೊದಲನೆಯ ಪದಕ್ಕೆ ಎರಡನೆಯ ಪದ ತಿಳಿಸುವ ಪರಿಚೆಯನ್ನು ಕಡುಮೆಗೊಳಿಸುವ (intensifying) ಕೆಲಸವೂ ಇರಬಲ್ಲುದು; ಎತ್ತುಗೆಗಾಗಿ, dog-tired ಎಂಬುದರಲ್ಲಿ ಬಂದಿರುವ dog ಎಂಬ ಹೆಸರುಪದಕ್ಕೆ tired ಎಂಬ ಪರಿಚೆಪದ ತಿಳಿಸುವ ಪರಿಚೆಯನ್ನು ಕಡುಮೆಗೊಳಿಸುವ ಕೆಲಸ ಇದೆ; ಯಾಕೆಂದರೆ, ಈ ಜೋಡುಪದಕ್ಕೆ very tired ಎಂಬ ಹುರುಳಿದೆ.
ಇಂತಹ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಎರಡು ಬಗೆಯ ಹೊಲಬುಗಳನ್ನು ಬಳಸಲು ಬರುತ್ತದೆ: ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆರೂಪವನ್ನು ಬಳಸುವುದು ಒಂದು ಹೊಲಬು, ಮತ್ತು ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪವನ್ನು ಬಳಸುವುದು ಇನ್ನೊಂದು ಹೊಲಬು:
(1) ಜೋಡುಪದಗಳ ಪತ್ತುಗೆರೂಪದ ಬಳಕೆ:
ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆರೂಪವನ್ನು ಕನ್ನಡದಲ್ಲಿ ಪರಿಚೆಪದಗಳ ಜಾಗದಲ್ಲಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ನೋವಳಿಕ ಎಂಬ ಜೋಡುಪದದ ಪತ್ತುಗೆರೂಪವನ್ನು ನೋವಳಿಕದ ತೊಡಕುಗಳು ಎಂಬಲ್ಲಿ ಒಂದು ಪರಿಚೆಪದದ ಜಾಗದಲ್ಲಿ ಬಳಸಲಾಗಿದೆ. ಇಂಗ್ಲಿಶ್ನಲ್ಲಿ ಪರಿಚೆಪದಗಳಾಗಿ ಬರುವ ಹಲವು ಜೋಡುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಇಂತಹ ಪತ್ತುಗೆರೂಪಗಳನ್ನು ಬಳಸಲು ಬರುತ್ತದೆ:
near-sighted |
ಸಾರೆನೋಟದ |
|
out-spoken |
ಬಿಚ್ಚುಮಾತಿನ |
open-hearted |
ಬಿಚ್ಚೆದೆಯ |
|
photo-electric |
ಬೆಳಕುಮಿಂಚಿನ |
quadrilateral |
ನಾಲ್ಬದಿಯ |
|
girl-crazy |
ಹುಡುಗಿಹುಚ್ಚಿನ |
equi-distant |
ಸರಿದೂರದ |
|
multilingual |
ಹಲನುಡಿಯ |
new-born |
ಹೊಸಹುಟ್ಟಿನ |
|
clear-sighted |
ತಿಳಿಕಾಣ್ಮೆಯ |
self-imposed |
ತನ್ಪೇರ್ಕೆಯ |
|
self-addressed |
ತನ್ನೊಕ್ಕಣಿಕೆಯ |
green-eyed |
ಹಸುರುಕಣ್ಣಿನ |
|
home-made |
ಮನೆಮಾಳ್ಕೆಯ |
(2) ಕೂಡುಪದದ ಪರಿಚೆರೂಪಗಳ ಬಳಕೆ:
ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪಗಳನ್ನೂ ಕನ್ನಡದಲ್ಲಿ ಪರಿಚೆಪದಗಳ ಜಾಗದಲ್ಲಿ ಬಳಸಲು ಬರುತ್ತದೆ; ಕೂಡುಪದಗಳಿಗೆ ಹಿಂಬೊತ್ತಿನ ರೂಪ (ಹೊರಬಿದ್ದ), ಮುಂಬೊತ್ತಿನ ರೂಪ (ಹೊರಬೀಳುವ), ಮತ್ತು ಅಲ್ಲಗಳೆಯುವ ರೂಪ (ಹೊರಬೀಳದ) ಎಂಬುದಾಗಿ ಮೂರು ಬಗೆಯ ಪರಿಚೆರೂಪಗಳಿವೆ.
ಇವುಗಳಲ್ಲಿ ಹಿಂಬೊತ್ತಿನ ರೂಪ ಒಂದು ಎಸಕ ನಡೆದುದರಿಂದಾಗಿ ಉಂಟಾದ ಪರಿಚೆಯನ್ನು ತಿಳಿಸುತ್ತದೆ; ಮುಂಬೊತ್ತಿನ ರೂಪ ಬಳಕೆಯಲ್ಲಿರುವ ಒಂದು ಎಸಕದಿಂದ ದೊರೆಯುವ ಪರಿಚೆಯನ್ನು ತಿಳಿಸುತ್ತದೆ; ಮತ್ತು ಅಲ್ಲಗಳೆಯುವ ರೂಪ ಒಂದು ಎಸಕ ನಡೆಯದುದರಿಂದಾಗಿ ಉಂಟಾಗುವ ಪರಿಚೆಯನ್ನು ತಿಳಿಸುತ್ತದೆ. ಈ ಮೂರನ್ನೂ ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗುವ ಹಾಗೆ ಬಳಸಲು ಬರುತ್ತದೆ:
(1) ಹಿಂಬೊತ್ತಿನ ಪರಿಚೆರೂಪದ ಬಳಕೆ:
misguided |
ಹಾದಿತಪ್ಪಿದ |
|
man-made |
ಆಳುಮಾಡಿದ |
handicapped |
ಬಳಕೆಗುಂದಿದ |
|
tongue-tied |
ಮಾತುಕಟ್ಟಿದ |
well-known |
ಹೆಸರಾದ |
|
ultrasonic |
ಕೇಳ್ಮೆಮೀರಿದ |
(2) ಮುಂಬೊತ್ತಿನ ಪರಿಚೆರೂಪದ ಬಳಕೆ:
air-tight |
ಗಾಳಿತಡೆವ |
|
long-lasting |
ನಿಡುಬಾಳುವ |
outgoing |
ಹೊರಹೋಗುವ |
|
hair-raising |
ನವಿರೇಳಿಸುವ |
rain-proof |
ಮಳೆತಡೆವ |
|
man-eating |
ಆಳ್ತಿನ್ನುವ |
mouth-watering |
ನೀರೂರಿಸುವ |
|
time-saving |
ಹೊತ್ತುಳಿಸುವ |
(3) ಅಲ್ಲಗಳೆಯುವ ಪರಿಚೆರೂಪದ ಬಳಕೆ:
outstanding |
ತೀರುವೆಯಾಗದ |
|
sugar-free |
ಸಕ್ಕರೆಹಾಕದ |
stiff-necked |
ಬಿಟ್ಟುಕೊಡದ |
|
tight-fisted |
ಕಾಸುಬಿಚ್ಚದ |
smoke-free |
ಹೊಗೆಯಿಲ್ಲದ |
|
everlasting |
ಕೊನೆಯಿಲ್ಲದ |
ಇಂಗ್ಲಿಶ್ನಲ್ಲಿ ಬಳಕೆಯಲ್ಲಿರುವ ಇಂತಹ ಹಲವು ಪರಿಚೆಪದಗಳಾಗಿ ಬರುವ ಜೋಡುಪದಗಳಿಗೆ ಹೆಸರುಪದಗಳಾಗಿ ಇಲ್ಲವೇ ಎಸಕಪದಗಳಾಗಿ ಬರಬಲ್ಲ ರೂಪಗಳಿಲ್ಲ. ಆದರೆ ಇವಕ್ಕೆ, ಇಲ್ಲವೇ ಬೇರೆ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಕನ್ನಡದ ಪರಿಚೆರೂಪಗಳಿಗೆ ಹೆಸರುಪದಗಳಾಗಿ ಇಲ್ಲವೇ ಎಸಕಪದಗಳಾಗಿ ಬರಬಲ್ಲ ರೂಪಗಳೂ ಇವೆ; ಕನ್ನಡದಲ್ಲಿ ಇವು ಬೇರೆ ಪದಗಳಾಗಿರದೆ ಪದರೂಪಗಳಾಗಿರುವುದೇ ಇದಕ್ಕೆ ಕಾರಣ.
ಎರವಲು ಪದಗಳಿರುವ ಇಂಗ್ಲಿಶ್ ಜೋಡುಪದಗಳು
ಗ್ರೀಕ್ ಇಲ್ಲವೇ ಲ್ಯಾಟಿನ್ನಿಂದ ಎರವಲು ಪಡೆದ ಕೆಲವು ಬೇರುಗಳನ್ನು ಬಳಸಿ ಇಂಗ್ಲಿಶ್ನಲ್ಲಿ ಹಲವು ಜೋಡುಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆ; ಇವನ್ನು neo-classical ಜೋಡುಪದಗಳೆಂದು ಕರೆಯಲಾಗುತ್ತದೆ; ಇವಕ್ಕೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಪಡೆಯಲು ಅಂತಹ ಹುರುಳುಗಳನ್ನು ಕೊಡಬಲ್ಲ ಪದಗಳನ್ನು ಇಲ್ಲವೇ ಬೇರುಗಳನ್ನು ಕನ್ನಡದಲ್ಲಿಯೂ ಬಳಸಲು ಬರುತ್ತದೆ. ಇಂತಹ ಪದ ಇಲ್ಲವೇ ಬೇರುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ.
(ಕ) ಜೋಡುಪದಗಳಲ್ಲಿ ಮೊದಲಿಗೆ ಬರುವ ಎರವಲು ಪದಗಳು ಇಲ್ಲವೇ ಬೇರುಗಳು:
(1) astro ಬಾನ್
astronomy |
ಬಾನರಿಮೆ |
|
astrophysics |
ಬಾನ್ಪುರುಳರಿಮೆ |
astronaut |
ಬಾನ್ದಾರಿಗ |
|
astrobiology |
ಬಾನುಸಿರರಿಮೆ |
astrolaw |
ಬಾನ್ಕಟ್ಟಳೆ |
|
astroscope |
ಬಾನ್ತೋರ್ಪುಕ |
astroblast |
ಬಾನ್ಸಿಡಿತ |
|
astrography |
ಬಾನರಿಮೆ |
(2) bio ಉಸಿರು
biomass |
ಉಸಿರಿಟ್ಟಣ |
|
biomimatics |
ಉಸಿರಿಯಣಕ |
biobattery |
ಉಸಿರಿಮಿನ್ನೆರಕ |
|
biochip |
ಉಸಿರಿಕೆತ್ತೆ |
biodevice |
ಉಸಿರಿಚೂಟಿ |
|
biodigest |
ಉಸಿರಿಯರಗುಕ |
biofilter |
ಉಸಿರಿಸೋಸುಕ |
|
biofabric |
ಉಸಿರಿಬಟ್ಟೆ |
(3) electro ಮಿನ್
electromagnetic |
ಮಿನ್ಸೆಳೆತದ |
|
electrocute |
ಮಿನ್ಸಾಯಿಸು |
electrolysis |
ಮಿನ್ತೆಗೆತ |
|
electrolyte |
ಮಿನ್ನೀರು |
electroplate |
ಮಿನ್ಬಳಿ |
|
electroscope |
ಮಿನ್ತೋರ್ಪುಕ |
(4) geo ಮಣ್ಣು, ನೆಲ, ಗೆರೆ
geology |
ಮಣ್ಣರಿಮೆ |
|
geography |
ನೆಲದರಿಮೆ |
geodesy |
ನೆಲಪರಿಜರಿಮೆ |
|
geometry |
ಗೆರೆಯರಿಮೆ |
geophysics |
ನೆಲಪುರುಳರಿಮೆ |
|
geopolitical |
ನೆಲಾಳ್ವಿಕೆಯ |
(5) hydro ನೀರ್
hydrophobia |
ನೀರಂಜಿಕೆ |
|
hydrology |
ನೀರರಿಮೆ |
hydrography |
ನೀರ್ತಿಟ್ಟದರಿಮೆ |
|
hydrolysis |
ನೀರೊಡೆತ |
hydrometer |
ನೀರಳಕ |
|
hydropathy |
ನೀರ್ಮಾಂಜುಗೆ |
(6) retro ಹಿನ್
retrogression |
ಹಿನ್ನಡೆತ |
|
retrograde |
ಹಿಮ್ಮೆಟ್ಟುವ |
retrospect |
ಹಿನ್ನೋಟ |
|
retrovirus |
ಹಿನ್ನಂಜುತುಣುಕು |
retrovert |
ಹಿನ್ನೋಡು |
|
retrorse |
ಹಿಂಬಾಗಿದ |
(7) tele ಗೆಂಟು
telescope |
ಗೆಂಟುತೋರ್ಪುಕ |
|
telephone |
ಗೆಂಟುಮಾತು |
television |
ಗೆಂಟುಕಾಣ್ಕೆ |
|
televise |
ಗೆಂಟುಕಾಣಿಸು |
telekinesis |
ಗೆಂಟುಕದಲಿಕೆ |
|
teleprinter |
ಗೆಂಟಚ್ಚುಕ |
(ಚ) ಜೋಡುಪದಗಳಲ್ಲಿ ಕೊನೆಗೆ (ಎರಡನೆಯ ಪದವಾಗಿ) ಬರುವ ಎರವಲು ಪದ ಇಲ್ಲವೇ ಬೇರುಗಳು:
(1) cide ಕೊಲೆ, ಅಳಿಕ
regicide |
ಅರಸುಕೊಲೆ |
|
patricide |
ತಂದೆಕೊಲೆ |
matricide |
ತಾಯಿಕೊಲೆ |
|
infenticide |
ಹಸುಳೆಕೊಲೆ |
insecticide |
ಪೂಚಿಯಳಿಕ |
|
pesticide |
ಕೇಡಳಿಕ |
(2) cracy ಆಳ್ವಿಕೆ
meritocracy |
ಸಯ್ಪಾಳ್ವಿಕೆ |
|
democracy |
ಮಂದಿಯಾಳ್ವಿಕೆ |
aristocracy |
ಅರಸಾಳ್ವಿಕೆ |
|
stratocracy |
ಪಡೆಯಾಳ್ವಿಕೆ |
androcracy |
ಗಂಡಾಳ್ವಿಕೆ |
|
gynocracy |
ಹೆಣ್ಣಾಳ್ವಿಕೆ |
kleptocracy |
ಕಳ್ಳಾಳ್ವಿಕೆ |
|
dulocracy |
ತೊತ್ತಾಳ್ವಿಕೆ |
argentocracy |
ಹಣದಾಳ್ವಿಕೆ |
|
foolocracy |
ಹೆಡ್ಡಾಳ್ವಿಕೆ |
(3) graphy ಬರಹ, ಅರಿಮೆ
stenography |
ಬಿರುಸುಬರಹ |
|
sonography |
ಉಲಿಬರಹ |
geography |
ನೆಲದರಿಮೆ |
|
orthography |
ಬರಿಗೆಯರಿಮೆ |
oceanography |
ಕಡಲರಿಮೆ |
|
paleography |
ಹಳೆಬರಹದರಿಮೆ |
metallography |
ಪೊನ್ನರಿಮೆ |
|
lexicography |
ಪದನೆರಕೆಯರಿಮೆ |
(4) itis ಕುತ್ತ
meningitis |
ಮಿದುಳುಪರೆಕುತ್ತ |
|
laryngitis |
ಗಂಟಲಗೂಡುಕುತ್ತ |
appendicitis |
ಕರುಳುಬಾಲಕುತ್ತ |
|
placentitis |
ಮಾಸುಕುತ್ತ |
(5) logy ಅರಿಮೆ
physiology |
ಉಸಿರಿಯರಿಮೆ |
|
ethnology |
ನಾಡರಿಮೆ |
gynecology |
ಹೆಣ್ಣೊಡಲರಿಮೆ |
|
musicology |
ಹಾಡಿಕೆಯರಿಮೆ |
oncology |
ಬಾವರಿಮೆ |
|
mycology |
ಕಸವುಸಿರಿಯರಿಮೆ |
geology |
ಮಣ್ಣರಿಮೆ |
|
archeology |
ಪಳಮೆಯರಿಮೆ |
pathology |
ಕುತ್ತದರಿಮೆ |
|
psephology |
ಆಯ್ಕಳಿಯರಿಮೆ |
entomology |
ಪೂಚಿಯರಿಮೆ |
|
hematology |
ನೆತ್ತರರಿಮೆ |
(6) morph ಪರಿಜು
allomorph |
ಒಳಪರಿಜು |
|
bimorph |
ಇಪ್ಪರಿಜು |
endomorph |
ಕೊನೆಪರಿಜು |
|
isomorph |
ಒಂಟಿಪರಿಜು |
polymorph |
ಹಲಪರಿಜು |
|
trymorph |
ಮೂಪರಿಜು |
(7) phile ಒಲವಿಗ
oenophile |
ಈಡೊಲವಿಗ |
|
acidophile |
ಹುಳಿಯೊಲವಿಗ |
Anglophile |
ಇಂಗ್ಲಿಶೊಲವಿಗ |
|
Sinophile |
ಚೀನಿಯೊಲವಿಗ |
dogophile |
ನಾಯಿಯೊಲವಿಗ |
|
foodophile |
ತಿನಿಸೊಲವಿಗ |
(8) scope ತೋರ್ಪುಕ
microscope |
ಸೀರುತೋರ್ಪುಕ |
|
periscope |
ಮೇಲೆತೋರ್ಪುಕ |
telescope |
ಗೆಂಟುತೋರ್ಪುಕ |
|
nightscope |
ಇರುಳುತೋರ್ಪುಕ |
electroscope |
ಮಿನ್ತೋರ್ಪುಕ |
|
thermoscope |
ಬಿಸಿತೋರ್ಪುಕ |
ತಿರುಳು
ಇಂಗ್ಲಿಶ್ನ ಹಾಗೆ ಕನ್ನಡದಲ್ಲೂ ಹೆಸರುಪದಗಳಾಗಿ ಬರುವ ಜೋಡುಪದಗಳ ಮೊದಲನೆಯ ಪದವಾಗಿ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳು ಬರಬಲ್ಲುವು; ಹಾಗಾಗಿ, ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಸುಳುವಾಗಿ ಕಟ್ಟಲು ಬರುತ್ತದೆ.
ಎಸಕಪದಗಳಾಗಿ ಬರಬಲ್ಲ ಜೋಡುಪದಗಳು ಕನ್ನಡದಲ್ಲಿಲ್ಲವಾದರೂ ಕೂಡುಪದಗಳೆಂಬ ಬೇರೊಂದು ಬಗೆಯ ಪದಗಳನ್ನು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಕಟ್ಟಲು ಬರುತ್ತದೆ.
ಇದೇ ರೀತಿಯಲ್ಲಿ, ಪರಿಚೆಪದಗಳಾಗಿ ಬರಬಲ್ಲ ಜೋಡುಪದಗಳು ಕನ್ನಡದಲ್ಲಿಲ್ಲವಾದರು, ಅಂತಹ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆ ರೂಪವನ್ನು ಇಲ್ಲವೇ ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪಗಳಲ್ಲೊಂದನ್ನು ಬಳಸಲು ಬರುತ್ತದೆ.
ಈ ಎಲ್ಲಾ ಕಡೆಗಳಲ್ಲೂ ಇಂಗ್ಲಿಶ್ ಜೋಡುಪದಗಳ ಹುರುಳನ್ನವಲಂಬಿಸಿ ನಾವು ಬಳಸುವ ಹೊಲಬು ಇಂಗ್ಲಿಶ್ ಬಳಸುವ ಹೊಲಬಿಗಿಂತ ಬೇರಾಗಬೇಕಾಗಬಹುದು.
ಲ್ಯಾಟಿನ್ ಇಲ್ಲವೇ ಗ್ರೀಕ್ ಮೂಲದ ಬೇರುಗಳನ್ನು ಬಳಸಿರುವ ಹಲವು ಹೊಸ ಕಟ್ಟಣೆಗಳೂ ಇಂಗ್ಲಿಶ್ನಲ್ಲಿ (ಮುಕ್ಯವಾಗಿ ಅರಿಮೆಯ ಬರಹಗಳಲ್ಲಿ) ಬಳಕೆಯಾಗುತ್ತವೆ; ಇವುಗಳ ಹುರುಳನ್ನು ತಿಳಿಸುವಂತಹ ಕನ್ನಡ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಿ ಇಂತಹ ಪದಗಳಿಗೆ ಸಾಟಿಯಾಗಬಲ್ಲ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಲು ಬರುತ್ತದೆ.
<< ಬಾಗ-14
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-14:
ಇಂಗ್ಲಿಶ್ ನುಡಿಯ ಜೋಡುಪದಗಳು
ಮುನ್ನೋಟ
ಎರಡು ಪದಗಳನ್ನು ಒಟ್ಟು ಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವಂತಹ ಹೊಲಬನ್ನು ಇಂಗ್ಲಿಶ್ ಮತ್ತು ಕನ್ನಡಗಳೆರಡೂ ಬಳಸುತ್ತವೆ; ಹೀಗೆ ಉಂಟುಮಾಡಿರುವ ಪದಗಳನ್ನು ಜೋಡುಪದ ಇಲ್ಲವೇ compound ಎಂಬುದಾಗಿ ಕರೆಯಲಾಗುತ್ತದೆ; ಎತ್ತುಗೆಗಾಗಿ, ಹುರಿಗಡಲೆ ಎಂಬುದೊಂದು ಜೋಡುಪದ; ಇದರಲ್ಲಿ ಹುರಿ ಮತ್ತು ಕಡಲೆ ಎಂಬ ಎರಡು ಪದಗಳನ್ನು ಒಟ್ಟುಸೇರಿಸಿ ಒಂದು ಹೊಸ ಪದವನ್ನು ಉಂಟುಮಾಡಲಾಗಿದೆ.
ಇಂಗ್ಲಿಶ್ನಲ್ಲಾಗಲಿ, ಕನ್ನಡದಲ್ಲಾಗಲಿ, ಇಂತಹ ಜೋಡುಪದಗಳಲ್ಲಿ ಹೆಚ್ಚಿನೆಡೆಗಳಲ್ಲೂ ಎರಡನೆಯ ಪದ ಅರಿದಾಗಿರುತ್ತದೆ; ಎಂದರೆ, ಅದು ಗುರುತಿಸುವ ಪಾಂಗನ್ನೇ ಜೋಡುಪದವೂ ಗುರುತಿಸುತ್ತದೆ. ಎತ್ತುಗೆಗಾಗಿ, ಹುರಿಗಡಲೆ ಎಂಬುದು ಒಂದು ಬಗೆಯ ಕಡಲೆಯನ್ನು ಗುರುತಿಸುತ್ತದೆ. ಈ ಎರಡನೆಯ ಪದ ಗುರುತಿಸುವ ಪಾಂಗಿನ ಪರಿಚೆಯೊಂದನ್ನು ತಿಳಿಸುವ ಮೂಲಕ ಜೋಡುಪದದ ಮೊದಲನೆಯ ಪದ ಅದರ ಹರವನ್ನು ಕಡಿಮೆ ಮಾಡುತ್ತದೆ.
ಇಂಗ್ಲಿಶ್ನ ಜೋಡುಪದಗಳಲ್ಲಿ ಹೆಸರುಪದಗಳು ಮಾತ್ರವಲ್ಲದೆ ಎಸಕಪದಗಳು ಮತ್ತು ಪರಿಚೆಪದಗಳೂ ಅವುಗಳ ಎರಡನೆಯ ಪದವಾಗಿ ಬಳಕೆಯಾಗಬಲ್ಲುವು; ಎಂದರೆ, ಇಂಗ್ಲಿಶ್ನ ಜೋಡುಪದಗಳು ಹೆಸರುಪದಗಳಾಗಿ, ಎಸಕಪದಗಳಾಗಿ, ಮತ್ತು ಪರಿಚೆಪದಗಳಾಗಿ ಬಳಕೆಯಾಗಬಲ್ಲುವು. ಎತ್ತುಗೆಗಾಗಿ, sawdust ಎಂಬುದರಲ್ಲಿ ಎರಡನೆಯ ಪದ ಒಂದು ಹೆಸರುಪದವಾಗಿದ್ದು, ಅದೂ ಒಂದು ಹೆಸರುಪದವಾಗಿದೆ; deep-fry ಎಂಬುದರಲ್ಲಿ ಎರಡನೆಯ ಪದ ಎಸಕಪದ, ಮತ್ತು ಅದೂ ಒಂದು ಎಸಕಪದ; sugar-free ಎಂಬುದರಲ್ಲಿ ಎರಡನೆಯ ಪದ ಪರಿಚೆಪದ, ಮತ್ತು ಅದೂ ಒಂದು ಪರಿಚೆಪದ. ಹೀಗಿದ್ದರೂ, ಇಂಗ್ಲಿಶ್ನಲ್ಲಿ ಹೆಚ್ಚಿನ ಜೋಡುಪದಗಳೂ ಹೆಸರುಪದಗಳಾಗಿರುತ್ತವೆ.
ಕನ್ನಡದ ಜೋಡುಪದಗಳಲ್ಲಿ ಎರಡನೆಯ ಪದವಾಗಿ ಹೆಸರುಪದಗಳು ಮಾತ್ರ ಬರುತ್ತವಲ್ಲದೆ ಎಸಕಪದ ಇಲ್ಲವೇ ಪರಿಚೆಪದಗಳು ಬರುವುದಿಲ್ಲ; ಹಾಗಾಗಿ, ಅದರ ಜೋಡುಪದಗಳು ಹೆಸರುಪದಗಳಾಗಿ ಮಾತ್ರ ಬಳಕೆಯಾಗಬಲ್ಲುವು. ಹಲವು ಎಸಕಪದಗಳಲ್ಲಿ ಎರಡು ಪದಗಳು ಒಟ್ಟುಸೇರಿರುವುದನ್ನೂ ಕಾಣಬಹುದೇನೋ ನಿಜ; ಆದರೆ, ಅವನ್ನು ಕನ್ನಡದ ಸೊಲ್ಲರಿಮೆಯಲ್ಲಿ ಜೋಡುಪದಗಳೆಂದು ಕರೆಯದೆ, ಕೂಡುಪದವೆಂದು ಕರೆಯಲಾಗುತ್ತದೆ; ಅವು ಹಲವು ವಿಶಯಗಳಲ್ಲಿ ಜೋಡುಪದಗಳಿಗಿಂತ ಬೇರಾಗಿರುವುದು ಇದಕ್ಕೆ ಕಾರಣ. ಇದಲ್ಲದೆ, ಕನ್ನಡದ ಪರಿಚೆಪದಗಳಲ್ಲಿ ಒಂದಕ್ಕಿಂತ ಹೆಚ್ಚು ಪದಗಳು ಸೇರಿರುವುದಿಲ್ಲವೆಂದೇ ಹೇಳಬಹುದು.
ಹಾಗಾಗಿ, ಇಂಗ್ಲಿಶ್ನಲ್ಲಿ ಕಾಣಿಸುವ ಹೆಸರುಪದ, ಎಸಕಪದ ಮತ್ತು ಪರಿಚೆಪದ ಎಂಬ ಮೂರು ಬಗೆಯ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡುವುದು ಹೇಗೆ ಎಂಬುದನ್ನು ವಿವರಿಸಲು ಅವನ್ನು ಕೆಳಗೆ ಬೇರೆ ಬೇರಾಗಿ ಗಮನಿಸಲಾಗಿದೆ.
ಹೆಸರುಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು
ಇಂಗ್ಲಿಶ್ನಲ್ಲಿ ಹೆಸರುಪದಗಳಾಗಿ ಬರುವ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಹೆಸರುಪದವಾಗಿರುತ್ತದೆ, ಮತ್ತು ಹೆಚ್ಚಿನೆಡೆಗಳಲ್ಲೂ ಅದೇ ಆ ಜೋಡುಪದದ ಅರಿದು ಪದವಾಗಿರುತ್ತದೆ. ಅವುಗಳ ಮೊದಲನೆಯ ಪದವಾಗಿ ಬೇರೊಂದು ಹೆಸರುಪದ, ಎಸಕಪದ, ಇಲ್ಲವೇ ಪರಿಚೆಪದ ಬರಬಲ್ಲುದು. ಎತ್ತುಗೆಗಾಗಿ, teapot ಎಂಬುದರಲ್ಲಿ tea ಎಂಬ ಮೊದಲನೆಯ ಪದ ಹೆಸರುಪದ; flow chart ಎಂಬುದರಲ್ಲಿ flow ಎಂಬ ಮೊದಲನೆಯ ಪದ ಎಸಕಪದ; ಮತ್ತು blackbird ಎಂಬುದರಲ್ಲಿ black ಎಂಬ ಮೊದಲನೆಯ ಪದ ಪರಿಚೆಪದ. ಈ ಮೂರು ಜೋಡುಪದಗಳಲ್ಲೂ ಎರಡನೆಯ ಪದ (pot, chart, ಮತ್ತು bird) ಹೆಸರುಪದವಾಗಿದೆಯೆಂಬುದನ್ನು ಗಮನಿಸಬಹುದು.
ಇಂಗ್ಲಿಶ್ನ ಹಾಗೆ ಕನ್ನಡದಲ್ಲಿಯೂ ಹೆಸರುಪದಗಳಾಗಿ ಬರುವ ಜೋಡುಪದಗಳಲ್ಲಿ ಎರಡನೆಯ ಪದ ಹೆಸರುಪದವೇ ಆಗಿರುತ್ತದೆ, ಮತ್ತು ಮೊದಲನೆಯ ಪದ ಹೆಸರುಪದವಾಗಿರಬಹುದು, ಎಸಕಪದವಾಗಿರಬಹುದು, ಇಲ್ಲವೇ ಪರಿಚೆಪದವಾಗಿಯೂ ಇರಬಹುದು (.. ನೋಡಿ). ಎತ್ತುಗೆಗಾಗಿ, ಜೇನುಹುಳ ಎಂಬುದರಲ್ಲಿ ಜೇನು ಎಂಬ ಮೊದಲನೆಯ ಪದ ಹೆಸರುಪದ, ಹುರಿಗಡಲೆ ಎಂಬುದರಲ್ಲಿ ಹುರಿ ಎಂಬ ಮೊದಲನೆಯ ಪದ ಎಸಕಪದ, ಮತ್ತು ದೊಡ್ಡಕ್ಕ ಎಂಬುದರಲ್ಲಿ ದೊಡ್ಡ ಎಂಬ ಮೊದಲನೆಯ ಪದ ಪರಿಚೆಪದ. ಈ ಮೂರರಲ್ಲೂ ಎರಡನೆಯ ಪದ (ಹುಳ, ಕಡಲೆ, ಮತ್ತು ಅಕ್ಕ) ಹೆಸರುಪದವಾಗಿದೆ.
ಹಾಗಾಗಿ, ಹೆಸರುಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಜೋಡುಪದಗಳನ್ನು ಕನ್ನಡದಲ್ಲಿ ಉಂಟುಮಾಡಬೇಕಾದಾಗ, ಕೆಲವೆಡೆಗಳಲ್ಲಿ ಆ ಪದಗಳಲ್ಲಿ ಬಳಕೆಯಾಗಿರುವ ಎರಡು ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನೇ ಕನ್ನಡದಲ್ಲೂ ಬಳಸಿ ಜೋಡುಪದಗಳನ್ನು ಉಂಟುಮಾಡಲು ಬರುತ್ತದೆ:
(1) ಮೊದಲನೆಯ ಪದ ಹೆಸರುಪದವಾಗಿರುವ ಜೋಡುಪದಗಳು:
nose-rope |
ಮೂಗುದಾರ |
|
handgun |
ಕಯ್ಕೋವಿ |
rainbow |
ಮಳೆಬಿಲ್ಲು |
|
headache |
ತಲೆನೋವು |
motherland |
ತಾಯ್ನಾಡು |
|
daydream |
ಹಗಲುಕನಸು |
hookworm |
ಕೊಕ್ಕೆಹುಳು |
|
milk-tooth |
ಹಾಲುಹಲ್ಲು |
(2) ಮೊದಲನೆಯ ಪದ ಎಸಕಪದವಾಗಿರುವ ಜೋಡುಪದಗಳು:
punch bag |
ಚಚ್ಚುಹಸುಬೆ |
|
pushbutton |
ತಳ್ಳುಗುಬ್ಬಿ |
pushcart |
ತಳ್ಳುಗಾಡಿ |
|
carry-bag |
ಒಯ್ಚೀಲ |
open neck |
ತೆರೆಗೊರಳು |
|
call-loan |
ಕರೆಸಾಲ |
flyleaf |
ಹಾರುಹಾಳೆ |
|
whetstone |
ಮಸೆಕಲ್ಲು |
(3) ಮೊದಲನೆಯ ಪದ ಪರಿಚೆಪದವಾಗಿರುವ ಜೋಡುಪದಗಳು:
red eye |
ಕೆಂಗಣ್ಣು |
|
greenhouse |
ಹಸಿರುಮನೆ |
hind leg |
ಹಿಂಗಾಲು |
|
microcredit |
ಕಿರುಸಾಲ |
long jump |
ಉದ್ದನೆಗೆತ |
|
black money |
ಕಪ್ಪುಹಣ |
mid life |
ನಡುಬಾಳು |
|
backwater |
ಹಿನ್ನೀರು |
ಆದರೆ, ಎಲ್ಲಾ ಕಡೆಗಳಲ್ಲೂ ಈ ರೀತಿ ಪದಕ್ಕೆ ಪದವನ್ನು ಸಾಟಿಮಾಡಿ ಕನ್ನಡದಲ್ಲಿ ಹೊಸ ಜೋಡುಪದಗಳನ್ನು ಕಟ್ಟಹೋದರೆ, ಅವು ಇಂಗ್ಲಿಶ್ ಪದಗಳ ಹುರುಳನ್ನು ಸರಿಯಾಗಿ ಕೊಡಲಾರವು. ಹಾಗಾಗಿ, ಹೆಚ್ಚಿನೆಡೆಗಳಲ್ಲೂ ಇಂಗ್ಲಿಶ್ ಜೋಡುಪದದ ಹುರುಳೇನೆಂಬುದನ್ನು ಮೊದಲು ಗಮನಿಸಿ, ಅದಕ್ಕೆ ಹೊಂದಿಕೆಯಾಗುವಂತೆ ಕನ್ನಡದಲ್ಲಿ ಜೋಡುಪದವನ್ನು ಕಟ್ಟಬೇಕಾಗುತ್ತದೆ.
ಹೀಗೆ ಕಟ್ಟುವಲ್ಲಿ ಮೊದಲ ಪದವಾಗಿ ಹೆಸರುಪದವನ್ನು ಬಳಸುವುದು, ಎಸಕಪದವನ್ನು ಬಳಸುವುದು, ಇಲ್ಲವೇ ಪರಿಚೆಪದವನ್ನು ಬಳಸುವುದು ಎಂಬ ಮೇಲಿನ ಮೂರು ಬಗೆಯ ಹೊಲಬುಗಳನ್ನು ಕನ್ನಡದಲ್ಲೂ ಬಳಸಲು ಬರುತ್ತದೆ; ಆದರೆ, ಇಂಗ್ಲಿಶ್ನಲ್ಲಿ ಬಳಸಿದಂತಹದೇ ಪದವನ್ನು ಕನ್ನಡದಲ್ಲಿ ಬಳಸುವ ಬದಲು, ಜೋಡುಪದದ ಹುರುಳನ್ನವಲಂಬಿಸಿ, ಬೇರೆ ಬಗೆಯ ಪದಗಳನ್ನೂ ಬಳಸಬೇಕಾಗಬಹುದು ಎಂಬುದೇ ಇಲ್ಲಿ ಗಮನಿಸಬೇಕಾಗಿರುವ ವಿಶಯವಾಗಿದೆ.
ಹೊಸಪದಗಳನ್ನು ಕಟ್ಟುವವರು ಈ ರೀತಿ ತಮ್ಮೆದುರಿರುವ ಬೇರೆ ಬೇರೆ ಆಯ್ಕೆಗಳನ್ನು ಗಮನದಲ್ಲಿರಿಸಿಕೊಂಡರೆ ಹೆಚ್ಚು ಹೊಂದಿಕೆಯಾಗುವ ಪದಗಳನ್ನು ಕಟ್ಟಬಲ್ಲರು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಇಂಗ್ಲಿಶ್ ಜೋಡುಪದಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿದೆಯಾದರೂ ಕನ್ನಡದಲ್ಲಿ ಅಂತಹದೇ ಪದವನ್ನು ಬಳಸದೆ, ಪರಿಚೆಪದವೊಂದನ್ನು ಬಳಸಿದುದರಿಂದ ಆ ಜೋಡುಪದಗಳ ಹುರುಳನ್ನು ಹೆಚ್ಚು ಚನ್ನಾಗಿ ತಿಳಿಸಿಹೇಳಲು ಬಂದಿದೆ:
handbook |
ಕಿರುಕಡತ |
|
note-book |
ಕೀರೆಣ್ಣುಕ |
news flash |
ಬಿಸಿಸುದ್ದಿ |
|
table spoon |
ದೊಡ್ಡಮಿಳ್ಳಿ |
ಮೊದಲನೆಯ ಪದವಾಗಿ ಎಸಕಪದ ಇಲ್ಲವೇ ಪರಿಚೆಪದ ಬಂದಿರುವಲ್ಲಿ ಹೆಸರುಪದವನ್ನು ಬಳಸಿಯೂ ಸಾಟಿಯಾಗಬಲ್ಲ ಜೋಡುಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬರುತ್ತದೆ ಎಂಬುದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
antiseptic |
ಕೊಳೆಯಳಿಕ |
|
outskirts |
ಗಡಿನಾಡು |
drain pipe |
ಬಚ್ಚಲುಕೊಳವೆ |
|
paymaster |
ಹಣಕೊಡುಗ |
martial law |
ಪಡೆಯಾಳ್ವಿಕೆ |
|
wet-nurse |
ಮಲೆತೊತ್ತು |
typewriter |
ಬೆರಳಚ್ಚು |
|
turncoat |
ನಾಡಹಗೆ |
ಎಸಕಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು
ಇಂಗ್ಲಿಶ್ನಲ್ಲಿ ಎಸಕಪದಗಳಾಗಿ ಬರಬಲ್ಲ ಜೋಡುಪದಗಳಲ್ಲಿ ಎರಡನೆಯ ಪದ ಎಸಕಪದವಾಗಿರುತ್ತದೆ; ಇವುಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿರಬಹುದು, ಪರಿಚೆಪದವಾಗಿರಬಹುದು, ಇಲ್ಲವೇ ಬೇರೊಂದು ಎಸಕಪದವಾಗಿಯೂ ಇರಬಹುದು.
ಎತ್ತುಗೆಗಾಗಿ, ghost-write ಎಂಬುದರಲ್ಲಿ ghost ಎಂಬ ಮೊದಲನೆಯ ಪದ ಒಂದು ಪರಿಚೆಪದವಾಗಿದೆ; deep-fry ಎಂಬುದರಲ್ಲಿ deep ಎಂಬ ಮೊದಲನೆಯ ಪದ ಒಂದು ಹೆಸರುಪದವಾಗಿದೆ; ಮತ್ತು stir-fry ಎಂಬುದರಲ್ಲಿ stir ಎಂಬ ಮೊದಲನೆಯ ಪದ ಒಂದು ಎಸಕಪದವಾಗಿದೆ. ಈ ಮೂರು ಜೋಡುಪದಗಳಲ್ಲೂ ಎರಡನೆಯ ಪದ (write ಮತ್ತು fry) ಒಂದು ಎಸಕಪದವಾಗಿದೆ ಎಂಬುದನ್ನು ಗಮನಿಸಬಹುದು.
ಕನ್ನಡದಲ್ಲಿ ಎಸಕಪದಗಳಾಗಿ ಬಳಕೆಯಾಗಬಲ್ಲ ಜೋಡುಪದಗಳಿಲ್ಲ; ಆದರೆ, ಕೂಡುಪದಗಳೆಂಬ ಬೇರೊಂದು ಬಗೆಯ ಪದಗಳಲ್ಲಿ ಎಸಕಪದಗಳೊಂದಿಗೆ ಹೆಸರುಪದ, ಪರಿಚೆಪದ, ಮತ್ತು ಎಸಕಪದಗಳ ಜೋಡಿಸುವ ರೂಪಗಳು ಬರಬಲ್ಲುವು (… ನೋಡಿ); ಇಂತಹ ಕೂಡುಪದಗಳನ್ನು ಇಂಗ್ಲಿಶ್ನಲ್ಲಿ ಎಸಕಪದಗಳಾಗಿ ಬರುವ ಜೋಡುಪದಗಳಿಗೆ ಸಾಟಿಯಾಗಿ ಬಳಸಲು ಬರುತ್ತದೆ ಎಂಬುದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು:
(1) ಮೊದಲನೆಯ ಪದ ಹೆಸರುಪದ:
foretell |
ಕಣಿಹೇಳು |
|
blindfold |
ಕಣ್ಣುಕಟ್ಟು |
handshake |
ಕಯ್ಕುಲುಕು |
|
head-hunt |
ತಲೆಹುಡುಕು |
(2) ಮೊದಲನೆಯ ಪದ ಪರಿಚೆಪದ:
smooth-land |
ನುಣ್ಣಗಿಳಿಸು |
|
soft-land |
ಮೆತ್ತಗಿಳಿಸು |
intersect |
ಅಡ್ಡತುಂಡಿಸು |
|
gainsay |
ಎದುರಾಡು |
(3) ಮೊದಲನೆಯ ಪದ ಎಸಕಪದದ ಜೋಡಿಸುವ ರೂಪ:
highlight |
ಎತ್ತಿತೋರಿಸು |
|
burst-open |
ಸಿಡಿದುತೆರೆ |
kick-start |
ಒದ್ದುಹೊರಡಿಸು |
|
force-feed |
ಗಿಡಿದುಣಿಸು |
ಇಂಗ್ಲಿಶ್ನ ಕೆಲವು ಜೋಡುಪದಗಳಲ್ಲಿ ಎರಡನೆಯ ಪದ ತಿಳಿಸುವ ಎಸಕದ ಜಾಗ ಇಲ್ಲವೇ ಮುಟ್ಟನ್ನು (instrument) ಮೊದಲನೆಯ ಹೆಸರುಪದ ತಿಳಿಸುತ್ತದೆ (spoon-feed, oven-cook). ಕನ್ನಡದ ಕೂಡುಪದಗಳಲ್ಲಿ ಇಂತಹ ಪದಗಳ ಬಳಕೆ ತುಂಬಾ ಕಡಿಮೆ; ಹೀಗಿದ್ದರೂ, ಬಲೆಹಿಡಿ, ಸೆರೆಹಿಡಿ ಎಂಬಂತಹ ಕೆಲವು ಪದಗಳಲ್ಲಿ ಈ ಹೊಲಬಿನ ಬಳಕೆಯಾಗಿದ್ದು, ಇದೇ ಹೊಲಬನ್ನು ಮೇಲಿನ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕಟ್ಟುವಲ್ಲೂ ಬಳಸಲು ಬರುತ್ತದೆ:
oven-cook |
ಗೂಡೊಲೆಯಡು |
|
smoke-dry |
ಹೊಗೆಯೊಣಗಿಸು |
spoon-feed |
ಮಿಳ್ಳಿಯುಣಿಸು |
|
steam-cook |
ಆವಿಯಡು |
ಇಂಗ್ಲಿಶ್ನಲ್ಲಿ ಎಸಕಪದಗಳಾಗಿ ಬರಬಲ್ಲ ಜೋಡುಪದಗಳಲ್ಲಿ ಹೆಚ್ಚಿನವೂ ಹೆಸರುಪದಗಳಾಗಿ ಬರುವ ಜೋಡುಪದಗಳಿಂದ ಹಿಂಪಡೆದ (back-formation) ಪದಗಳಾಗಿದ್ದು (proof-readingನಿಂದ proof-read, chain-smokerನಿಂದ chain-smoke), ಅಂತಹ ಪದಗಳನ್ನು ಕಟ್ಟುವ ಹೊಲಬು ಆ ನುಡಿಯಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಆದರೆ, ಕನ್ನಡದಲ್ಲಿ ಕೂಡುಪದಗಳನ್ನು ಕಟ್ಟುವುದು ತುಂಬಾ ಬಳಕೆಯಲ್ಲಿರುವ ಹಮ್ಮುಗೆಯಾಗಿದೆ; ಇಂಗ್ಲಿಶ್ನ ಬೇರೆಯೂ ಹಲವು ಬಗೆಯ ಎಸಕಪದಗಳಿಗೆ ಸಾಟಿಯಾಗಿ ಈ ಹಮ್ಮುಗೆಯಿಂದ ಪಡೆದ ಪದಗಳನ್ನು ಬಳಸಲು ಬರುತ್ತದೆ.
(ಈ ಪಸುಗೆ ಇಂಗ್ಲಿಶ್ ಪದಗಳಿಗೆ…-15ರಲ್ಲಿ ಮುಂದುವರಿಯುತ್ತದೆ)
<< ಬಾಗ-13
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-13

(ಇಂಗ್ಲಿಶ್ ಪದಗಳಿಗೆ…-12ರಿಂದ ಮುಂದುವರಿದುದು)
(8) mis ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ ತಪ್ಪು ಇಲ್ಲವೇ ತಪ್ಪಾದ ಮತ್ತು ಕೆಟ್ಟ ಎಂಬ ಎರಡು ಹುರುಳುಗಳಿವೆ; ಕೆಲವು ಕಡೆಗಳಲ್ಲಿ ಇದಕ್ಕೆ ಈ ಎರಡು ಹುರುಳುಗಳೂ ಕಾಣಿಸಿಕೊಳ್ಳುವುದಿದೆ.
ಈ ಒಟ್ಟನ್ನು ಬಳಸಿರುವ ಪದಗಳಿಗೆ ಸಾಟಿಯಾದ ಕನ್ನಡ ಪದಗಳನ್ನು ಉಂಟುಮಾಡುವಲ್ಲಿ ಕೆಳಗೆ ಕೊಟ್ಟಿರುವ ಹಮ್ಮುಗೆಗಳನ್ನು ಬಳಸಿಕೊಳ್ಳಬಹುದು:
(ಕ) ಹೆಸರುಪದಗಳಿಗೆ ತಪ್ಪು ಇಲ್ಲವೇ ಕೆಟ್ಟ ಎಂಬ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
match |
ಎಣೆ |
|
mismatch |
ತಪ್ಪೆಣೆ |
cast |
ಪಾಂಗು |
|
miscast |
ತಪ್ಪು ಪಾಂಗು |
trial |
ಒರೆಹಚ್ಚಿಕೆ |
|
mistrial |
ತಪ್ಪೊರೆಹಚ್ಚಿಕೆ |
quotation |
ಎತ್ತುಗೆ |
|
misquotation |
ತಪ್ಪೆತ್ತುಗೆ |
|
|
|
|
|
conduct |
ನಡತೆ |
|
misconduct |
ಕೆಟ್ಟ ನಡತೆ |
deed |
ಕೆಲಸ |
|
misdeed |
ಕೆಟ್ಟ ಕೆಲಸ |
fortune |
ಸಯ್ಪು |
|
misfortune |
ಕೆಟ್ಟ ಸಯ್ಪು |
deal |
ಹರದು |
|
misdeal |
ಕೆಟ್ಟ ಹರದು |
(ಚ) ಎಸಪದಗಳಿಗೆ ಕೆಲವೆಡೆಗಳಲ್ಲಿ ತಪ್ಪು ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ; ಆದರೆ ಬೇರೆ ಕೆಲವೆಡೆಗಳಲ್ಲಿ ತಪ್ಪಿ ಇಲ್ಲವೇ ತಪ್ಪಾಗಿ ಎಂಬುದನ್ನು ಬಳಸಬೇಕಾಗುತ್ತದೆ:
apprehend |
ತಿಳಿ |
|
misapprehend |
ತಪ್ಪು ತಿಳಿ |
conceive |
ನೆನಸು |
|
misconceive |
ತಪ್ಪು ನೆನಸು |
inform |
ತಿಳಿಸು |
|
misinform |
ತಪ್ಪು ತಿಳಿಸು |
use |
ಬಳಸು |
|
misuse |
ತಪ್ಪು ಬಳಸು |
direct |
ದಾರಿ ತೋರು |
|
misdirect |
ತಪ್ಪುದಾರಿ ತೋರು |
calculate |
ಎಣಿಕೆ ಹಾಕು |
|
miscalculate |
ತಪ್ಪೆಣಿಕೆ ಹಾಕು |
|
|
|
|
|
behave |
ನಡೆ |
|
misbehave |
ತಪ್ಪಿ ನಡೆ |
hit |
ಹೊಡೆ |
|
mishit |
ತಪ್ಪಿ ಹೊಡೆ |
place |
ಇಡು |
|
misplace |
ತಪ್ಪಾಗಿ ಇಡು |
manage |
ಸಂಬಾಳಿಸು |
|
mismanage |
ತಪ್ಪಾಗಿ ಸಂಬಾಳಿಸು |
(ಟ) ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನು ಬಳಸಿಯೂ ಕೆಲವೆಡೆಗಳಲ್ಲಿ ಸಾಟಿಯಾದ ಕನ್ನಡ ಪದಗಳನ್ನು ಉಂಟುಮಾಡಲು ಬರುತ್ತದೆ:
fit |
ಒಪ್ಪುವ |
|
misfit |
ಒಪ್ಪದ |
trust |
ನಂಬು |
|
mistrust |
ನಂಬದಿಕೆ |
(9) mal ಒಟ್ಟು:
ಈ ಒಟ್ಟಿನ ಬಳಕೆ ಹೆಚ್ಚುಕಡಿಮೆ mis ಒಟ್ಟಿನ ಹಾಗೆಯೇ ಇದೆ; ಇದನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ತಪ್ಪು ಇಲ್ಲವೇ ಕೆಟ್ಟ ಪದಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ; ಕೆಲವೆಡೆಗಳಲ್ಲಿ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನೂ ಬಳಸಲು ಬರುತ್ತದೆ:
function |
ನಡೆ |
|
malfunction |
ತಪ್ಪು ನಡೆ |
practice |
ಬಳಕೆ |
|
malpractice |
ತಪ್ಪು ಬಳಕೆ |
content |
ತಣಿದ |
|
malcontent |
ತಣಿಯದ |
odorous |
ನಾತದ |
|
malodorous |
ಕೆಟ್ಟ ನಾತದ |
ತಿರುಳು:
(1) ಅಲ್ಲಗಳೆಯುವ ಒಟ್ಟುಗಳನ್ನು ಸೇರಿಸಲು ಬಳಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದ ಇಲ್ಲವೇ ಪರಿಚೆಪದವನ್ನು ಬಳಸಬೇಕಾಗುತ್ತದೆಯಾದರೆ, ಅವನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಹೆಸರುಪದ ಇಲ್ಲವೇ ಪರಿಚೆಪದಗಳನ್ನು ಬಳಸಲು ಬರುತ್ತದೆ;
(2) ಇದಕ್ಕೆ ಬದಲು, ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಪರಿಚೆರೂಪವನ್ನು ಬಳಸಬೇಕಾಗುತ್ತದೆಯಾದರೆ, ಈ ಒಟ್ಟುಗಳನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನು ಬಳಸಲು ಬರುತ್ತದೆ;
(3) ಕೆಲವೆಡೆ ಹೆಚ್ಚಿನ ಹುರುಳನ್ನು ಕೊಡಬೇಕಾಗಿರುವಲ್ಲಿ ಕಳೆ, ಕೆಡಿಸು, ತಗ್ಗಿಸು ಮೊದಲಾದ ಎಸಕಪದಗಳಲ್ಲೊಂದನ್ನೂ ಬಳಸಬೇಕಾಗುತ್ತದೆ;
(4) ಈ ಒಟ್ಟುಗಳನ್ನು ಬಳಸಿರುವ ಪದಗಳು ಮಂದಿಯನ್ನು ಹೆಸರಿಸುತ್ತಿವೆಯಾದರೆ, ಅವುಗಳ ಹುರುಳನ್ನವಲಂಬಿಸಿ ಇಲಿ ಎಂಬ ಒಟ್ಟನ್ನು ಇಲ್ಲವೇ ಎದುರಿ ಎಂಬ ಪದವನ್ನು ಬಳಸಲು ಬರುತ್ತದೆ;
(5) mis ಮತ್ತು mal ಎಂಬ ಒಟ್ಟುಗಳನ್ನು ಬಳಸಿರುವಲ್ಲಿ ತಪ್ಪು ಇಲ್ಲವೇ ಕೆಟ್ಟ ಎಂಬ ಪದಗಳನ್ನು ಬಳಸಬೇಕಾಗುತ್ತದೆ.
ಬೇರೆ ಬಗೆಯ ಮುನ್ನೊಟ್ಟುಗಳು
ಮೇಲೆ ವಿವರಿಸಿದ ನಾಲ್ಕು ಬಗೆಯ ಮುನ್ನೊಟ್ಟುಗಳು ಮಾತ್ರವಲ್ಲದೆ ಬೇರೆಯೂ ಕೆಲವು ಮುನ್ನೊಟ್ಟುಗಳು ಇಂಗ್ಲಿಶ್ನಲ್ಲಿ ಬಳಕೆಯಲ್ಲಿವೆ. ಇವು ಕೊಡುವ ಹುರುಳುಗಳು ಬೇರೆ ಬೇರೆ ಬಗೆಯವಾಗಿದ್ದು, ಅವನ್ನು ಮೇಲೆ ಕೊಟ್ಟಿರುವ ಒಟ್ಟುಗಳ ಹಾಗೆ ಅವುಗಳ ಹುರುಳನ್ನವಲಂಬಿಸಿ ಗುಂಪಿಸುವ ಬದಲು ಒಟ್ಟಿಗೆ ಒಂದೇ ಗುಂಪಿನಲ್ಲಿ ಇರಿಸಿ ವಿವರಿಸಲಾಗಿದೆ:
(1) auto ಒಟ್ಟು:
ತಾನು ಇಲ್ಲವೇ ತನ್ನ ಎಂಬ ಹುರುಳನ್ನು ಕೊಡಬಲ್ಲ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ತಾನು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
ignition |
ಉರಿತ |
|
autoignition |
ತಾನವುರಿತ |
start |
ತೊಡಗು |
|
autostart |
ತಾನತೊಡಗು |
(2) vice ಒಟ್ಟು:
ಈ ಒಟ್ಟಿಗೆ ಕೆಳಗಿನ ಹಂತದ ಎಂಬ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಕೆಳ ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
president |
ತಲೆಯಾಳು |
|
vice-president |
ಕೆಳತಲೆಯಾಳು |
captain |
ಮುಂದುಗ |
|
vice-captain |
ಕೆಳಮುಂದುಗ |
chairman |
ಮೇಲಾಳು |
|
vice-chairman |
ಕೆಳಮೇಲಾಳು |
ಕೆಳಗೆ ಕೊಟ್ಟಿರುವ a, be, ಮತ್ತು en/em ಎಂಬ ಮೂರು ಒಟ್ಟುಗಳಿಗೆ ಅವುಗಳದೇ ಆದ ಹುರುಳಿಲ್ಲ; ಹೆಸರುಪದಗಳನ್ನು ಎಸಕಪದಗಳಾಗಿ ಮಾರ್ಪಡಿಸುವ ಕೆಲಸವನ್ನಶ್ಟೇ ಅವು ನಡೆಸುತ್ತವೆ.
(3) a ಒಟ್ಟು:
ಹೆಸರುಪದಗಳಿಗೆ ಈ ಒಟ್ಟನ್ನು ಸೇರಿಸಿ ಎಸಕಪದಗಳನ್ನು ಪಡೆಯಲಾಗುತ್ತದೆ; ಕನ್ನಡದಲ್ಲಿ ಇದಕ್ಕೆ ಸಾಟಿಯಾಗಬಲ್ಲ ಹೊಸಪದಗಳನ್ನು ಕಟ್ಟಲು ಕೂಡುಪದಗಳನ್ನು ಉಂಟುಮಾಡುವ ಹಮ್ಮುಗೆಯನ್ನು ಬಳಸಬೇಕಾಗುತ್ತದೆ:
credit |
ನಂಬಿಕೆ |
|
accredit |
ನಂಬಿಕೆಯಿಡು |
custom |
ಬಳಕೆ |
|
accustom |
ಬಳಕೆಯಾಗು |
forest |
ಕಾಡು |
|
afforest |
ಕಾಡುಬೆಳೆ |
mass |
ಕಲೆತ |
|
amass |
ಕಲೆಹಾಕು |
portion |
ಪಾಲು |
|
apportion |
ಪಾಲುಹಚ್ಚು |
(4) be ಒಟ್ಟು:
ಈ ಒಟ್ಟನ್ನು ಹೆಸರುಪದಗಳಿಂದ ಇಲ್ಲವೇ ಪರಿಚೆಪದಗಳಿಂದ ಎಸಕಪದಗಳನ್ನು ಪಡೆಯಲು ಬಳಸಲಾಗಿದೆ; ಇಂತಹ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅವು ಕೊಡುವ ಎಸಕದ ಹುರುಳನ್ನವಲಂಬಿಸಿ ಕೂಡುಪದಗಳನ್ನು ಕಟ್ಟಬೇಕಾಗುತ್ತದೆ:
calm |
ನೆಮ್ಮದಿ |
|
becalm |
ನೆಮ್ಮದಿಗೊಳಿಸು |
head |
ತಲೆ |
|
behead |
ತಲೆಕಡಿ |
spatter |
ಹನಿ |
|
bespatter |
ಹನಿಹನಿಸು |
witch |
ಮಾಟಗಾರ್ತಿ |
|
bewitch |
ಮಾಟಮಾಡು |
wail |
ಗೋಳು |
|
bewail |
ಗೋಳಾಡು |
(5) en/em ಒಟ್ಟು:
ಹೆಸರುಪದಗಳಿಗೆ ಇಲ್ಲವೇ ಪರಿಚೆಪದಗಳಿಗೆ ಈ ಒಟ್ಟನ್ನು ಸೇರಿಸಿ ಎಸಕಪದಗಳನ್ನು ಉಂಟುಮಾಡಲಾಗುತ್ತದೆ; ಇದಕ್ಕಾಗಿ ಇಂಗ್ಲಿಶ್ನಲ್ಲಿ ಎಲ್ಲಾ ಬಗೆಯ ಹೆಸರುಪದಗಳನ್ನೂ ಬಳಸಲಾಗುತ್ತದೆ.
ಈ ಒಟ್ಟನ್ನು ಬಳಸಿರುವ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಕೂಡುಪದಗಳನ್ನು ಉಂಟುಮಾಡಬೇಕಾಗುತ್ತದೆ:
bitter |
ಕಹಿ |
|
embitter |
ಕಹಿತುಂಬು |
body |
ಮಯ್ |
|
embody |
ಮಯ್ದಾಳು |
power |
ಅಳವು |
|
empower |
ಅಳವೀಯು |
title |
ಹಕ್ಕು |
|
entitle |
ಹಕ್ಕುಪಡೆ |
throne |
ಗದ್ದುಗೆ |
|
enthrone |
ಗದ್ದುಗೆ ಸೇರಿಸು |
slave |
ತೊತ್ತು |
|
enslave |
ತೊತ್ತಾಗಿಸು |
sure |
ಕಂಡಿತ |
|
ensure |
ಕಂಡಿತಪಡಿಸು |
mesh |
ಬಲೆ |
|
enmesh |
ಬಲೆಯೊಡ್ಡು |
ತಿರುಳು
ಈ ಒಳಪಸುಗೆಯಲ್ಲಿ ಬಂದಿರುವ ಮೊನ್ನೊಟ್ಟುಗಳಲ್ಲಿ ಮೊದಲಿನ ಎರಡು ಒಟ್ಟುಗಳ ಬಳಕೆಯಾಗಿರುವಲ್ಲಿ ತಾನು ಮತ್ತು ಕೆಳ ಪದಗಳನ್ನು, ಮತ್ತು ಉಳಿದೆಡೆಗಳಲ್ಲಿ ಕೂಡುಪದಗಳನ್ನು ಕನ್ನಡದಲ್ಲಿ ಬಳಸಲು ಬರುತ್ತದೆ.
<< ಬಾಗ-12
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-12
(ಇಂಗ್ಲಿಶ್ ಪದಗಳಿಗೆ-11ರಿಂದ ಮುಂದುವರಿದುದು)
(5) in ಒಟ್ಟು:
ಅಲ್ಲಗಳೆಯುವ ಹುರುಳಿರುವ ಈ ಒಟ್ಟಿಗೆ in, il, im, ಮತ್ತು ir ಎಂಬ ನಾಲ್ಕು ರೂಪಗಳಿವೆ; ಇವುಗಳಲ್ಲಿ il ಎಂಬುದು l ಬರಿಗೆಯಲ್ಲಿ ಮೊದಲಾಗುವ ಪದಗಳೆದುರು (legal : illegal), im ಎಂಬುದು m ಇಲ್ಲವೇ p ಬರಿಗೆಯಲ್ಲಿ ಮೊದಲಾಗುವ ಪದಗಳೆದುರು (possible : impossible, mobile : immobile), ir ಎಂಬುದು r ಬರಿಗೆಯಲ್ಲಿ ಮೊದಲಾಗುವ ಪದಗಳೆದುರು (regular : irregular), ಮತ್ತು in ಎಂಬುದು ಉಳಿದ ಕಡೆಗಳಲ್ಲಿ ಬಳಕೆಯಾಗುತ್ತದೆ (coherent : incoherent, elegant : inelegant).
ಈ ಒಟ್ಟನ್ನು ಎಂತಹ ಪದಕ್ಕೆ ಸೇರಿಸಲಾಗಿದೆ, ಮತ್ತು ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದವನ್ನು ಕೊಡಲು ಬರುತ್ತದೆ ಎಂಬುದರ ಮೇಲೆ ಈ ಒಟ್ಟಿರುವ ಪದಗಳಿಗೆ ಸಾಟಿಯಾಗುವಂತಹ ಪದಗಳನ್ನು ಕನ್ನಡದಲ್ಲಿ ಕಟ್ಟುವುದು ಹೇಗೆ ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಇದನ್ನು ಕೆಳಗೆ ವಿವರಿಸಲಾಗಿದೆ:
(ಕ) ಈ ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಂದು ಹೆಸರುಪದದ ಪರಿಚೆರೂಪವನ್ನು ಕೊಡಬೇಕಾಗುತ್ತಿದೆಯಾದರೆ, ಅಂತಹ ಕಡೆಗಳಲ್ಲಿ ಕನ್ನಡದ ಹೆಸರುಪದಕ್ಕೆ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ ಹೊಸಪದವನ್ನು ಉಂಟುಮಾಡಲು ಬರುತ್ತದೆ:
modest |
ಸಿಗ್ಗಿನ |
|
immodest |
ಸಿಗ್ಗಿಲ್ಲದ |
tolerant |
ತಾಳ್ಮೆಯ |
|
intolerant |
ತಾಳ್ಮೆಯಿಲ್ಲದ |
sincere |
ನೆಚ್ಚಿಕೆಯ |
|
insincere |
ನೆಚ್ಚಿಕೆಯಿಲ್ಲದ |
ಇಂತಹ ಕೆಲವು ಹೆಸರುಪದಗಳು ಉಳ್ಳ ಇಲ್ಲವೇ ಆದ ಎಂಬ ಪದದೊಂದಿಗೆ ಬರುತ್ತಿದ್ದು, ಅಂತಹ ಕಡೆಗಳಲ್ಲಿ ಉಳ್ಳ ಇಲ್ಲವೇ ಆದ ಎಂಬುದರ ಬದಲು ಇಲ್ಲದ ಇಲ್ಲವೇ ಅಲ್ಲದ ಎಂಬ ಪದವನ್ನು ಬಳಸಬೇಕಾಗುತ್ತದೆ:
efficient |
ಅಳವುಳ್ಳ |
|
inefficient |
ಅಳವಿಲ್ಲದ |
fertile |
ಎರುಬುಳ್ಳ |
|
infertile |
ಎರುಬಿಲ್ಲದ |
elegant |
ನಿರತೆಯುಳ್ಳ |
|
inelegant |
ನಿರತೆಯಿಲ್ಲದ |
decent |
ಹದನಾದ |
|
indecent |
ಹದನಲ್ಲದ |
(ಚ) ಈ ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಂದು ಎಸಕಪದದ ಪರಿಚೆರೂಪವನ್ನು ಬಳಸಬೇಕಾಗಿದೆಯಾದರೆ, ಅಂತಹ ಕಡೆಗಳಲ್ಲಿ ಅದರ ಅಲ್ಲಗಳೆಯುವ ರೂಪವನ್ನು ಬಳಸಲು ಬರುತ್ತದೆ; ಕನ್ನಡದಲ್ಲಿ ಎಸಕಪದಗಳಿಗೆ ಹಿಂಬೊತ್ತಿನ (ಮುಗಿದ) ಮತ್ತು ಮುಂಬೊತ್ತಿನ (ಮುಗಿಯುವ) ಪರಿಚೆರೂಪಗಳಿದ್ದು, ಇವೆರಡಕ್ಕೂ ಒಂದೇ ಬಗೆಯ ಅಲ್ಲಗಳೆಯುವ ರೂಪ ಇದೆ ಎಂಬುದನ್ನು ಇಲ್ಲಿ ಗಮನಿಸಬಹುದು:
mature |
ಬಲಿತ |
|
immature |
ಬಲಿಯದ |
complete |
ಮುಗಿದ |
|
incomplete |
ಮುಗಿಯದ |
conclusive |
ಕೊನೆಗೊಂಡ |
|
inconclusive |
ಕೊನೆಗೊಳ್ಳದ |
sensitive |
ನಾಟುವ |
|
insensitive |
ನಾಟದ |
contested |
ಪೊಣರುವ |
|
incontested |
ಪೊಣರದ |
mobile |
ಮಿಳಿರುವ |
|
immobile |
ಮಿಳಿರದ |
accessible |
ಸಿಗುವ |
|
inaccessible |
ಸಿಗದ |
coherent |
ಹೊಂದಿಕೊಳ್ಳುವ |
|
incoherent |
ಹೊಂದಿಕೊಳ್ಳದ |
(ಟ) ಕನ್ನಡದ ಪರಿಚೆಪದಗಳನ್ನೇ ಇದಕ್ಕಾಗಿ ಬಳಸಬೇಕಾಗುವಂತಹ ಕಡೆಗಳೂ ಹಲವಿವೆ; ಇಂತಹ ಕಡೆಗಳಲ್ಲಿ ಕನ್ನಡದ ಈ ಪದಗಳಿಗೇನೇ ನೇರವಾಗಿ ಅಲ್ಲದ ಎಂಬುದನ್ನು ಸೇರಿಸಿ in ಒಟ್ಟಿರುವ ಪದಗಳಿಗೆ ಸಾಟಿಯಾದ ಹೊಸಪದಗಳನ್ನು ಉಂಟುಮಾಡಲು ಬರುತ್ತದೆ:
direct |
ನೇರ |
|
indirect |
ನೇರವಲ್ಲದ |
dependent |
ಹೊರಕುಳಿ |
|
independent |
ಹೊರಕುಳಿಯಲ್ಲದ |
active |
ಚುರುಕು |
|
inactive |
ಚುರುಕಲ್ಲದ |
equal |
ಸಾಟಿ |
|
inequal |
ಸಾಟಿಯಲ್ಲದ |
(ತ) ಇಂಗ್ಲಿಶ್ನ ಪರಿಚೆಪದಗಳು able/ible ಎಂಬ ಒಟ್ಟಿನಲ್ಲಿ ಕೊನೆಗೊಳ್ಳುತ್ತವೆಯಾದರೆ, ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಬಲ್ಲ ಇಲ್ಲವೇ ತಕ್ಕ ಎಂಬುದರಲ್ಲಿ ಕೊನೆಗೊಳ್ಳುವ ಪದಗಳನ್ನು ಉಂಟುಮಾಡಲು ಬರುತ್ತದೆ ಎಂಬುದನ್ನು ಮೇಲೆ ()ರಲ್ಲಿ ನೋಡಿರುವೆವು; ಇಂತಹ ಪದಗಳಿಗೂ in ಒಟ್ಟನ್ನು ಸೇರಿಸಲಾಗುತ್ತಿದ್ದು, ಅವಕ್ಕೆ ಸಾಟಿಯಾದ ಹೊಸಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬಲ್ಲ ಇಲ್ಲವೇ ತಕ್ಕ ಎಂಬುದಕ್ಕೆ ಬದಲಾಗಿ ಆಗದ ಎಂಬುದನ್ನು ಬಳಸಬೇಕಾಗುತ್ತದೆ:
calculable |
ಎಣಿಸಬಲ್ಲ |
|
incalculable |
ಎಣಿಸಲಾಗದ |
palpable |
ಮುಟ್ಟಬಲ್ಲ |
|
impalpable |
ಮುಟ್ಟಲಾಗದ |
comparable |
ಹೋಲಿಸಬಲ್ಲ |
|
incomparable |
ಹೋಲಿಸಲಾಗದ |
tolerable |
ತಾಳಬಲ್ಲ |
|
intolerable |
ತಾಳಲಾಗದ |
curable |
ಮಾಜಿಸಬಲ್ಲ |
|
incurable |
ಮಾಜಿಸಲಾಗದ |
ಕೆಲವೆಡೆಗಳಲ್ಲಿ ಎಸಕಪದಗಳ ಮುಂಬೊತ್ತಿನ ಪರಿಚೆರೂಪವನ್ನೂ ಇಂತಹ able/ible ಎಂಬ ಒಟ್ಟಿನ ಪದಗಳಿಗೆ ಸಾಟಿಯಾಗಿ ಕೊಡಲು ಬರುತ್ತಿದ್ದು, ಅಂತಹ ಪದಗಳಿಗೆ in ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳ ಅಲ್ಲಗಳೆಯುವ ಪರಿಚೆರೂಪಗಳನ್ನು ಕೊಡಲು ಬರುತ್ತದೆ:
visible |
ಕಾಣಿಸುವ |
|
invisible |
ಕಾಣಿಸದ |
flexible |
ಬಳಕುವ |
|
inflexible |
ಬಳಕದ |
variable |
ಮಾರ್ಪಡುವ |
|
invariable |
ಮಾರ್ಪಡದ |
audible |
ಕೇಳಿಸುವ |
|
inaudible |
ಕೇಳಿಸದ |
(6) non ಒಟ್ಟು:
ಪಾಂಗಿನ ಇಲ್ಲವೇ ಪರಿಚೆಯ ಇಲ್ಲದಿಕೆಯನ್ನು ತಿಳಿಸುವ ಈ ಒಟ್ಟು ಇಲ್ಲದಿಕೆಯನ್ನಶ್ಟೇ ತಿಳಿಸುತ್ತದೆಯಲ್ಲದೆ ಸಾಮಾನ್ಯವಾಗಿ ಬೇರೆ ಹೆಚ್ಚಿನ ಹುರುಳುಗಳನ್ನು ಕೊಡಲು ಹೋಗುವುದಿಲ್ಲ.
ಕನ್ನಡದಲ್ಲಿ ಈ ಒಟ್ಟನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ; ಈ ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದವನ್ನು ಬಳಸಲು ಬರುತ್ತದೆ ಎಂಬುದರ ಮೇಲೆ ಇವುಗಳಲ್ಲೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ:
(ಕ) ಪರಿಚೆಪದದ ಇಲ್ಲವೇ ಹೆಸರುಪದದ ಪತ್ತುಗೆ ರೂಪವನ್ನು ಬಳಸಲು ಬರುತ್ತದೆಯಾದರೆ ಆ ಪದಗಳಿಗೆ ಇಲ್ಲದ ಇಲ್ಲವೇ ಅಲ್ಲದ ಎಂಬ ಪದವನ್ನು ಸೇರಿಸಿ ಹೇಳಬಹುದು:
profit |
ಪಡಪು |
|
non-profit |
ಪಡಪಿಲ್ಲದ |
sense |
ಹುರುಳು |
|
nonsense |
ಹುರುಳಿಲ್ಲದ |
essential |
ಅರಿದು |
|
non-essential |
ಅರಿದಲ್ಲದ |
(ಚ) ಎಸಕಪದದ ಪರಿಚೆರೂಪವನ್ನು ಬಳಸಲು ಬರುತ್ತದೆಯಾದರೆ, ಆ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನು ಬಳಸಬಹುದು:
stop |
ನಿಲ್ಲು |
|
non-stop |
ನಿಲ್ಲದ |
skid |
ಜಾರು |
|
non-skid |
ಜಾರದ |
conductor |
ಹರಿಸುವ |
|
non-conductor |
ಹರಿಸದ |
productive |
ಉಂಟುಮಾಡುವ |
|
non-productive |
ಉಂಟುಮಾಡದ |
(7) un ಒಟ್ಟು:
in ಒಟ್ಟಿನ ಬಳಕೆಯಿರುವಲ್ಲಿ ಕಾಣಿಸಿದ ಹಾಗೆ, ಇಲ್ಲಿಯೂ ಎಂತಹ ಕನ್ನಡ ಪದಗಳನ್ನು ಉಂಟುಮಾಡಬಹುದು ಎಂಬುದು ಈ ಒಟ್ಟನ್ನು ಎಂತಹ ಪದಗಳಿಗೆ ಸೇರಿಸಲಾಗಿದೆ, ಮತ್ತು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಪದರೂಪಗಳನ್ನು ಕೊಡಲು ಬರುತ್ತದೆ ಎಂಬುದರ ಮೇಲೆ ತೀರ್ಮಾನಿಸಬೇಕಾಗುತ್ತದೆ.
ಇಂಗ್ಲಿಶ್ನಲ್ಲಿ un ಒಟ್ಟನ್ನು ಮುಕ್ಯವಾಗಿ ಪರಿಚೆಪದಗಳಿಗೆ ಸೇರಿಸಲಾಗುತ್ತದೆ; ಆದರೆ, ಕನ್ನಡದಲ್ಲಿ ಇಂತಹ ಪರಿಚೆಪದಗಳಿಗೆ ಸಾಟಿಯಾಗಿ ಕೆಲವೆಡೆಗಳಲ್ಲಿ ಎಸಕಪದಗಳ ಇಲ್ಲವೇ ಕೂಡುಪದಗಳ ಪರಿಚೆರೂಪಗಳನ್ನು ಕೊಡಲು ಬರುತ್ತದೆ, ಮತ್ತು ಬೇರೆ ಕೆಲವೆಡೆಗಳಲ್ಲಿ ಹೆಸರುಪದಗಳ ಪರಿಚೆರೂಪಗಳನ್ನು ಕೊಡಲು ಬರುತ್ತದೆ.
(ಕ) ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಇಲ್ಲವೇ ಕೂಡುಪದದ ಪರಿಚೆರೂಪ ಇದೆಯಾದರೆ, ಅದರ ಅಲ್ಲಗಳೆಯುವ ರೂಪವನ್ನು un ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕೊಡಲು ಬರುತ್ತದೆ.
ಮೇಲೆ ತಿಳಿಸಿದ ಹಾಗೆ, ಎಸಕಪದಗಳ ಇಲ್ಲವೇ ಕೂಡುಪದಗಳ ಪರಿಚೆರೂಪಗಳು ಎರಡು ಬಗೆಯವಾಗಿರುತ್ತವೆ: (1) ನಡೆದ ಎಸಕವನ್ನು ಪರಿಚೆಯಾಗಿ ತಿಳಿಸುವ ಹಿಂಬೊತ್ತಿನ ರೂಪಗಳು (ಕೇಳಿದ), ಮತ್ತು (2) ಬಳಕೆಯಲ್ಲಿರುವ ಪರಿಚೆಯನ್ನು ಎಸಕವಾಗಿ ತಿಳಿಸುವ ಮುಂಬೊತ್ತಿನ ರೂಪಗಳು (ತಿನ್ನುವ); ಇವೆರಡಕ್ಕೂ ಒಂದೇ ಬಗೆಯ ಅಲ್ಲಗಳೆಯುವ ರೂಪಗಳು ಬರುತ್ತವೆ (ಕೇಳದ, ತಿನ್ನದ):
affected |
ನಾಟಿದ |
|
unaffected |
ನಾಟದ |
broken |
ಒಡೆದ |
|
unbroken |
ಒಡೆಯದ |
heard |
ಕೇಳಿದ |
|
unheard |
ಕೇಳದ |
ripe |
ಮಾಗಿದ |
|
unripe |
ಮಾಗದ |
reserved |
ಕಾದಿರಿಸಿದ |
|
unreserved |
ಕಾದಿರಿಸದ |
erring |
ತಪ್ಪುವ |
|
unerring |
ತಪ್ಪದ |
fit |
ಹೊಂದುವ |
|
unfit |
ಹೊಂದದ |
pleasant |
ಒಗ್ಗುವ |
|
unpleasant |
ಒಗ್ಗದ |
blushing |
ನಾಚುವ |
|
unblushing |
ನಾಚದ |
expected |
ಎದುರುನೋಡುವ |
|
unexpected |
ಎದುರುನೋಡದ |
(ಚ) ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದದ ಪತ್ತುಗೆರೂಪವನ್ನು ಬಳಸಲಾಗುತ್ತಿದೆಯಾದರೆ, ಆ ಹೆಸರುಪದಕ್ಕೆ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ, ಅದನ್ನು un ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕೊಡಲು ಬರುತ್ತದೆ:
aided |
ನೆರವಿನ |
|
unaided |
ನೆರವಿಲ್ಲದ |
fortunate |
ಸಯ್ಪಿನ |
|
unfortunate |
ಸಯ್ಪಿಲ್ಲದ |
happy |
ಸೊಮ್ಮಿನ |
|
unhappy |
ಸೊಮ್ಮಿಲ್ಲದ |
real |
ನನಸಿನ |
|
unreal |
ನನಸಲ್ಲದ |
natural |
ತನ್ಪರಿಜೆಯ |
|
unnatural |
ತನ್ಪರಿಜೆಯಲ್ಲದ |
ಇಂತಹ ಕಡೆಗಳಲ್ಲಿ ಹೆಸರುಪದದೊಂದಿಗೆ ಪತ್ತುಗೆ ಒಟ್ಟನ್ನು ಬಳಸುವ ಬದಲು ಆಗು ಇಲ್ಲವೇ ಇರು ಎಂಬ ಎಸಕಪದದ ಪರಿಚೆರೂಪವನ್ನು ಬಳಸಿರುವುದೂ ಇದೆ; ಅಂತಹ ಕಡೆಗಳಲ್ಲೂ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ನೇರವಾಗಿ ಹೆಸರುಪದಗಳಿಗೆ ಸೇರಿಸಿ, ಅದನ್ನು un ಒಟ್ಟನ್ನು ಸೇರಿಸಿರುವ ಇಂಗ್ಲಿಶ್ ಪರಿಚೆಪದಕ್ಕೆ ಸಾಟಿಯಾಗಿ ಕೊಡಲು ಬರುತ್ತದೆ:
rivalled |
ಎಣೆಯಿರುವ |
|
unrivalled |
ಎಣೆಯಿಲ್ಲದ |
savoury |
ಸವಿಯಾದ |
|
unsavoury |
ಸವಿಯಲ್ಲದ |
lucky |
ಸಯ್ಪುಳ್ಳ |
|
unlucky |
ಸಯ್ಪಿಲ್ಲದ |
known |
ಗೊತ್ತಿರುವ |
|
unknown |
ಗೊತ್ತಿಲ್ಲದ |
(ಟ) un ಒಟ್ಟನ್ನು able/ible ಎಂಬ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳಿಗೆ ಸೇರಿಸಲಾಗಿದೆಯಾದರೆ, ಅವಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ, ಮೇಲೆ ಒಟ್ಟಿರುವ ಪದಗಳ ಕುರಿತಾಗಿ ಹೇಳಿರುವಂತೆ, ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ:
(1) able/ible ಎಂಬ ಒಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಬಲ್ಲ ಎಂಬುದರಲ್ಲಿ ಕೊನೆಗೊಳ್ಳುವ ಪದಗಳನ್ನು ಬಳಸಲು ಬರುತ್ತದೆಯಾದರೆ, ಅವಕ್ಕೆ un ಒಟ್ಟನ್ನು ಸೇರಿಸಿರುವಲ್ಲಿ ಬಲ್ಲ ಪದದ ಬದಲು ಆಗದ ಎಂಬುದನ್ನು ಬಳಸಲು ಬರುತ್ತದೆ:
acceptable |
ಒಪ್ಪಬಲ್ಲ |
|
unacceptable |
ಒಪ್ಪಲಾಗದ |
alterable |
ಮಾರ್ಪಡಿಸಬಲ್ಲ |
|
unalterable |
ಮಾರ್ಪಡಿಸಲಾಗದ |
desirable |
ಬಯಸಬಲ್ಲ |
|
undesirable |
ಬಯಸಲಾಗದ |
deniable |
ಅಲ್ಲಗಳೆಯಬಲ್ಲ |
|
undeniable |
ಅಲ್ಲಗಳೆಯಲಾಗದ |
(2) able/ible ಎಂಬ ಒಟ್ಟಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳ ಪರಿಚೆರೂಪಗಳನ್ನು ಬಳಸಲು ಬರುತ್ತದೆಯಾದರೆ, ಅವಕ್ಕೆ un ಒಟ್ಟನ್ನು ಸೇರಿಸಿರುವಲ್ಲಿ ಎಸಕಪದಗಳ ಅಲ್ಲಗಳೆಯುವ ಪರಿಚೆರೂಪಗಳನ್ನು ಬಳಸಲು ಬರುತ್ತದೆ:
sociable |
ಸೇರುವ |
|
unsociable |
ಸೇರದ |
controllable |
ಹಿಡಿತಕ್ಕೆ ಸಿಗುವ |
|
uncontrollable |
ಹಿಡಿತಕ್ಕೆ ಸಿಗದ |
(ತ) ಕೆಲವೆಡೆಗಳಲ್ಲಿ in ಇಲ್ಲವೇ dis ಬಂದಿರುವಲ್ಲಿ ಅವುಗಳ ಬದಲು un ಎಂಬುದನ್ನು ಬಳಸಲು ಬರುತ್ತದೆ, ಮತ್ತು ಅಂತಹ ಕಡೆಗಳಲ್ಲಿ ಈ ವ್ಯತ್ಯಾಸದ ಮೂಲಕ ಅಲ್ಲಗಳೆಯುವ ಹುರುಳಿನಲ್ಲೇನೇ ಒಂದು ಬಗೆಯ ವ್ಯತ್ಯಾಸವನ್ನು ತೋರಿಸಲು ಬರುತ್ತದೆ: ಎತ್ತುಗೆಗಾಗಿ, ಮತ್ತು ಎಂಬ ಎರಡು ಬಳಕೆಗಳೂ ಇಂಗ್ಲಿಶ್ನಲ್ಲಿದ್ದು, ಅವುಗಳಲ್ಲಿ ಎರಡನೆಯ ಪದಕ್ಕೆ ಸರಿಪಡಿಸಲು ಸಾದ್ಯವೇ ಇಲ್ಲ ಎಂಬುದಾಗಿ ಒತ್ತಿಹೇಳುವ ಹುರುಳಿದೆ.
ಇಂತಹ ಕಡೆಗಳಲ್ಲಿ in ಇಲ್ಲವೇ dis ಒಟ್ಟುಗಳನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಇಂತಹ ಹೆಚ್ಚಿನ ಹುರುಳನ್ನು ಕೊಡಬಲ್ಲ ಪದಗಳನ್ನು ಇಲ್ಲವೇ ನುಡಿತಗಳನ್ನು ಕನ್ನಡದಲ್ಲಿ ಕಟ್ಟಬೇಕಾಗುತ್ತದೆ. ಸಾಮಾನ್ಯವಾಗಿ ಈ ಮೂರು ಒಟ್ಟುಗಳಲ್ಲಿ un ಎಂಬುದು ನೇರವಾದ ಅಲ್ಲಗಳೆತವನ್ನು ತಿಳಿಸಲು ಬಳಕೆಯಾಗುತ್ತದೆ.
(ಈ ಒಳಪಸುಗೆ ಇಂಗ್ಲಿಶ್ ಪದಗಳಿಗೆ…-13ರಲ್ಲಿ ಮುಂದುವರಿಯುತ್ತದೆ)
<< ಬಾಗ-11
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-11
ಇಂಗ್ಲಿಶ್ನಲ್ಲಿ ಒಂದು ಪದ ತಿಳಿಸುವ ಹುರುಳನ್ನು ಅಲ್ಲಗಳೆಯಲು ಇಲ್ಲವೇ ಅದರ ಎದುರುಹುರುಳನ್ನು ತಿಳಿಸಲು ಮುಕ್ಯವಾಗಿ a/an, anti, de, dis, in, non, ಮತ್ತು un ಎಂಬ ಏಳು ಮುನ್ನೊಟ್ಟುಗಳನ್ನು ಬಳಸಲಾಗುತ್ತದೆ; mal ಮತ್ತು mis ಎಂಬ ಬೇರೆ ಎರಡು ಒಟ್ಟುಗಳೂ ಇವಕ್ಕೆ ಹತ್ತಿರದ ಹುರುಳನ್ನು ಕೊಡುತ್ತವೆಯೆಂದು ಹೇಳಬಹುದು; ಆದರೆ ಇವಕ್ಕೆ ಅಲ್ಲಗಳೆಯುವ ಹುರುಳಿಗಿಂತಲೂ ತಪ್ಪು ಇಲ್ಲವೇ ಕೆಟ್ಟ ಎಂಬ ಹುರುಳು, ಮತ್ತು ಕೀಳ್ಪಡಿಸುವ ಹುರುಳಿದೆ.
ಕನ್ನಡದಲ್ಲಿ ಇಂತಹ ಅಲ್ಲಗಳೆಯುವ ಇಲ್ಲವೇ ಎದುರುಹುರುಳನ್ನು ತಿಳಿಸುವ ಮುನ್ನೊಟ್ಟುಗಳಿಲ್ಲ. ಹಾಗಾಗಿ, ಇಂತಹ ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಇಶ್ಟೊಂದು ಅಡಕವಾಗಿ ಉಂಟುಮಾಡಲು ಬರುವುದಿಲ್ಲ.
ಇದು ಕನ್ನಡದ ಒಂದು ತೊಡಕು ಎಂಬುದಾಗಿ ಕೆಲವರಿಗೆ ಅನಿಸಬಹುದು, ಮತ್ತು ಇಂತಹ ಕಡೆಗಳಲ್ಲಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟಲು ಹೋಗುವ ಬದಲು, ಇಂಗ್ಲಿಶ್ನಂತಹವೇ ಮುನ್ನೊಟ್ಟುಗಳಿರುವ ಸಂಸ್ಕ್ರುದಲ್ಲಿ ಹೊಸಪದಗಳನ್ನು ಕಟ್ಟಿ ಅವನ್ನು ಕನ್ನಡಕ್ಕೆ ಎರವಲು ತರುವುದೇ ಅವರಿಗೆ ಹೆಚ್ಚು ಸುಳುವಾದ ಕೆಲಸವೆಂದು ಅನಿಸಬಹುದು.
ಆದರೆ, ಹೀಗೆ ಮಾಡುವುದರಿಂದ ಬರಹದ ಕನ್ನಡಕ್ಕೂ ಮಾತಿನ ಕನ್ನಡಕ್ಕೂ ನಡುವಿರುವ ಅಂತರ ಇನ್ನಶ್ಟು ಹೆಚ್ಚುತ್ತದೆ, ಮತ್ತು ಕನ್ನಡದ ಸೊಗಡು ಬರಹದಲ್ಲಿ ಉಳಿಯುವುದಿಲ್ಲ. ಹಾಗಾಗಿ, ಇಂತಹ ಅಲ್ಲಗಳೆಯುವ ಪದಗಳಿಗೂ ಕನ್ನಡದಲ್ಲಿ ಬಳಕೆಯಲ್ಲಿರುವ ಹಮ್ಮುಗೆಗಳನ್ನೇ ಬಳಸಿ ಹೊಸ ಪದಗಳನ್ನು ಕಟ್ಟುವುದೇ ನಮ್ಮ ಮುಂದಿರುವ ಒಳ್ಳೆಯ ಮತ್ತು ಸರಿಯಾದ ದಾರಿಯಾಗಿದೆ.
ಇದಲ್ಲದೆ, ಕನ್ನಡದವೇ ಆದ ಪದಗಳನ್ನು ಇಲ್ಲವೇ ಪದರೂಪಗಳನ್ನು ಬಳಸಿದಾಗ, ಇಂಗ್ಲಿಶ್ ಪದಗಳಲ್ಲಿ ಕಾಣಿಸಿರದ ಕೆಲವು ಹೆಚ್ಚಿನ ಹುರುಳುಗಳನ್ನು ಕನ್ನಡದಲ್ಲಿ ಕಾಣಿಸಲು ಬರುತ್ತದೆ; ಇಂತಹ ಹೆಚ್ಚಿನ ಹುರುಳುಗಳನ್ನು ಕಾಣಿಸುವುದು ಇಂಗ್ಲಿಶ್ ನುಡಿಗೆ ಅವಶ್ಯವಿಲ್ಲದಿರಬಹುದು; ಆದರೆ, ಕನ್ನಡ ನುಡಿ ಇದು ಅವಶ್ಯವೆಂದು ತಿಳಿದಿರುವುದರಿಂದಲೇ ಅದನ್ನು ಕಾಣಿಸಲು ಕನ್ನಡದಲ್ಲಿ ಹೆಚ್ಚಿನ ಹಮ್ಮುಗೆಗಳು ಬೆಳೆದುಬಂದಿವೆ. ಕನ್ನಡದವೇ ಆದ ಪದಗಳನ್ನು ಬಳಸಿದಲ್ಲಿ ಕನ್ನಡಕ್ಕೆ ಅವಶ್ಯವಿರುವ ಇಂತಹ ಹುರುಳುಗಳನ್ನು ಕಾಣಿಸಲು ಬರುತ್ತದೆ.
ಎತ್ತುಗೆಗಾಗಿ, (ಕ) ಒಂದು ಎಸಕದ ಇಲ್ಲವೇ ಪಾಂಗಿನ ಇರುವಿಕೆಯನ್ನು ಅಲ್ಲಗಳೆಯಲು ಕನ್ನಡದಲ್ಲಿ ಇಲ್ಲ ಪದವನ್ನು ಬಳಸಲಾಗುತ್ತದೆ, ಮತ್ತು (ಚ) ಒಂದು ಎಸಕ ಇಲ್ಲವೇ ಪಾಂಗಿಗೂ ಇನ್ನೊಂದು ಪಾಂಗಿಗೂ ನಡುವಿರುವ ಪತ್ತುಗೆಯನ್ನು ಅಲ್ಲಗಳೆಯಲು ಅಲ್ಲ ಪದವನ್ನು ಬಳಸಲಾಗುತ್ತದೆ.
(ಕ) ಇಲ್ಲ ಪದದ ಬಳಕೆ:
(1ಕ) ನಿಮ್ಮ ಪುಸ್ತಕ ಇಲ್ಲಿದೆ.
(1ಚ) ನಿಮ್ಮ ಪುಸ್ತಕ ಇಲ್ಲಿಲ್ಲ.
(2ಕ) ಅವನು ಮನೆಗೆ ಹೋಗಿದ್ದಾನೆ.
(2ಚ) ಅವನು ಮನೆಗೆ ಹೋಗಲಿಲ್ಲ.
(ಚ) ಅಲ್ಲ ಪದದ ಬಳಕೆ:
(1ಕ) ಇದು ನಿಮ್ಮ ಪುಸ್ತಕ
(1ಚ) ಇದು ನಿಮ್ಮ ಪುಸ್ತಕ ಅಲ್ಲ.
(2ಕ) ಮನೆಗೆ ಹೋದವನು ಅವನು.
(2ಚ) ಮನೆಗೆ ಹೋದವನು ಅವನಲ್ಲ.
ಇಂಗ್ಲಿಶ್ನಲ್ಲಿ ಈ ಎರಡು ಬಗೆಯ ಅಲ್ಲಗಳೆತಗಳ ನಡುವಿನ ವ್ಯತ್ಯಾಸವನ್ನು ಕಾಣಿಸಲು ಬರುವುದಿಲ್ಲ; ಯಾಕೆಂದರೆ, ಈ ಎರಡು ಕಡೆಗಳಲ್ಲೂ not ಎಂಬ ಒಂದೇ ಪದವನ್ನು ಅದರಲ್ಲಿ ಬಳಸಲಾಗುತ್ತದೆ (ಇದು ಇಂಡೋ-ಯುರೋಪಿಯನ್ ನುಡಿಗಳ ಒಂದು ದೊಡ್ಡ ಕೊರತೆ ಎಂಬುದಾಗಿ ಬರ್ಟ್ರಾಂಡ್ ರಸೆಲ್ ಅವರು ಬರೆದಿದ್ದಾರೆ). ಪದಗಳನ್ನು ಅಲ್ಲಗಳೆಯುವಲ್ಲೂ ಇಂಗ್ಲಿಶ್ನಲ್ಲಿ ಈ ಹುರುಳಿನ ವ್ಯತ್ಯಾಸ ಕಾಣಿಸುವುದಿಲ್ಲ, ಆದರೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಳಗೆ ವಿವರಿಸಿದ ಹಾಗೆ, ಇಂಗ್ಲಿಶ್ನ ಅಲ್ಲಗಳೆಯುವ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕೆಲವೆಡೆಗಳಲ್ಲಿ ಇಲ್ಲದ ಎಂಬುದನ್ನು, ಮತ್ತು ಬೇರೆ ಕೆಲವೆಡೆಗಳಲ್ಲಿ ಅಲ್ಲದ ಎಂಬುದನ್ನು ಕನ್ನಡದಲ್ಲಿ ಬಳಸಬೇಕಾಗುತ್ತದೆ ಎಂಬುದು ಈ ವ್ಯತ್ಯಾಸದಿಂದಾಗಿ ಮೂಡಿಬಂದಿದೆ.
ಮೇಲೆ ಕೊಟ್ಟಿರುವ ಒಂಬತ್ತು ಮುನ್ನೊಟ್ಟುಗಳನ್ನೂ ಅಲ್ಲಗಳೆಯಲು ಬಳಸಲಾಗುತ್ತಿದೆಯಾದರೂ ಅವುಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ; ಈ ಒಟ್ಟುಗಳಲ್ಲಿ un ಎಂಬುದು ಎಲ್ಲಕ್ಕಿಂತ ಹೆಚ್ಚು ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ; ಕೆಲವು ಪದಗಳಲ್ಲಿ ಅದನ್ನು in ಇಲ್ಲವೇ dis ಎಂಬವುಗಳ ಬದಲಾಗಿ ಬಳಸಲು ಬರುತ್ತದೆ; ಆದರೆ, ಅಂತಹ ಕಡೆಗಳಲ್ಲಿ ಅದು ಅವಕ್ಕಿಂತ ತುಸು ಬೇರಾಗಿರುವ ಹುರುಳನ್ನು ಕೊಡಬಲ್ಲುದು.
ಈ ಒಟ್ಟುಗಳಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಕಟ್ಟುವುದು ಹೇಗೆ ಎಂಬುದನ್ನು ವಿವರಿಸಲು ಕೆಳಗೆ ಈ ಒಟ್ಟುಗಳನ್ನು ಒಂದೊಂದಾಗಿ ಪರಿಗಣಿಸಲಾಗಿದೆ:
(1) a/an ಒಟ್ಟು:
ಅಲ್ಲಗಳೆಯುವ ಹುರುಳಿನಲ್ಲಿ ಬಳಕೆಯಾಗುವ ಈ ಒಟ್ಟನ್ನು ಮುಕ್ಯವಾಗಿ ಅರಿಮೆಯ ಬರಹಗಳಲ್ಲಿ ಬಳಸಲಾಗುತ್ತದೆ, ಮತ್ತು ಹೆಚ್ಚಿನೆಡೆಗಳಲ್ಲೂ ಇದನ್ನು ಹೆಸರುಪದಗಳಿಂದ ಪಡೆದಿರುವ ಪರಿಚೆಪದಗಳಿಗೆ ಸೇರಿಸಲಾಗುತ್ತದೆ. ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಹೆಸರುಪದಗಳಿಗೇನೇ ನೇರವಾಗಿ ಇಲ್ಲದ ಇಲ್ಲವೇ ಅಲ್ಲದ ಎಂಬುದನ್ನು ಸೇರಿಸಿ ಬಳಸಲು ಬರುತ್ತದೆ:
chromatic |
ಬಣ್ಣದ |
|
achromatic |
ಬಣ್ಣವಿಲ್ಲದ |
symmetrical |
ಸರಿಬದಿಯ |
|
asymmetrical |
ಸರಿಬದಿಯಲ್ಲದ |
political |
ಆಳ್ವಿಕೆಯ |
|
apolitical |
ಆಳ್ವಿಕೆಯಲ್ಲದ |
hydrous |
ತೇವದ |
|
ahydrous |
ತೇವವಿಲ್ಲದ |
ಕೆಲವೆಡೆಗಳಲ್ಲಿ ಇಂತಹ ಹೆಸರುಪದಗಳ ಪರಿಚೆರೂಪಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದದ ಪರಿಚೆರೂಪವನ್ನು ಬಳಸಲಾಗುತ್ತಿದ್ದು, ಇಂತಹ ಕಡೆಗಳಲ್ಲಿ ಇಂಗ್ಲಿಶ್ನ a/an ಒಟ್ಟಿರುವ ಪದಗಳಿಗೆ ಸಾಟಿಯಾಗಿ ಅವುಗಳ ಅಲ್ಲಗಳೆಯುವ ರೂಪವನ್ನು ಬಳಸಲು ಬರುತ್ತದೆ:
septic |
ಕೊಳೆಸುವ |
|
aseptic |
ಕೊಳೆಸದ |
atheist ಎಂಬ ಪದದಲ್ಲಿ ಇದನ್ನು ಮಂದಿಯನ್ನು ಹೆಸರಿಸುವ theist ನಂಬಿಗ ಎಂಬ ಒಂದು ಹೆಸರುಪದಕ್ಕೇನೇ ಸೇರಿಸಲಾಗಿದ್ದು, ಇಂತಹ ಕಡೆಗಳಲ್ಲಿ ಕನ್ನಡದ ಇಲಿ ಎಂಬ ಒಟ್ಟನ್ನು ಹೆಸರುಪದದ ಹಿಂದಿರುವ ಎಸಕಪದಕ್ಕೆ ಸೇರಿಸಿ ನಂಬಿಲಿ ಎಂಬಂತಹ ಪದವನ್ನು ಪಡೆಯಲು ಬರುತ್ತದೆ.
(2) anti ಒಟ್ಟು:
ಈ ಒಟ್ಟನ್ನು ಬಳಸಿರುವ ಪದಗಳು ಮಂದಿಯನ್ನು ತಿಳಿಸುತ್ತಿವೆಯಾದರೆ ಕನ್ನಡದಲ್ಲಿ ಎದುರಿ ಎಂಬ ಪದವನ್ನು ಬಳಸಲು ಬರುತ್ತದೆ, ಮತ್ತು ಉಳಿದೆಡೆಗಳಲ್ಲಿ ಎದುರುಕ ಎಂಬ ಪದವನ್ನು ಬಳಸಲು ಬರುತ್ತದೆ:
abortion |
ಬಸಿರಳಿತ |
|
antiabortion |
ಬಸಿರಳಿತದೆದುರಿ |
apartheid |
ಬೇರ್ಪಡಿಕೆ |
|
antiapartheid |
ಬೇರ್ಪಡಿಕೆಯೆದುರಿ |
austerity |
ಕಟ್ಟುನಿಟ್ಟು |
|
antiausterity |
ಕಟ್ಟುನಿಟ್ಟೆದುರಿ |
migration |
ವಲಸೆ |
|
antimigration |
ವಲಸೆಯೆದುರಿ |
|
|
|
|
|
allergy |
ಒಗ್ಗದಿಕೆ |
|
antiallergy |
ಒಗ್ಗದಿಕೆಯೆದುರುಕ |
erosion |
ಕೊರೆತ |
|
antierosion |
ಕೊರೆತದೆದುರುಕ |
fatigue |
ದಣಿವು |
|
antifatigue |
ದಣಿವೆದುರುಕ |
dandruff |
ಹೆಡಸು |
|
antidandruff |
ಹೆಡಸೆದುರುಕ |
cavity |
ತೊಳ್ಳೆ |
|
anticavity |
ತೊಳ್ಳೆದುರುಕ |
(3) de ಒಟ್ಟು:
ಇಂಗ್ಲಿಶ್ನಲ್ಲಿ ಇದನ್ನು ಎಸಕಪದಗಳಿಗೆ ಇಲ್ಲವೇ ಅವುಗಳಿಂದ ಪಡೆದ ಹೆಸರುಪದಗಳಿಗೆ ಮತ್ತು ಪರಿಚೆಪದಗಳಿಗೆ ಸೇರಿಸಲಾಗುತ್ತದೆ; ಇದಕ್ಕೆ ಮುಕ್ಯವಾಗಿ (ಕ) ಕೆಳಗೆ ಇಲ್ಲವೇ ದೂರ, (ಚ) ತುಂಬಾ, ಹೆಚ್ಚು, ಮತ್ತು (ಟ) ಕಳೆ ಇಲ್ಲವೇ ಹಿಮ್ಮರಳು ಎಂಬಂತಹ ಮೂರು ಹುರುಳುಗಳಿವೆ.
ಈ ಒಟ್ಟನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಕೆಲವೆಡೆಗಳಲ್ಲಿ ಹೆಸರುಪದಗಳು ಕಾಣಿಸಿಕೊಳ್ಳುತ್ತವೆ (carbon ಮಸಿ), ಮತ್ತು ಬೇರೆ ಕೆಲವೆಡೆಗಳಲ್ಲಿ ಹೆಸರುಪದಗಳೊಂದಿಗೆ ಎಸಕಪದಗಳನ್ನು ಬಳಸಿರುವ ಕೂಡುಪದಗಳು ಕಾಣಿಸಿಕೊಳ್ಳುತ್ತವೆ (foliate ಸೊಪ್ಪು ಬೆಳೆ).
ಇಂತಹ ಪದಗಳಿಗೆ ಸಾಟಿಯಾಗುವಂತಹ ಎಸಕಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಇಂಗ್ಲಿಶ್ನ ಒಟ್ಟು ಕೊಡಬೇಕಾಗಿರುವ ಹುರುಳಿರುವಂತಹ ಎಸಕಪದಗಳನ್ನು (ಕ) ಹೆಸರುಪದಗಳಿಗೆ ನೇರವಾಗಿ ಸೇರಿಸಬಹುದು, ಮತ್ತು (ಚ) ಕೂಡುಪದಗಳಲ್ಲಿ ಬರುವ ಎಸಕಪದಗಳಿಗೆ ಬದಲಾಗಿ ಬಳಸಬಹುದು:
(ಕ) ಹೆಸರುಪದಗಳಿಗೆ ನೇರವಾಗಿ ಸೇರಿಸುವುದು:
carbon |
ಮಸಿ |
|
decarbon |
ಮಸಿಕಳೆ |
louse |
ಹೇನು |
|
delouse |
ಹೇನುಕಳೆ |
nude |
ಬತ್ತಲೆ |
|
denude |
ಬತ್ತಲೆ ಮಾಡು |
face |
ಮೋರೆ |
|
deface |
ಮೋರೆ ಕೆಡಿಸು |
form |
ಪರಿಜು |
|
deform |
ಪರಿಜು ಕೆಡಿಸು |
grade |
ಮಟ್ಟ |
|
degrade |
ಮಟ್ಟ ಇಳಿಸು |
value |
ಬೆಲೆ |
|
devalue |
ಬೆಲೆ ತಗ್ಗಿಸು |
(ಚ) ಕೂಡುಪದಗಳಲ್ಲಿ ಬರುವ ಎಸಕಪದಗಳಿಗೆ ಬದಲಾಗಿ ಬಳಸುವುದು:
compress |
ಒತ್ತಡ ಹಾಕು |
|
decompress |
ಒತ್ತಡ ತೆಗೆ |
foliate |
ಸೊಪ್ಪು ಬೆಳೆ |
|
defoliate |
ಸೊಪ್ಪು ಕಳೆ |
mobilize |
ಪಡೆ ಸೇರಿಸು |
|
demobilize |
ಪಡೆ ಕಳೆ |
classify |
ಗುಂಪಿಸು |
|
declassify |
ಗುಂಪಳಿ |
humidify |
ಈರ ಹೆಚ್ಚಿಸು |
|
dehumidify |
ಈರ ಕಳೆ |
(4) dis ಒಟ್ಟು:
ಈ ಒಟ್ಟಿಗೆ (ಕ) ಅಲ್ಲಗಳೆಯುವ ಹುರುಳು ಮತ್ತು (ಚ) ಎದುರು ಹುರುಳು ಎಂಬುದಾಗಿ ಎರಡು ಬಗೆಯ ಹುರುಳುಗಳಿವೆ; ಅಲ್ಲಗಳೆಯುವ ಹುರುಳಿರುವಲ್ಲಿ (1) ಅದನ್ನು ಎಸಕಪದಗಳಿಗೆ ಸೇರಿಸಿದಾಗ ಅದು ಎಸಕವನ್ನು ಅಲ್ಲಗಳೆಯುತ್ತದೆ, ಮತ್ತು (2) ಹೆಸರುಪದ ಇಲ್ಲವೇ ಪರಿಚೆಪದಕ್ಕೆ ಸೇರಿಸಿದಾಗ ಅದು ಪಾಂಗಿನ ಇಲ್ಲವೇ ಪರಿಚೆಯ ಇರವನ್ನು ಅಲ್ಲಗಳೆಯುತ್ತದೆ.
(ಕ1) ಎಸಕವನ್ನು ಅಲ್ಲಗಳೆಯುವುದಿದ್ದಲ್ಲಿ, ಅದಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ ಎಸಕಪದದ ಅಲ್ಲಗಳೆಯುವ ಜೋಡಿಸುವ ರೂಪಕ್ಕೆ ಇರು ಇಲ್ಲವೇ ಆಗು ಎಂಬುದನ್ನು ಸೇರಿಸಿ ಬಳಸಲು ಬರುತ್ತದೆ:
agree |
ಒಪ್ಪು |
|
disagree |
ಒಪ್ಪದಿರು |
satisfy |
ತಣಿ |
|
dissatisfy |
ತಣಿಯದಿರು |
believe |
ನಂಬು |
|
disbelieve |
ನಂಬದಿರು |
approve |
ಮೆಚ್ಚು |
|
disapprove |
ಮೆಚ್ಚದಿರು |
appear |
ತೋರು |
|
disappear |
ತೋರದಾಗು |
(ಕ2) ಪಾಂಗು ಇಲ್ಲವೇ ಪರಿಚೆಯ ಇರವನ್ನು ಅಲ್ಲಗಳೆಯುವುದಿದ್ದಲ್ಲಿ, ಅದಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ ಇಲ್ಲದಿಕೆ ಇಲ್ಲವೇ ಇಲ್ಲದ ಎಂಬ ಪದಗಳನ್ನು ಬಳಸಲು ಬರುತ್ತದೆ; ಕೆಲವೆಡೆಗಳಲ್ಲಿ ಎಸಕಪದದ ಅಲ್ಲಗಳೆಯುವ ಪರಿಚೆರೂಪವನ್ನೂ ಬಳಸಲು ಬರುತ್ತದೆ:
respect |
ತಕ್ಕುಮೆ |
|
disrespect |
ತಕ್ಕುಮೆಯಿಲ್ಲದಿಕೆ |
approbation |
ಮೆಚ್ಚುಗೆ |
|
disapprobation |
ಮೆಚ್ಚುಗೆಯಿಲ್ಲದಿಕೆ |
ability |
ಅಳವು |
|
disability |
ಅಳವಿಲ್ಲದಿಕೆ |
use |
ಬಳಕೆ |
|
disuse |
ಬಳಕೆಯಿಲ್ಲದಿಕೆ |
interested |
ಒಲವಿರುವ |
|
disinterested |
ಒಲವಿಲ್ಲದ |
|
|
|
|
|
similar |
ಹೋಲುವ |
|
dissimilar |
ಹೋಲದ |
content |
ತಣಿದ |
|
discontent |
ತಣಿಯದ |
honest |
ಸಯ್ದ |
|
dishonest |
ಸಯ್ಯದ |
(ಚ) ಎದುರು ಹುರುಳಿರುವಲ್ಲಿ ಅಂತಹ ಹುರುಳನ್ನು ಕೊಡಬಲ್ಲ ಬೇರೆಯೇ ಎಸಕಪದವನ್ನು ಇಲ್ಲವೇ ಅದರ ಪರಿಚೆರೂಪವನ್ನು ಬಳಸಬೇಕಾಗುತ್ತದೆ:
band |
ಕೂಟ |
|
disband |
ಕೂಟ ಮುರಿ |
figure |
ಪಾಂಗು |
|
disfigure |
ಪಾಂಗು ಕೆಡಿಸು |
franchise |
ಹಕ್ಕು |
|
disfranchise |
ಹಕ್ಕು ಕಳೆ |
plume |
ಗರಿ |
|
displume |
ಗರಿ ತೆಗೆ |
|
|
|
|
|
parity |
ಎಣೆ |
|
disparity |
ಎಣೆಗೆಡುಹ |
pleasure |
ನಲಿವು |
|
displeasure |
ನಲಿವು ಕಳೆತ |
|
|
|
|
|
claim |
ಹಕ್ಕು ಕೇಳು |
|
disclaim |
ಹಕ್ಕು ಬಿಡು |
colour |
ಬಣ್ಣ ಕೊಡು |
|
discolour |
ಬಣ್ಣ ಬಿಡು |
entangle |
ಸಿಕ್ಕು ಕಟ್ಟು |
|
disentangle |
ಸಿಕ್ಕು ಬಿಡಿಸು |
locate |
ನೆಲೆಗೊಳ್ಳು |
|
dislocate |
ನೆಲೆ ತಪ್ಪು |
(ಈ ಒಳಪಸುಗೆ ಇಂಗ್ಲಿಶ್ ಪದಗಳಿಗೆ…-12ರಲ್ಲಿ ಮುಂದುವರಿಯುತ್ತದೆ)
<< ಬಾಗ-10
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-10
ಹೊತ್ತಿಗೆ ಸಂಬಂದಿಸಿದಂತೆ ಮುಕ್ಯವಾಗಿ ex, fore, post, pre, ante, re, neo, paleo, ಮತ್ತು proto ಎಂಬ ಒಂಬತ್ತು ಮುನ್ನೊಟ್ಟುಗಳು ಇಂಗ್ಲಿಶ್ನಲ್ಲಿ ಬಳಕೆಯಲ್ಲಿವೆ; ಕನ್ನಡದಲ್ಲಿ ಮುನ್ನೊಟ್ಟುಗಳಿಲ್ಲದಿದ್ದರೂ ಕೆಲವು ಪದಗಳನ್ನು ಇಲ್ಲವೇ ಬೇರುಗಳನ್ನು ಅವುಗಳ ಜಾಗದಲ್ಲಿರಿಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ. ಎತ್ತುಗೆಗಾಗಿ, ಇಂಗ್ಲಿಶ್ನ fore ಎಂಬ ಮುನ್ನೊಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮುನ್ ಎಂಬ ಬೇರನ್ನು ಅದೇ ಜಾಗದಲ್ಲಿ ಬಳಸಲು ಬರುತ್ತದೆ (foresee ಮುಂಗಾಣು).
ಹೊತ್ತಿನ ಹುರುಳನ್ನು ಕೊಡುವ ಮೇಲಿನ ಒಂಬತ್ತು ಮುನ್ನೊಟ್ಟುಗಳಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) ex ಒಟ್ಟು:
ಮೊದಲಿನ ಎಂಬ ಹುರುಳಿರುವ ಈ ಒಟ್ಟಿಗೆ ಬದಲಾಗಿ ಕನ್ನಡದಲ್ಲಿ ಮುನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ:
friend |
ಗೆಳೆಯ |
|
ex-friend |
ಮುನ್ಗೆಳೆಯ |
husband |
ಗಂಡ |
|
ex-husband |
ಮುನ್ಗಂಡ |
president |
ಮೇಲಾಳು |
|
ex-president |
ಮುನ್ಮೇಲಾಳು |
typist |
ಬೆರಳಚ್ಚುಗ |
|
ex-typist |
ಮುನ್ಬೆರಳಚ್ಚುಗ |
ಕನ್ನಡದ ಮುನ್ ಮತ್ತು ಹಿನ್ ಎಂಬ ಎರಡು ಪರಿಚೆಬೇರುಗಳ ಬಳಕೆಯಲ್ಲಿ ತುಸು ಗೊಂದಲವಿರುವ ಹಾಗೆ ಕಾಣಿಸುತ್ತದೆ; ಯಾಕೆಂದರೆ, ಮೇಲಿನ ಪದಗಳಲ್ಲಿ ex ಎಂಬುದು ಮೊದಲಿನ ಎಂಬ ಹುರುಳನ್ನು ಕೊಡುತ್ತದೆ ಎಂದು ಹೇಳುವ ಬದಲು ಹಿಂದಿನ ಎಂಬ ಹುರುಳನ್ನು ಕೊಡುತ್ತದೆಯೆಂದೂ ಹೇಳಲು ಬರುತ್ತದೆ, ಮತ್ತು ಹಾಗಿದ್ದಲ್ಲಿ ಅದಕ್ಕೆ ಸಾಟಿಯಾಗಿ ಹಿನ್ ಎಂಬುದನ್ನು ಬಳಸಬಹುದಲ್ಲವೇ ಎಂದು ಕೆಲವರಿಗೆ ಅನಿಸಬಹುದು (ಹಿನ್ಗೆಳೆಯ, ಹಿನ್ಗಂಡ).
ನಿಜಕ್ಕೂ ಇದು ಗೊಂದಲವಲ್ಲ; ಹಿನ್ ಮತ್ತು ಮುನ್ ಎಂಬವು ಮುಕ್ಯವಾಗಿ ಇಂಬಿನ ಹುರುಳನ್ನು ಕೊಡುವ ಪರಿಚೆಬೇರುಗಳಾಗಿದ್ದು, ಹೊತ್ತಿನ ಹುರುಳನ್ನು ಕೊಡುವುದಕ್ಕಾಗಿ ಬಳಸುವುದು ಅವುಗಳ ಹೆಚ್ಚಿನ ಬಳಕೆಯಾಗಿದೆ; ಆದರೆ, ಹೀಗೆ ಅವುಗಳ ಬಳಕೆಯನ್ನು ಹಿಗ್ಗಿಸುವಲ್ಲಿ ಬೇರೆ ಕೆಲವು ವಿಶಯಗಳೂ ತೊಡಗಿಕೊಳ್ಳುತ್ತವೆ, ಮತ್ತು ಇದರಿಂದಾಗಿ ಹಿನ್ ಮತ್ತು ಮುನ್ ಎಂಬವುಗಳ ಆಯ್ಕೆಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.
ಎತ್ತುಗೆಗಾಗಿ, ಒಂದು ಹೊತ್ತಗೆಗೆ ಮುಂಬದಿ ಮತ್ತು ಹಿಂಬದಿಗಳಿದ್ದು, ಮುಂಬದಿಯಲ್ಲಿ ಕಾಣಿಸುವ ನುಡಿಯನ್ನು ಮುನ್ನುಡಿ ಎಂಬುದಾಗಿ, ಮತ್ತು ಹಿಂಬದಿಯಲ್ಲಿ ಕಾಣಿಸುವ ನುಡಿಯನ್ನು ಹಿನ್ನುಡಿ ಎಂಬುದಾಗಿ ಕರೆಯಲಾಗುತ್ತದೆ; ಇದಕ್ಕೆ ಬದಲು, ಹಿನ್ನಡವಳಿ ಎಂಬುದರಲ್ಲಿ ಹಿನ್ ಎಂಬುದನ್ನು ಬಳಸಿರುವುದಕ್ಕೆ ಅದು ತಿಳಿಸುವ ಸಂಗತಿಗಳು ಹಿಂದೆಯೇ ನಡೆದು ಹೋಗಿವೆ ಎಂಬ ಬೇರೆಯೇ ವಿಶಯ ಕಾರಣವಾಗಿದೆ. ಹೊತ್ತಗೆಗಿರುವ ಹಾಗೆ ನಡವಳಿಗೆ ಹಿಂಬದಿ-ಮುಂಬದಿಗಳಿಲ್ಲ.
(2) fore ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ ಮೊದಲು ಎಂಬ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮುನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ; ಇಂಗ್ಲಿಶ್ನಲ್ಲಿ ಇರುವ ಹಾಗೆ, ಕನ್ನಡದಲ್ಲೂ ಇದನ್ನು ಎಸಕಪದ ಮತ್ತು ಹೆಸರುಪದಗಳೆರಡರ ಮೊದಲು ಬಳಸಲು ಬರುತ್ತದೆ:
(ಕ) ಎಸಕಪದಗಳ ಮೊದಲು:
warn |
ಎಚ್ಚರಿಸು |
|
forewarn |
ಮುನ್ನೆಚ್ಚರಿಸು |
tell |
ಓರು |
|
foretell |
ಮುನ್ನೋರು |
stall |
ತಡೆ |
|
forestall |
ಮುಂತಡೆ |
see |
ಕಾಣು |
|
foresee |
ಮುಂಗಾಣು |
(ಚ) ಹೆಸರುಪದಗಳ ಮೊದಲು:
thought |
ಅನಿಸಿಕೆ |
|
forethought |
ಮುನ್ನನಿಸಿಕೆ |
(3) post ಒಟ್ಟು:
ಈ ಒಟ್ಟಿಗೆ ಆಮೇಲೆ ಇಲ್ಲವೇ ಆಮೇಲಿನ ಎಂಬ ಹುರುಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಬಳಿಕ ಇಲ್ಲವೇ ಬಳಿಕದ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಇದನ್ನು ಹೆಸರುಪದದ ಪತ್ತುಗೆರೂಪದ ಬಳಿಕ, ಮತ್ತು ಎಸಕಪದದ ಪರಿಚೆರೂಪದ ಬಳಿಕ ಬಳಸಬೇಕಾಗುತ್ತದೆ:
autopsy |
ಹೆಣದೊರೆ |
|
postautopsy |
ಹೆಣದೊರೆಯ ಬಳಿಕ |
battle |
ಕಾಳಗ |
|
postbattle |
ಕಾಳಗದ ಬಳಿಕ |
drilling |
ಕೊರೆತ |
|
postdrilling |
ಕೊರೆತದ ಬಳಿಕ |
ಆದರೆ, ಕನ್ನಡದಲ್ಲಿ ಇವು ಪದಕಂತೆಗಳಾಗುತ್ತವಲ್ಲದೆ ಪದಗಳಲ್ಲ. ಹಾಗಾಗಿ, ಬಳಿಕ ಎಂಬುದರ ಬದಲು ಬಳಿ ಎಂಬುದನ್ನಶ್ಟೇ ಹೆಸರುಪದ ಇಲ್ಲವೇ ಎಸಕಪದಗಳ ಮೊದಲು ಬಳಸಿ ಹೆಚ್ಚು ಅಡಕವಾದ ಪದಗಳನ್ನು ಪಡೆಯಬಹುದು. ಬಳಿ ಎಂಬುದರ ಇಂತಹ ಬಳಕೆಯನ್ನು ಬಳಿಸಲ್ಲು, ಬಳಿವಿಡಿ ಎಂಬಂತಹ ಪದಗಳಲ್ಲಿ ಕಾಣಬಹುದು:
depression |
ಕುಸಿತ |
|
postdepression |
ಬಳಿಕುಸಿತ |
battle |
ಕಾಳಗ |
|
postbattle |
ಬಳಿಕಾಳಗ |
fracture |
ಮುರಿತ |
|
postfracture |
ಬಳಿಮುರಿತ |
release |
ಬಿಡುಗಡೆ |
|
postrelease |
ಬಳಿಬಿಡುಗಡೆಯ |
sale |
ಮಾರಾಟ |
|
postsale |
ಬಳಿಮಾರಾಟದ |
(4) pre ಒಟ್ಟು:
ಈ ಒಟ್ಟಿಗೂ ಮುಕ್ಯವಾಗಿ ಮೊದಲು ಎಂಬ ಹುರುಳಿದೆ; ಇದನ್ನು ಬಳಸಿರುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಮುನ್ ಎಂಬ ಪರಿಚೆಬೇರನ್ನು ಮುನ್ನೊಟ್ಟುಗಳ ಜಾಗದಲ್ಲಿ ಬಳಸಲು ಬರುತ್ತದೆ:
plan |
ಓರು |
|
preplan |
ಮುನ್ನೋರು |
arrange |
ಏರ್ಪಡಿಸು |
|
prearrange |
ಮುನ್ನೇರ್ಪಡಿಸು |
pay |
ತೆರು |
|
prepay |
ಮುಂತೆರು |
view |
ನೋಡು |
|
preview |
ಮುನ್ನೋಡು |
|
|
|
|
|
caution |
ಎಚ್ಚರಿಕೆ |
|
precaution |
ಮುನ್ನೆಚ್ಚರಿಕೆ |
cognition |
ಅರಿವು |
|
precognition |
ಮುನ್ನರಿವು |
requisite |
ಬೇಡಿಕೆ |
|
prerequisite |
ಮುಂಬೇಡಿಕೆ |
science |
ಅರಿಮೆ |
|
prescience |
ಮುನ್ನರಿಮೆ |
|
|
|
|
|
stressed |
ಒತ್ತಿದ |
|
prestressed |
ಮುನ್ನೊತ್ತಿದ |
cast |
ಎರೆದ |
|
precast |
ಮುನ್ನೆರೆದ |
natal |
ಹೆರಿಗೆಯ |
|
prenatal |
ಮುಂಬೆರಿಗೆಯ |
paid |
ತೆತ್ತ |
|
prepaid |
ಮುಂತೆತ್ತ |
ಮೊದಲು ಮತ್ತು ಬಳಿಕ ಎಂಬ ಎರಡು ಹುರುಳುಗಳನ್ನೂ ಎದುರೆದುರಾಗಿರಿಸಿ ತಿಳಿಸಬೇಕಾಗಿರುವಲ್ಲಿ ಬಳಿಕ ಎಂಬುದನ್ನು ತಿಳಿಸಲು ಮುನ್ ಎಂಬ ಬೇರನ್ನು ಬಳಸಬೇಕಾಗುವುದರಿಂದ, ಮೊದಲು ಎಂಬುದನ್ನು ತಿಳಿಸಲು ಹಿನ್ ಎಂಬ ಬೇರನ್ನು ಬಳಸಲು ಬರುತ್ತದೆ (prefix ಹಿನ್ನೊಟ್ಟು, suffix ಮುನ್ನೊಟ್ಟು). ಇಲ್ಲಿ ಹಿನ್ ಮತ್ತು ಮುನ್ ಎಂಬವು ಇಂಬಿನ ಒಟ್ಟುಗಳಾಗಿ ಬಂದಿವೆಯೆಂದೂ ಹೇಳಲು ಬರುತ್ತದೆ.
(5) re ಒಟ್ಟು:
ಈ ಒಟ್ಟಿಗೆ (ಕ) ಇನ್ನೊಮ್ಮೆ ಇಲ್ಲವೇ ಹಿಂದಿನಂತೆ ಮತ್ತು (ಚ) ಹಿಂದಕ್ಕೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳು ಬಂದಿರುವಲ್ಲಿ ಮರು/ಮಾರ್ ಎಂಬ ಪರಿಚೆಬೇರನ್ನು ಮತ್ತು ಎರಡನೆಯ ಹುರುಳು ಬಂದಿರುವಲ್ಲಿ ಹಿನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ.
ಮರು ಮತ್ತು ಮಾರ್ ಎಂಬ ಎರಡು ರೂಪಗಳಲ್ಲಿ ಮರು ಎಂಬುದು ಮುಚ್ಚುಲಿಗಳ ಮೊದಲು ಬರುತ್ತದೆ (ಮರುಕಳಿಸು), ಮತ್ತು ಮಾರ್ ಎಂಬುದು ತೆರೆಯುಲಿಗಳ ಮೊದಲು ಬರುತ್ತದೆ (ಮಾರೆಣಿಸು).
(ಕ) ಇನ್ನೊಮ್ಮೆ ಇಲ್ಲವೇ ಹಿಂದಿನಂತೆ:
allot |
ಹಂಚು |
|
reallot |
ಮರುಹಂಚು |
group |
ಗುಂಪಿಸು |
|
regroup |
ಮರುಗುಂಪಿಸು |
count |
ಎಣಿಸು |
|
recount |
ಮಾರೆಣಿಸು |
join |
ಸೇರು |
|
rejoin |
ಮರುಸೇರು |
|
|
|
|
|
birth |
ಹುಟ್ಟು |
|
rebirth |
ಮರುಹುಟ್ಟು |
entry |
ಪುಗಿಲು |
|
re-entry |
ಮರುಪುಗಿಲು |
action |
ಎಸಕ |
|
reaction |
ಮಾರೆಸಕ |
(ಚ) ಹಿಂದಕ್ಕೆ:
gain |
ಪಡೆ |
|
regain |
ಹಿಂಪಡೆ |
call |
ಕರೆ |
|
recall |
ಹಿಂಗರೆ |
(6) neo ಒಟ್ಟು:
ಈ ಒಟ್ಟಿಗೆ ಹೊಸ ಎಂಬ ಹುರುಳಿದ್ದು, ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೊಸ ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
natal |
ಹುಟ್ಟಿನ |
|
neonatal |
ಹೊಸಹುಟ್ಟಿನ |
folk |
ಮಂದಿ |
|
neofolk |
ಹೊಸಮಂದಿ |
phobia |
ಗೀಳು |
|
neophobia |
ಹೊಸಗೀಳು |
traditional |
ನಡವಳಿ |
|
neotraditional |
ಹೊಸನಡವಳಿಯ |
(7) paleo ಒಟ್ಟು:
ಈ ಒಟ್ಟಿಗೆ ಹಳೆಯ ಎಂಬ ಹುರುಳಿದ್ದು, ಕನ್ನಡದಲ್ಲಿ ಹಳೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಇದಕ್ಕೆ ಸಾಟಿಯಾಗುವಂತೆ ಬಳಸಲು ಬರುತ್ತದೆ:
ontology |
ಬಾಳರಿಮೆ |
|
paleontology |
ಹಳೆಬಾಳರಿಮೆ |
contact |
ಪತ್ತುಗೆ |
|
paleocontact |
ಹಳೆಪತ್ತುಗೆ |
habitat |
ಇಕ್ಕೆ |
|
paleohabitat |
ಹಳೆಯಿಕ್ಕೆ |
science |
ಅರಿಮೆ |
|
paleoscience |
ಹಳೆಯರಿಮೆ |
ತಿರುಳು:
ಹೊತ್ತನ್ನು ತಿಳಿಸುವ ex, fore ಮತ್ತು pre ಎಂಬ ಮೂರು ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮೊದಲು ಬಳಸಲು ಬರುತ್ತದೆ; re ಎಂಬ ಇನ್ನೊಂದು ಮುನ್ನೊಟ್ಟಿಗೆ ಇನ್ನೊಮ್ಮೆ ಮತ್ತು ಹಿಂದಕ್ಕೆ ಎಂಬ ಎರಡು ಹುರುಳುಗಳಿದ್ದು, ಅವುಗಳಲ್ಲಿ ಮೊದಲನೆಯ ಹುರುಳಿಗೆ ಸಾಟಿಯಾಗಿ ಮರು/ಮಾರ್ ಎಂಬ ಪರಿಚೆಬೇರನ್ನು, ಮತ್ತು ಎರಡನೆಯ ಹುರುಳಿಗೆ ಸಾಟಿಯಾಗಿ ಹಿನ್ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ; post ಎಂಬ ಮುನ್ನೊಟ್ಟಿಗೆ ಸಾಟಿಯಾಗಿ ಬಳಿ ಎಂಬ ಪದವನ್ನು ಬಳಸಬಹುದು; neo ಮತ್ತು paleo ಎಂಬ ಮುನ್ನೊಟ್ಟುಗಳಿಗೆ ಹೊಸ ಮತ್ತು ಹಳೆ ಎಂಬ ಪದಗಳನ್ನು ಬಳಸಬಹುದು.
<< ಬಾಗ-9
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9
ಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex, ಮತ್ತು extra ಎಂಬ ಹತ್ತು ಮುನ್ನೊಟ್ಟುಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) fore ಒಟ್ಟು:
ಈ ಒಟ್ಟಿಗೆ ಮುಂದಿನ ಎಂಬ ಇಂಬಿನ ಹುರುಳು ಮಾತ್ರವಲ್ಲದೆ, ಮೊದಲಿನ ಇಲ್ಲವೇ ಹಿಂದಿನ ಎಂಬ ಹೊತ್ತಿನ ಹುರುಳೂ ಇದೆ; ಇವುಗಳಲ್ಲಿ ಹೊತ್ತಿನ ಹುರುಳನ್ನು ಮುಂದೆ (3)ರಲ್ಲಿ ವಿವರಿಸಲಾಗಿದೆ; ಮುಂದಿನ ಎಂಬ ಇಂಬಿನ ಹುರುಳಿನಲ್ಲಿ ಇದನ್ನು ಬಳಸಿರುವಲ್ಲಿ ಮುನ್ ಎಂಬ ಪರಿಚೆಬೇರನ್ನು ಪದಗಳ ಮುಂದೆ ಬಳಸಲು ಬರುತ್ತದೆ:
land |
ನೆಲ |
|
foreland |
ಮುನ್ನೆಲ |
name |
ಹೆಸರು |
|
forename |
ಮುಂಬೆಸರು |
mast |
ಕೂವೆಮರ |
|
foremast |
ಮುಂಕೂವೆಮರ |
(2) inter ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ (ಕ) ಎರಡಕ್ಕೂ ತಾಗು, ಮತ್ತು (ಚ) ಎರಡರ ನಡುವೆ ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಮೊದಲನೆಯ ಹುರುಳಿನಲ್ಲಿ ಕನ್ನಡದ ಒಡ ಎಂಬ ಪದವನ್ನು ಮತ್ತು ಎರಡನೆಯ ಹುರುಳಿನಲ್ಲಿ ನಡು ಎಂಬ ಪದವನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
(ಕ) ಎರಡನ್ನೂ ತಾಗು ಎಂಬ ಹುರುಳಿನಲ್ಲಿ:
lace |
ಹೆಣೆ |
|
interlace |
ಒಡಹೆಣೆ |
mingle |
ಬೆರೆ |
|
intermingle |
ಒಡಬೆರೆ |
twine |
ಹೊಸೆ |
|
intertwine |
ಒಡಹೊಸೆ |
(ಚ) ಎರಡರ ನಡುವೆ ಎಂಬ ಹುರುಳಿನಲ್ಲಿ:
leaf |
ಹಾಳೆ |
|
interleaf |
ನಡುಹಾಳೆ |
net |
ಬಲೆ |
|
internet |
ನಡುಬಲೆ |
national |
ನಾಡಿನ |
|
international |
ನಡುನಾಡಿನ |
connect |
ತೆರು |
|
interconnect |
ನಡುತೆರು |
mediate |
ಹೊಂದಿಸು |
|
intermediate |
ನಡುಹೊಂದಿಸು |
(3) out ಒಟ್ಟು:
ಮೇಲೆ ವಿವರಿಸಿದ ಹಾಗೆ, ಈ ಒಟ್ಟಿಗೆ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಕೆಯಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಇಂಬಿಗೆ ಸಂಬಂದಿಸಿದುದಾಗಿದೆ; ಈ ಹುರುಳಿನಲ್ಲಿ ಕನ್ನಡದ ಹೊರ ಎಂಬ ಪದವನ್ನೇ ಇದಕ್ಕೆ ಸಾಟಿಯಾಗಿ ಪದಗಳ ಮೊದಲಿಗೆ ಬಳಸಲು ಬರುತ್ತದೆ:
flow |
ಹರಿವು |
|
outflow |
ಹೊರಹರಿವು |
house |
ಮನೆ |
|
outhouse |
ಹೊರಮನೆ |
post |
ಪಾಳೆಯ |
|
outpost |
ಹೊರಪಾಳೆಯ |
going |
ಹೋಗುವ |
|
outgoing |
ಹೊರಹೋಗುವ |
pour |
ಸುರಿ |
|
outpour |
ಹೊರಸುರಿ |
burst |
ಸಿಡಿ |
|
outburst |
ಹೊರಸಿಡಿ |
cast |
ತಳ್ಳು |
|
outcast |
ಹೊರತಳ್ಳಿದ |
(4) over ಒಟ್ಟು:
ಹೆಚ್ಚಿನ ಬಳಕೆಗಳಲ್ಲೂ ಮೀರು ಇಲ್ಲವೇ ಮೀರಿದ ಎಂಬ ಅಳವಿನ ಹುರುಳಿದೆ; ಆದರೆ, ಕೆಲವು ಬಳಕೆಗಳಲ್ಲಿ ಮೇಲೆ ಇಲ್ಲವೇ ಮೇಲಿನ ಎಂಬ ಇಂಬಿನ ಹುರುಳೂ ಇದೆ:
arm |
ತೋಳು |
|
overarm |
ಮೇಲ್ತೋಳಿನ (ಎಸೆತ) |
ground |
ನೆಲ |
|
overground |
ಮೇಲ್ನೆಲದ |
lord |
ಆಳ್ಮ |
|
overlord |
ಮೇಲಾಳ್ಮ |
shoe |
ಕೆರ |
|
overshoe |
ಮೇಲ್ಕೆರ |
(5) sub ಒಟ್ಟು:
ಈ ಒಟ್ಟಿಗೆ ಮುಕ್ಯವಾಗಿ ಒಳ ಮತ್ತು ಕೆಳ ಎಂಬ ಎರಡು ಹುರುಳುಗಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಇವೇ ಪದಗಳನ್ನು ಬಳಸಲು ಬರುತ್ತದೆ; ಕೆಳ ಎಂಬುದಕ್ಕೆ ಬದಲಾಗಿ ಕಿಳ್/ಕೀಳ್ ಎಂಬ ಪರಿಚೆಬೇರನ್ನು ಬಳಸಿ ಹೆಚ್ಚು ಅಡಕವಾದ ಪದಗಳನ್ನೂ ಪಡೆಯಲು ಬರುತ್ತದೆ:
group |
ಗುಂಪು |
|
subgroup |
ಒಳಗುಂಪು |
tenant |
ಬಾಡಿಗೆಗಾರ |
|
subtenant |
ಒಳಬಾಡಿಗೆಗಾರ |
total |
ಮೊತ್ತ |
|
subtotal |
ಒಳಮೊತ್ತ |
routine |
ಹಮ್ಮುಗೆ |
|
subroutine |
ಒಳಹಮ್ಮುಗೆ |
|
|
|
|
|
way |
ಹಾದಿ |
|
subway |
ಕೆಳಹಾದಿ |
script |
ಬರಿಗೆ |
|
subscript |
ಕೆಳಬರಿಗೆ |
soil |
ಮಣ್ಣು |
|
subsoil |
ಕೆಳಮಣ್ಣು |
sonic |
ಉಲಿಯ |
|
subsonic |
ಕೀಳುಲಿಯ |
(6) super ಒಟ್ಟು:
ಈ ಒಟ್ಟಿಗೆ ಮೇಲೆ ಎಂಬ ಇಂಬಿನ ಹುರುಳಿದ್ದು, ಕನ್ನಡದಲ್ಲಿ ಇದಕ್ಕೆ ಸಾಟಿಯಾಗಿ ಮೇಲೆ ಎಂಬ ಪದವನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
impose |
ಹೇರು |
|
superimpose |
ಮೇಲೆಹೇರು |
script |
ಬರಿಗೆ |
|
superscript |
ಮೇಲ್ಬರಿಗೆ |
structure |
ಕಟ್ಟಡ |
|
superstructure |
ಮೇಲ್ಕಟ್ಟಡ |
(7) trans ಒಟ್ಟು:
ಈ ಒಟ್ಟಿಗೆ ಆಚೆ ಎಂಬ ಹುರುಳು ಮಾತ್ರವಲ್ಲದೆ ಮಾರ್ಪಡಿಸು ಎಂಬ ಹುರುಳೂ ಇದೆ; ಹಾಗಾಗಿ, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಆಚೆ ಎಂಬುದನ್ನು ಪದದ ಬಳಿಕ, ಮತ್ತು ಮರು/ಮಾರ್ ಎಂಬುದನ್ನು ಎಸಕಪದಗಳ ಮೊದಲು ಇಲ್ಲವೇ ಹೆಸರುಪದಗಳ ಬಳಿಕ ಬಳಸಲು ಬರುತ್ತದೆ:
continent |
ಪೆರ್ನೆಲ |
|
transcontinental |
ಪೆರ್ನೆಲದಾಚೆಯ |
nation |
ನಾಡು |
|
transnational |
ನಾಡಿನಾಚೆಯ |
|
|
|
|
|
plant |
ನಾಟು |
|
transplant |
ಮರುನಾಟು |
act |
ಎಸಗು |
|
transact |
ಮಾರೆಸಗು |
scribe |
ಬರೆಗ |
|
transcribe |
ಮಾರ್ಬರೆ |
form |
ಪರಿಜು |
|
transform |
ಪರಿಜುಮಾರು |
(8) under ಒಟ್ಟು:
ಈ ಒಟ್ಟಿಗೆ ಕೆಳ ಮತ್ತು ಒಳ ಎಂಬ ಎರಡು ಇಂಬಿನ ಹುರುಳುಗಳಿವೆ; ಇದಲ್ಲದೆ, ಕೊರೆ ಎಂಬ ಅಳವಿನ ಹುರುಳೂ ಇದಕ್ಕಿದೆ.
ಇಂಬಿನ ಹುರುಳಿನಲ್ಲಿ ಇದಕ್ಕೆ ಸಾಟಿಯಾಗಿ ಕೆಳ(ಗೆ) ಮತ್ತು ಒಳ(ಗೆ) ಎಂಬ ಪದಗಳನ್ನೇ ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
(ಕ) ಕೆಳ ಎಂಬ ಹುರುಳಿನಲ್ಲಿ ಬಳಕೆ:
lay |
ಇಡು |
|
underlay |
ಕೆಳಗಿಡು |
cut |
ಕಡಿ |
|
undercut |
ಕೆಳ ಕಡಿ |
belly |
ಹೊಟ್ಟೆ |
|
underbelly |
ಕೆಳ ಹೊಟ್ಟೆ |
growth |
ಬೆಳವಿ |
|
undergrowth |
ಕೆಳ ಬೆಳವಿ |
arm |
ತೋಳು |
|
underarm |
ಕೆಳತೋಳಿನ |
(ಚ) ಒಳ ಎಂಬ ಹುರುಳಿನಲ್ಲಿ ಬಳಕೆ:
clothing |
ಉಡುಪು |
|
underclothing |
ಒಳ ಉಡುಪು |
current |
ಹರಿವು |
|
undercurrent |
ಒಳ ಹರಿವು |
coat |
ಹಚ್ಚುಗೆ |
|
undercoat |
ಒಳಹಚ್ಚುಗೆ |
ಕೆಲವು ಕಡೆಗಳಲ್ಲಿ ಕೆಳ(ಗೆ) ಎಂಬುದನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ:
foot |
ಕಾಲು |
|
underfoot |
ಕಾಲ್ಕೆಳಗೆ |
ground |
ನೆಲ |
|
underground |
ನೆಲದ ಕೆಳಗೆ |
water |
ನೀರು |
|
underwater |
ನೀರ ಕೆಳಗೆ |
(9) ex ಒಟ್ಟು:
ಇಂಗ್ಲಿಶ್ನ ex ಒಟ್ಟನ್ನು ಮೊದಲಿನ ಎಂಬ ಹೊತ್ತಿನ ಹುರುಳಿನಲ್ಲಿ ಮಾತ್ರವಲ್ಲದೆ ಹೊರಗಿನ ಎಂಬ ಇಂಬಿನ ಹುರುಳಿನಲ್ಲೂ ಬಳಸಲಾಗುತ್ತದೆ; ಈ ಎರಡನೆಯ ಬಳಕೆಯಲ್ಲಿ ಅದು ಒಳಗಿನ ಎಂಬ ಹುರುಳಿರುವ in ಎಂಬ ಒಟ್ಟಿಗೆ ಬದಲಾಗಿ ಬರುತ್ತದೆ (import : export).
ಇಂತಹ ಕಡೆಗಳಲ್ಲಿ ಇಂಗ್ಲಿಶ್ನ in ಎಂಬುದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಒಳ ಎಂಬ ಪದವನ್ನು, ಮತ್ತು ex ಎಂಬುದಕ್ಕೆ ಸಾಟಿಯಾಗಿ ಹೊರ ಎಂಬ ಪದವನ್ನು ಬಳಸಲು ಬರುತ್ತದೆ; ಆದರೆ, ಕೆಲವೆಡೆಗಳಲ್ಲಿ ಈ ರೀತಿ ಒಳ-ಹೊರ ಎಂಬ ಪದಗಳನ್ನು ಬಳಸುವಲ್ಲಿ ಅವುಗಳ ಬಳಿಕ ಬರುವ ಎಸಕಪದವನ್ನೂ ಬದಲಾಯಿಸಬೇಕಾಗುತ್ತದೆ:
implode |
ಒಳಸಿಡಿ |
|
explode |
ಹೊರಸಿಡಿ |
interior |
ಒಳಮಯ್ |
|
exterior |
ಹೊರಮಯ್ |
import |
ಒಳತರು |
|
export |
ಹೊರಕಳಿಸು |
inhale |
ಒಳಸೆಳೆ |
|
exhale |
ಹೊರಬಿಡು |
(10) extra ಒಟ್ಟು:
ಇದಕ್ಕೆ ಹೊರಗಿನ ಎಂಬ ಹುರುಳಿದ್ದು, ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೊರಗಿನ ಎಂಬ ಪದವನ್ನು ಹೆಸರುಪದದ ಬಳಿಕ ಬಳಸಬೇಕಾಗುತ್ತದೆ:
marital |
ಮದುವೆಯ |
|
extramarital |
ಮದುವೆಹೊರಗಿನ |
intestinal |
ಕರುಳಿನ |
|
extraintestinal |
ಕರುಳುಹೊರಗಿನ |
linguistic |
ನುಡಿಯ |
|
extralinguistic |
ನುಡಿಯ ಹೊರಗಿನ |
official |
ಮಣಿಹದ |
|
extraofficial |
ಮಣಿಹದ ಹೊರಗಿನ |
(11) tele ಒಟ್ಟು:
ದೂರದ ಎಂಬ ಹುರುಳಿರುವ ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಗೆಂಟು ಎಂಬ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
care |
ಆರಯ್ಕೆ |
|
telecare |
ಗೆಂಟಾರಯ್ಕೆ |
learning |
ಕಲಿಕೆ |
|
telelearning |
ಗೆಂಟುಕಲಿಕೆ |
sale |
ಮಾರಾಟ |
|
telesale |
ಗೆಂಟುಮಾರಾಟ |
screen |
ತೆರೆ |
|
telescreen |
ಗೆಂಟುತೆರೆ |
ತಿರುಳು:
ಇಂಗ್ಲಿಶ್ನಲ್ಲಿ ಹಲವು ಇಂಬಿನ ಮುನ್ನೊಟ್ಟುಗಳು ಬಳಕೆಯಾಗುತ್ತಿದ್ದು, ಇವಕ್ಕೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಮುನ್, ಎಡ, ನಡು, ಹೊರ, ಒಳ, ಕೆಳ, ಮೇಲ್, ಗೆಂಟು ಎಂಬಂತಹ ಪರಿಚೆಬೇರುಗಳನ್ನು ಇಲ್ಲವೇ ಪದಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.
<< ಬಾಗ-8
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-8
ಇಂಗ್ಲಿಶ್ನಲ್ಲಿ ಹಲವಾರು ಮುನ್ನೊಟ್ಟು(prefix)ಗಳು ಬಳಕೆಯಾಗುತ್ತಿದ್ದು, ಇವನ್ನು ಮುಕ್ಯವಾಗಿ ಅವು ಕೊಡುವ ಹುರುಳುಗಳ ಮೇಲೆ ನಾಲ್ಕು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ:
(1) ಅಳವಿಯ ಒಟ್ಟುಗಳು: uni (unilateral), bi (bilateral), poly (polyglot)
(2) ಇಂಬಿನ ಒಟ್ಟುಗಳು: inter (international), intra (intravenous), trans (transmigrate)
(3) ಹೊತ್ತಿನ ಒಟ್ಟುಗಳು : pre (premedical), post (postmodern), neo (neoclassical)
(4) ಅಲ್ಲಗಳೆಯುವ ಒಟ್ಟುಗಳು: in (incorrect), dis (dislike), un (unbelievable)
ಈ ನಾಲ್ಕು ಮುಕ್ಯ ಗುಂಪುಗಳಲ್ಲಿ ಸೇರದಿರುವ ಬೇರೆಯೂ ಕೆಲವು ಒಟ್ಟುಗಳಿದ್ದು, ಅವನ್ನು ಅಯ್ದನೆಯ ಗುಂಪಿನಲ್ಲಿ ಇರಿಸಬಹುದು.
ಕನ್ನಡದಲ್ಲಿ ಮುನ್ನೊಟ್ಟುಗಳ ಬಳಕೆಯಿಲ್ಲ; ಆದರೆ, ಕನ್ನಡದ ಹಲವು ಪರಿಚೆಬೇರುಗಳು ಮತ್ತು ಎಣಿಕೆಬೇರುಗಳು ಮುನ್ನೊಟ್ಟುಗಳ ಹಾಗೆ ಪದಗಳ ಮೊದಲು ಬಳಕೆಯಾಗಬಲ್ಲುವು. ಕನ್ನಡದ ಸೊಲ್ಲರಿಮೆಯಲ್ಲಿ ಇಂತಹ ಬೇರುಗಳನ್ನು ಬಳಸಿರುವ ಪದಗಳನ್ನು ಜೋಡುಪದಗಳು ಇಲ್ಲವೇ ಕೂಡುಪದಗಳು ಎಂಬುದಾಗಿ ಕರೆಯಲಾಗುತ್ತದೆ. ಇಂಗ್ಲಿಶ್ನಲ್ಲಿ ಮುನ್ನೊಟ್ಟುಗಳನ್ನು ಬಳಸಿ ಪಡೆದ ಪದಗಳಿಗೆ ಸಾಟಿಯಾಗುವಂತೆ ಹಲವೆಡೆಗಳಲ್ಲಿ ಇಂತಹ ಪದಗಳನ್ನು ಕಟ್ಟಲು ಬರುತ್ತದೆ.
ಆದರೆ, ಕೆಲವೆಡೆಗಳಲ್ಲಿ ಇಂಗ್ಲಿಶ್ ಮುನ್ನೊಟ್ಟುಗಳಿಗೆ ಸಾಟಿಯಾಗಬಲ್ಲ ಹುರುಳುಗಳನ್ನು ಪಡೆಯಲು ಎಸಕಪದಗಳನ್ನು ಇಲ್ಲವೇ ಅವುಗಳ ಪರಿಚೆರೂಪಗಳನ್ನು ಹೆಸರುಪದಗಳ ಬಳಿಕ ಬಳಸಬೇಕಾಗುತ್ತದೆ. ಕೆಲವು ಪರಿಚೆಪದಗಳನ್ನೂ ಈ ರೀತಿ ಹೆಸರುಪದಗಳ ಪತ್ತುಗೆರೂಪದ ಬಳಿಕ ಬಳಸಬೇಕಾಗುತ್ತದೆ.
ಇಂಗ್ಲಿಶ್ನ ಅಲ್ಲಗಳೆಯುವ ಮುನ್ನೊಟ್ಟುಗಳಿಗೆ ಸಾಟಿಯಾಗಬಲ್ಲ ಕನ್ನಡದ ಪದಗಳು ಇಲ್ಲವೇ ಒಟ್ಟುಗಳು ಇವೆಲ್ಲಕ್ಕಿಂತ ಬೇರಾಗಿವೆ; ಅವುಗಳಲ್ಲಿ ಹೆಚ್ಚಿನವೂ ಎಸಕಪದಗಳ ಇಲ್ಲವೇ ಹೆಸರುಪದಗಳ ಬಳಿಕ ಬರುತ್ತವೆ. ತಪ್ಪು ಇಲ್ಲವೇ ಕೆಟ್ಟ ಎಂಬಂತಹ ಕೆಲವು ಪದಗಳು ಮಾತ್ರ ಮುನ್ನೊಟ್ಟುಗಳ ಜಾಗದಲ್ಲಿ ಬಳಕೆಯಾಗುತ್ತವೆ.
ಅಳವಿಯ ಮುನ್ನೊಟ್ಟುಗಳು
ಪದಗಳು ತಿಳಿಸುವ ಪಾಂಗಿನ, ಪರಿಚೆಯ, ಇಲ್ಲವೇ ಎಸಕದ ಅಳವಿಯನ್ನು ತಿಳಿಸುವುದಕ್ಕಾಗಿ ಇಂಗ್ಲಿಶ್ನಲ್ಲಿ ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳು ಮತ್ತು ಬೇರೆ ಬಗೆಯ ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳು ಎಂಬುದಾಗಿ ಎರಡು ಬಗೆಯ ಮುನ್ನೊಟ್ಟುಗಳು ಬಳಕೆಯಾಗುತ್ತವೆ; ಇವುಗಳಲ್ಲಿ ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳನ್ನು ಕೆಳಗೆ ಮೊದಲು ವಿವರಿಸಲಾಗಿದ್ದು, ಉಳಿದ ಮುನ್ನೊಟ್ಟುಗಳನ್ನು ಆಮೇಲೆ ವಿವರಿಸಲಾಗಿದೆ:
(ಕ) ಎಣಿಕೆಯ ಒಟ್ಟುಗಳು:
ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಲ್ಲಿ ಕೆಲವು ಎಣಿಕೆಗೆ ಸಂಬಂದಿಸಿದುವಾಗಿವೆ; ಇವಕ್ಕೆ ಸಾಟಿಯಾಗಿ ಕನ್ನಡದಲ್ಲೂ ಎಣಿಕೆಯನ್ನು ತಿಳಿಸುವ ಎಣಿಕೆಬೇರುಗಳನ್ನು ಮುನ್ನೊಟ್ಟುಗಳ ಜಾಗದಲ್ಲಿ ಬಳಸಲು ಬರುತ್ತದೆ:
(1) uni ಇಲ್ಲವೇ mono ಒಟ್ಟು:
ಈ ಎರಡು ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಒರ್/ಓರ್ ಎಂಬ ಪರಿಚೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ (ಮುಚ್ಚುಲಿಗಳ ಮೊದಲು ಒರ್ ಮತ್ತು ತೆರೆಯುಲಿಗಳ ಮೊದಲು ಓರ್):
pole |
ಕೊನೆ |
|
unipolar |
ಒರ್ಕೊನೆಯ |
lateral |
ಬದಿಯ |
|
unilateral |
ಒರ್ಬದಿಯ |
direction |
ತಟ್ಟು |
|
unidirectional |
ಒರ್ತಟ್ಟು |
valve |
ತೆರ್ಪು |
|
univalve |
ಒರ್ತೆರ್ಪಿನ |
|
|
|
|
|
rail |
ಕಂಬಿ |
|
monorail |
ಒರ್ಕಂಬಿ |
chrome |
ಬಣ್ಣ |
|
monochrome |
ಒರ್ಬಣ್ಣ |
mania |
ಗೀಳು |
|
monomania |
ಒರ್ಗೀಳು |
syllable |
ಉಲಿಕಂತೆ |
|
monosyllabic |
ಓರುಲಿಕಂತೆಯ |
(2) bi ಇಲ್ಲವೇ di ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಇರ್/ಈರ್ ಎಂಬ ಎಣಿಕೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
lateral |
ಬದಿಯ |
|
bilateral |
ಇರ್ಬದಿಯ |
focal |
ಸೇರ್ಮೆಯ |
|
bifocal |
ಇರ್ಸೇರ್ಮೆಯ |
polar |
ಕೊನೆಯ |
|
bipolar |
ಇರ್ಕೊನೆಯ |
sect |
ತುಂಡು |
|
bisect |
ಇರ್ತುಂಡಿಸು |
|
|
|
|
|
pole |
ಕೊನೆ |
|
dipole |
ಇರ್ಕೊನೆ |
morph |
ಪರಿಜು |
|
dimorph |
ಇರ್ಪರಿಜು |
(3) tri ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮುರ್/ಮೂರ್ ಎಣಿಕೆಬೇರನ್ನು ಬಳಸಲು ಬರುತ್ತದೆ:
angle |
ಮೊನೆ |
|
triangle |
ಮುಮ್ಮೊನೆ |
colour |
ಬಣ್ಣ |
|
tricolour |
ಮುಬ್ಬಣ್ಣ |
lateral |
ಬದಿಯ |
|
trilateral |
ಮೂರ್ಬದಿಯ |
part |
ಪಾಲು |
|
tripartite |
ಮೂರ್ಪಾಲಿನ |
ಮೂರಕ್ಕಿಂತ ಮೇಲಿನ ಎಣಿಕೆಗಳನ್ನು ತಿಳಿಸುವ quadri, penta ಮೊದಲಾದವುಗಳ ಬಳಕೆ ಮೇಲಿನವುಗಳಿಂದ ತುಂಬಾ ಕಡಿಮೆ; ಅವನ್ನು ಬಳಸಿರುವಲ್ಲೂ ಅವಕ್ಕೆ ಸಾಟಿಯಾಗಿ ನಾಲ್, ಅಯ್ ಮೊದಲಾದ ಕನ್ನಡದ ಎಣಿಕೆಬೇರುಗಳನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ (quadrangle ನಾಲ್ಮೂಲೆ, pentangle ಅಯ್ಮೂಲೆ).
(4) semi, demi, ಇಲ್ಲವೇ hemi ಒಟ್ಟುಗಳು:
ಅರೆವಾಸಿ ಎಂಬ ಹುರುಳನ್ನು ಕೊಡುವ ಮೇಲಿನ ಇಂಗ್ಲಿಶ್ ಮೊನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅರೆ ಎಂಬ ಎಣಿಕೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
circle |
ಬಳಸಿ |
|
semicircle |
ಅರೆಬಳಸಿ |
detached |
ಬೇರ್ಪಟ್ಟ |
|
semi-detached |
ಅರೆಬೇರ್ಪಟ್ಟ |
final |
ಕೊನೆಯ |
|
semi-final |
ಅರೆಕೊನೆಯ |
skilled |
ಪಳಗಿದ |
|
semi-skilled |
ಅರೆಪಳಗಿದ |
god |
ಕಡವರು |
|
demigod |
ಅರೆಕಡವರು |
relief |
ಒದವಿ |
|
demirelief |
ಅರೆ ಒದವಿ |
sphere |
ತೆರಳೆ |
|
hemisphere |
ಅರೆತೆರಳೆ |
(ಚ) ಬೇರೆ ಬಗೆಯ ಅಳವಿಯ ಮುನ್ನೊಟ್ಟುಗಳು:
ಎಣಿಕೆಯನ್ನು ತಿಳಿಸುವ ಮುನ್ನೊಟ್ಟುಗಳು ಅಳವಿಯನ್ನು ಕಚಿತವಾಗಿ ತಿಳಿಸುತ್ತವೆ; ಬೇರೆ ಹಲವು ಮುನ್ನೊಟ್ಟುಗಳು ತುಂಬಾ, ತುಸು, ಕಡಿಮೆ, ಮೀರಿ, ದೊಡ್ಡ, ಚಿಕ್ಕ, ಹಲವು ಮೊದಲಾದ ಹುರುಳುಗಳನ್ನು ಕೊಡುವ ಮೂಲಕ ಕಚಿತವಲ್ಲದ ಅಳವಿಯನ್ನು ತಿಳಿಸುವಲ್ಲಿ ಬಳಕೆಯಾಗುತ್ತವೆ. ಅಂತಹ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಂತಹ ಪದಗಳನ್ನು ಇಲ್ಲವೇ ಪರಿಚೆಬೇರುಗಳನ್ನು ಬಳಸಲು ಬರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
(1) arch ಒಟ್ಟು:
ಈ ಒಟ್ಟಿಗೆ ತುಂಬಾ ಹೆಚ್ಚಿನ ಎಂಬ ಅಳವಿಯ ಹುರುಳಿದ್ದು, ಇದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಎಕ್ಕ ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ.
ಈ ಹುರುಳು ಮಾತ್ರವಲ್ಲದೆ ಮುಕ್ಯವಾದ ಎಂಬ ಹುರುಳೂ ಇದಕ್ಕಿದೆ; ಕನ್ನಡದಲ್ಲಿ ಈ ಹುರುಳನ್ನು ತಿಳಿಸಲು ಮಲ್ಲ ಎಂಬ ಪದವನ್ನು ಬಳಸಬಹುದು (archbishop ಮಲ್ಲಬಿಶಪ್).
enemy |
ಹಗೆ |
|
arch-enemy |
ಎಕ್ಕಹಗೆ |
traitor |
ನಾಡಹಗೆ |
|
arch-traitor |
ಎಕ್ಕನಾಡಹಗೆ |
magician |
ಮಾಟಗಾರ |
|
arch-magician |
ಎಕ್ಕಮಾಟಗಾರ |
murderer |
ಕೊಲೆಗಾರ |
|
arch-murderer |
ಎಕ್ಕಕೊಲೆಗಾರ |
(2) co ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಕೂಡು ಇಲ್ಲವೇ ಒಡ ಎಂಬುದನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
agent |
ಮಾರಾಳು |
|
co-agent |
ಕೂಡುಮಾರಾಳು |
inheritor |
ಮರುಪಡೆಗ |
|
coinheritor |
ಕೂಡುಮರುಪಡೆಗ |
education |
ಕಲಿಕೆ |
|
co-education |
ಕೂಡುಕಲಿಕೆ |
editor |
ಅಳವಡಿಗ |
|
co-editor |
ಕೂಡಳವಡಿಗ |
|
|
|
|
|
relation |
ಪತ್ತುಗೆ |
|
correlation |
ಒಡಪತ್ತುಗೆ |
medication |
ಮದ್ದು |
|
co-medication |
ಒಡಮದ್ದು |
govern |
ಆಳು |
|
co-govern |
ಒಡ ಆಳು |
(3) hyper ಒಟ್ಟು:
ಈ ಒಟ್ಟನ್ನು ಬಳಸಿರುವಲ್ಲಿ ಅದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಮಿಗಿಲು ಎಂಬ ಪದವನ್ನು ಬಳಸಲು ಬರುತ್ತದೆ:
inflation |
ಉಬ್ಬರ |
|
hyperinflation |
ಮಿಗಿಲುಬ್ಬರ |
link |
ಕೊಂಡಿ |
|
hyperlink |
ಮಿಗಿಲುಕೊಂಡಿ |
market |
ಮಾರುಕಟ್ಟೆ |
|
hypermarket |
ಮಿಗಿಲುಮಾರುಕಟ್ಟೆ |
sensitive |
ನಾಟುವ |
|
hypersensitive |
ಮಿಗಿಲುನಾಟುವ |
(4) mini ಒಟ್ಟು:
ಈ ಒಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಕಿರು ಎಂಬುದನ್ನು ಬಳಸಲು ಬರುತ್ತದೆ; ಇದಕ್ಕೆ ತೆರೆಯುಲಿಗಳ ಮೊದಲಿಗೆ ಕಿತ್ ಎಂಬ ರೂಪ ಇದೆ:
cab |
ಬಾಡಿಗೆಬಂಡಿ |
|
minicab |
ಕಿರುಬಾಡಿಗೆಬಂಡಿ |
computer |
ಎಣ್ಣುಕ |
|
minicomputer |
ಕಿತ್ತೆಣ್ಣುಕ |
dictionary |
ಪದನೆರಕ |
|
minidictionary |
ಕಿರುಪದನೆರಕ |
camp |
ಬೀಡು |
|
minicamp |
ಕಿರುಬೀಡು |
(5) out ಒಟ್ಟು:
ಈ ಒಟ್ಟನ್ನು ಮುಕ್ಯವಾಗಿ ಹೊರ ಮತ್ತು ಮೀರು ಎಂಬ ಎರಡು ಹುರುಳುಗಳಲ್ಲಿ ಬಳಸಲಾಗುತ್ತದೆ; ಇವುಗಳಲ್ಲಿ ಮೊದಲನೆಯ ಹುರುಳು ಇಂಬಿಗೆ ಸಂಬಂದಿಸಿದುದಾಗಿದ್ದು, ಅದರ ಬಳಕೆಯನ್ನು ಮುಂದೆ ()ರಲ್ಲಿ ವಿವರಿಸಲಾಗಿದೆ; ಎರಡನೆಯ ಹುರುಳಿನಲ್ಲಿ ಬಳಕೆಯಾಗುವ ಈ ಮುನ್ನೊಟ್ಟಿಗೆ ಸಾಟಿಯಾಗಿ ಕನ್ನಡದಲ್ಲಿ ಮೀರು ಎಂಬ ಪದವನ್ನು ಬಳಸಲು ಬರುತ್ತದೆ.
ಇಂಗ್ಲಿಶ್ನಲ್ಲಿ ಮೇಲಿನ ಒಟ್ಟಿನೊಂದಿಗೆ ಬರುವ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ (ಕ) ಕೆಲವೆಡೆಗಳಲ್ಲಿ ಒಂದು ಎಸಕಪದವನ್ನು ಬಳಸಬೇಕಾಗುತ್ತದೆ, ಮತ್ತು (ಚ) ಬೇರೆ ಕೆಲವು ಕಡೆಗಳಲ್ಲಿ ಒಂದು ಹೆಸರುಪದವನ್ನು ಬಳಸಬೇಕಾಗುತ್ತದೆ.
(ಕ) ಎಸಕಪದವನ್ನು ಬಳಸುವುದಿದ್ದಲ್ಲಿ, ಅದರ ಮುಂದೆ ಮೀರು ಪದದ ಜೋಡಿಸುವ ರೂಪವಾದ ಮೀರಿ ಎಂಬುದನ್ನು ಬಳಸಲು ಬರುತ್ತದೆ:
weigh |
ತೂಗು |
|
outweigh |
ಮೀರಿ ತೂಗು |
sell |
ಮಾರು |
|
outsell |
ಮೀರಿ ಮಾರು |
shine |
ಹೊಳೆ |
|
outshine |
ಮೀರಿ ಹೊಳೆ |
last |
ಬಾಳು |
|
outlast |
ಮೀರಿ ಬಾಳು |
(ಚ) ಹೆಸರುಪದವನ್ನು ಬಳಸುವುದಿದ್ದಲ್ಲಿ, ಅದರ ಬಳಿಕ ಮೀರು ಪದವನ್ನು ಒಂದು ಎಸಕಪದವಾಗಿ ಬಳಸಲು ಬರುತ್ತದೆ:
number |
ಎಣಿಕೆ |
|
outnumber |
ಎಣಿಕೆ ಮೀರು |
rank |
ಮಟ್ಟ |
|
outrank |
ಮಟ್ಟ ಮೀರು |
size |
ಅಳತೆ |
|
outsize |
ಅಳತೆ ಮೀರಿದ |
law |
ಕಟ್ಟಲೆ |
|
outlaw |
ಕಟ್ಟಲೆ ಮೀರಿದ |
(6) over ಒಟ್ಟು:
ಈ ಒಟ್ಟಿಗೆ ಅಳವಿನ ಹುರುಳೂ ಇದೆ, ಮತ್ತು ಇಂಬಿನ ಹುರುಳೂ ಇದೆ; out ಎಂಬ ಮುನ್ನೊಟ್ಟಿನ ಬಳಕೆಯಲ್ಲಿ ಕಾಣಿಸುವ ಹಾಗೆ, ಈ ಒಟ್ಟಿಗಿರುವ ಅಳವಿನ ಬಳಕೆಯಲ್ಲೂ ಕನ್ನಡದ ಮೀರು ಪದವನ್ನು ಬಳಸಲು ಬರುತ್ತದೆ:
(ಕ) ಎಸಕಪದದ ಬಳಕೆ:
achieve |
ಪಡೆ |
|
overachieve |
ಮೀರಿ ಪಡೆ |
burden |
ಹೇರು |
|
overburden |
ಮೀರಿ ಹೇರು |
charge |
ಬೆಲೆಹಾಕು |
|
overcharge |
ಮೀರಿ ಬೆಲೆಹಾಕು |
heat |
ಕಾಯು |
|
overheat |
ಮೀರಿ ಕಾಯು |
(ಚ) ಹೆಸರುಪದದ ಬಳಕೆ:
balance |
ಸರಿತೂಕ |
|
overbalance |
ಸರಿತೂಕ ಮೀರು |
dose |
ಮದ್ದಳವು |
|
overdose |
ಮದ್ದಳವು ಮೀರು |
due |
ತಲಪುಗೆ |
|
overdue |
ತಲಪುಗೆ ಮೀರಿದ |
price |
ಬೆಲೆ |
|
overpriced |
ಬೆಲೆ ಮೀರಿದ |
(7) super ಒಟ್ಟು:
ಈ ಒಟ್ಟಿಗೆ ತುಂಬಾ ಹೆಚ್ಚಿನ ಎಂಬ ಅಳವಿಯ ಹುರುಳಿದ್ದು, ಕನ್ನಡದಲ್ಲಿ ಅದಕ್ಕೆ ಸಾಟಿಯಾಗಿ ಎಕ್ಕ (ಎಕ್ಕಟ) ಎಂಬ ಪರಿಚೆಬೇರನ್ನು ಮುನ್ನೊಟ್ಟುಗಳ ಜಾಗದಲ್ಲಿ ಇರಿಸಿ ಹೇಳಲು ಬರುತ್ತದೆ:
hero |
ಕೆಚ್ಚುಗ |
|
superhero |
ಎಕ್ಕಕೆಚ್ಚುಗ |
computer |
ಎಣ್ಣುಕ |
|
supercomputer |
ಎಕ್ಕೆಣ್ಣುಕ |
glue |
ಅಂಟು |
|
superglue |
ಎಕ್ಕಂಟು |
market |
ಮಾರುಕಟ್ಟೆ |
|
supermarket |
ಎಕ್ಕಮಾರುಕಟ್ಟೆ |
brain |
ಮಿದುಳು |
|
superbrain |
ಎಕ್ಕಮಿದುಳು |
(8) ultra ಒಟ್ಟು:
ಈ ಒಟ್ಟಿಗೂ ತುಂಬಾ ಹೆಚ್ಚು ಎಂಬ ಹುರುಳಿದ್ದು, ಇದಕ್ಕೆ ಸಾಟಿಯಾಗಿಯೂ ಕನ್ನಡದಲ್ಲಿ ಎಕ್ಕ ಎಂಬ ಪರಿಚೆಬೇರನ್ನು ಬಳಸಲು ಬರುತ್ತದೆ:
high |
ಎತ್ತರ |
|
ultra-high |
ಎಕ್ಕೆತ್ತರ |
long |
ಉದ್ದ |
|
ultra-long |
ಎಕ್ಕುದ್ದ |
ripe |
ಕಳಿತ |
|
ultra-ripe |
ಎಕ್ಕಕಳಿತ |
secure |
ನೆಮ್ಮದಿಯ |
|
ultra-secure |
ಎಕ್ಕನೆಮ್ಮದಿಯ |
(9) under ಒಟ್ಟು:
ಈ ಒಟ್ಟಿಗಿರುವ ಅಳವಿನ ಬಳಕೆಯಲ್ಲಿ ಕನ್ನಡದ ಕೊರೆ ಎಂಬ ಪದವನ್ನು ಅದಕ್ಕೆ ಸಾಟಿಯಾಗಿ ಬಳಸಲು ಬರುತ್ತದೆ:
dress |
ತೊಡು |
|
underdress |
ಕೊರೆತೊಡು |
spend |
ಬಳಸು |
|
underspend |
ಕೊರೆಬಳಸು |
perform |
ನೆಗಳು |
|
underperform |
ಕೊರೆನೆಗಳು |
fed |
ತಿನ್ನಿಸಿದ |
|
underfed |
ಕೊರೆತಿನ್ನಿಸಿದ |
|
|
|
|
|
fund |
ಹಣ |
|
underfund |
ಕೊರೆಹಣ ಕೊಡು |
nourished |
ಆರಯ್ಕೆಯ |
|
undernourished |
ಕೊರೆಯಾರಯ್ಕೆಯ |
pay |
ಕೂಲಿ |
|
underpay |
ಕೊರೆಕೂಲಿ |
weight |
ತೂಕ |
|
underweight |
ಕೊರೆತೂಕದ |
(10) poly ಇಲ್ಲವೇ multi ಒಟ್ಟು:
ಹಲವು ಎಂಬ ಹುರುಳನ್ನು ಕೊಡುವ ಈ ಒಟ್ಟುಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹಲ ಎಂಬ ಪರಿಚೆಬೇರನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
morph |
ಪರಿಜು |
|
polymorphic |
ಹಲಪರಿಜಿನ |
phone |
ಉಲಿ |
|
polyphonic |
ಹಲವುಲಿಯ |
syllable |
ಉಲಿಕಂತೆ |
|
polysyllabic |
ಹಲವುಲಿಕಂತೆಯ |
technical |
ಅರಿವಿನ |
|
polytechnic |
ಹಲವರಿವಿನ |
|
|
|
|
|
coloured |
ಬಣ್ಣದ |
|
multicoloured |
ಹಲಬಣ್ಣದ |
lateral |
ಬದಿಯ |
|
multilateral |
ಹಲಬದಿಯ |
party |
ತಂಡ |
|
multiparty |
ಹಲತಂಡದ |
race |
ತಳಿ |
|
multiracial |
ಹಲತಳಿಯ |
(11) pan ಒಟ್ಟು:
ಈ ಒಟ್ಟಿಗೆ ಎಲ್ಲ ಎಂಬ ಹುರುಳಿದ್ದು, ಕನ್ನಡದಲ್ಲಿ ಅದೇ ಪದವನ್ನು ಮುನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ:
chromatic |
ಬಣ್ಣದ |
|
panchromatic |
ಎಲ್ಲಬಣ್ಣದ |
linguistic |
ನುಡಿಯ |
|
panlinguistic |
ಎಲ್ಲನುಡಿಯ |
African |
ಆಪ್ರಿಕದ |
|
pan-African |
ಎಲ್ಲಾಪ್ರಿಕದ |
phobia |
ಅಂಜಿಕೆ |
|
panphobia |
ಎಲ್ಲಂಜಿಕೆಯ |
ತಿರುಳು:
ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಲ್ಲಿ ಅದನ್ನು ಕಚಿತವಾಗಿ ತಿಳಿಸುವ ಎಣಿಕೆಯ ಮುನ್ನೊಟ್ಟುಗಳು ಮತ್ತು ಅಶ್ಟೊಂದು ಕಚಿತವಲ್ಲದಂತೆ ಬೇರೆ ಬಗೆಯಲ್ಲಿ ತಿಳಿಸುವ ಅಳವಿಯ ಮುನ್ನೊಟ್ಟುಗಳು ಎಂಬುದಾಗಿ ಎರಡು ಬಗೆಯವು ಇಂಗ್ಲಿಶ್ನಲ್ಲಿವೆ.
ಇವುಗಳಲ್ಲಿ ಎಣಿಕೆಯ ಮುನ್ನೊಟ್ಟುಗಳಿಗೆ ಸಾಟಿಯಾಗಿ ಕನ್ನಡದ ಒರ್/ಓರ್, ಇರ್/ಈರ್, ಮುರ್/ಮೂರ್, ಅರೆ ಮೊದಲಾದ ಎಣಿಕೆಬೇರುಗಳನ್ನು ಮೊನ್ನೊಟ್ಟಿನ ಜಾಗದಲ್ಲಿ ಬಳಸಲು ಬರುತ್ತದೆ, ಮತ್ತು ಬೇರೆ ಬಗೆಯ ಅಳವಿಯನ್ನು ತಿಳಿಸುವ ಮುನ್ನೊಟ್ಟುಗಳಿಗೆ ಸಾಟಿಯಾಗಿ ಹೆಚ್ಚಿನೆಡೆಗಳಲ್ಲೂ ಕನ್ನಡದ ಎಕ್ಕ, ಒಡ, ಕಿರು/ಕಿತ್ತ್, ಕೊರೆ, ಹಲ ಎಂಬಂತಹ ಪರಿಚೆಬೇರುಗಳನ್ನು ಬಳಸಲು ಬರುತ್ತದೆ; ಕೆಲವೆಡೆಗಳಲ್ಲಿ ಮಾತ್ರ ಮೀರು, ಕೂಡು, ಮಿಗಿಲು ಎಂಬಂತಹ ಪದಗಳನ್ನು ಮೊನ್ನೊಟ್ಟಿನ ಜಾಗದಲ್ಲಿ ಇಲ್ಲವೇ ಪದಗಳ ಬಳಿಕ ಬಳಸಬೇಕಾಗುತ್ತದೆ.
<< ಬಾಗ-7
ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-7
ಇಂಗ್ಲಿಶ್ ಹೆಸರುಪದಗಳಿಗೆ dom, ery/ry, ing, ism, ship, eer, ess, ette, let, ster, er, hood, ling, age, ful ಎಂಬಂತಹ ಹಲವು ಒಟ್ಟುಗಳನ್ನು ಸೇರಿಸಿ ಬೇರೆ ಬಗೆಯ ಹೆಸರುಪದಗಳನ್ನು ಪಡೆಯಲು ಬರುತ್ತದೆ. ಇದಲ್ಲದೆ, an, ise, ist, ಮತ್ತು ite ಎಂಬ ಬೇರೆ ನಾಲ್ಕು ಒಟ್ಟುಗಳನ್ನು ಬಳಸಿಯೂ ಹೆಸರುಪದಗಳಿಂದ ಹೆಸರುಪದಗಳನ್ನು ಪಡೆಯಲು ಬರುತ್ತದೆ; ಆದರೆ, ಈ ಒಟ್ಟುಗಳನ್ನು ಬಳಸಿ ಪಡೆದ ಪದಗಳು ಹೆಸರುಪದಗಳಾಗಿ ಮಾತ್ರವಲ್ಲದೆ ಪರಿಚೆಪದಗಳಾಗಿಯೂ ಬಳಕೆಯಾಗಬಲ್ಲುವು.
ಹೆಸರುಪದಗಳಿಗೆ ಸೇರುವ ಈ ಎಲ್ಲಾ ಒಟ್ಟುಗಳಿಗೂ ಮೇಲೆ ವಿವರಿಸಿದ ಒಟ್ಟುಗಳ ಹಾಗೆ ಪದಗಳ ಗುಂಪನ್ನು ಮಾರ್ಪಡಿಸುವ ಕೆಲಸವಿಲ್ಲ; ಹೆಸರುಪದಗಳಿಗೆ ಕೆಲವು ಹೆಚ್ಚಿನ ಹುರುಳನ್ನು ಸೇರಿಸುವುದೇ ಅವುಗಳ ಮುಕ್ಯ ಕೆಲಸವಾಗಿರುತ್ತದೆ.
ಹಾಗಾಗಿ, ಇಂತಹ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಬೇಕಿದ್ದರೆ ಮೊದಲಿಗೆ ಅವು ಇಂಗ್ಲಿಶ್ನಲ್ಲಿ ಹೆಸರುಪದಗಳಿಗೆ ಸೇರಿಸುವಂತಹ ಹೆಚ್ಚಿನ ಹುರುಳನ್ನು ಕನ್ನಡದಲ್ಲಿ ಪಡೆಯುವುದು ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ.
(1) dom ಎಂಬುದಕ್ಕೆ ಹಲವು ಹುರುಳುಗಳಿವೆ; ಅದು ಒಂದು ಹೆಸರುಪದ ಗುರುತಿಸುವ ಪಾಂಗಿನ ಗೊತ್ತುಪಾಡು, ನಾಡು, ಮಟ್ಟ ಮೊದಲಾದುವನ್ನು ತಿಳಿಸಬಲ್ಲುದು; ಈ ಹುರುಳುಗಳನ್ನವಲಂಬಿಸಿ, ಅದನ್ನು ಬಳಸಿರುವ ಹೆಸರುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ತನ ಒಟ್ಟನ್ನು ಇಲ್ಲವೇ ನಾಡು, ಮಟ್ಟ ಎಂಬಂತಹ ಪದಗಳನ್ನು ಬಳಸಲು ಬರುತ್ತದೆ:
bore |
ಕೊರೆಗ |
|
boredom |
ಕೊರೆಗತನ |
clerk |
ಬರೆಗ |
|
clerkdom |
ಬರೆಗತನ |
heir |
ಮರುಪಡೆಗ |
|
heirdom |
ಮರುಪಡೆಗತನ |
king |
ಅರಸು |
|
kingdom |
ಅರಸುನಾಡು |
gangster |
ತಂಡಗಾರ |
|
gangsterdom |
ತಂಡಗಾರನಾಡು |
(2) ery/ry ಎಂಬುದಕ್ಕೂ ಹಲವು ಹುರುಳುಗಳಿವೆ; ಅದು ಒಂದು ಹೆಸರುಪದ ಗುರುತಿಸುವ ಪಾಂಗಿನ ಗೊತ್ತುಪಾಡು ಇಲ್ಲವೇ ನಡವಳಿಕೆ (slavery), ಪಾಂಗಿನ ಜಾಗ ಇಲ್ಲವೇ ಅಂಗಡಿ (bakery), ಪಾಂಗುಗಳ ಸೇರಿಕೆ (jewellery), ಪಾಂಗಿನ ಕೆಲಸ (husbandry), ಮೊದಲಾದ ಹಲವು ಹುರುಳುಗಳನ್ನು ಕೊಡಬಲ್ಲುದು.
ಪಾಂಗಿನ ನಡವಳಿಕೆಯನ್ನು ತಿಳಿಸುವಲ್ಲಿ ತನ ಇಲ್ಲವೇ ಇಕೆ ಒಟ್ಟನ್ನು, ಜಾಗವನ್ನು ತಿಳಿಸುವಲ್ಲಿ ಮನೆ, ಅಂಗಡಿ, ಇಲ್ಲವೇ ಅಂತಹದೇ ಬೇರೆ ಪದವನ್ನು, ಪಾಂಗುಗಳ ಸೇರಿಕೆಯನ್ನು ತಿಳಿಸುವಲ್ಲಿ ಹಲವೆಣಿಕೆಯ ಗಳು ಒಟ್ಟನ್ನು, ಮತ್ತು ನನಸಿನ ಪಾಂಗನ್ನು ತಿಳಿಸುವಲ್ಲಿ ಗೆ ಒಟ್ಟನ್ನು ಬಳಸಲು ಬರುತ್ತದೆ:
buffon |
ಕೋಡಂಗಿ |
|
buffonery |
ಕೋಡಂಗಿತನ |
slave |
ಅಡಿಯ |
|
slavery |
ಅಡಿಯತನ |
trick |
ಬೂಟಾಟ |
|
trickery |
ಬೂಟಾಟಿಕೆ |
perfume |
ಸಾದು |
|
perfumery |
ಸಾದಂಗಡಿ |
pot |
ಬಾನ |
|
pottery |
ಬಾನಂಗಡಿ |
nun |
ಬಿಡುಗಿತ್ತಿ |
|
nunnery |
ಬಿಡುಗಿತ್ತಿಮನೆ |
pig |
ಹಂದಿ |
|
piggery |
ಹಂದಿಕೊಂಚೆ |
orange |
ಕಿತ್ತಳೆ |
|
orangery |
ಕಿತ್ತಳೆತೋಟ |
(3) ing ಎಂಬುದನ್ನು ಹೆಸರುಪದಗಳೊಂದಿಗೆ ಬಳಸಿದಾಗ, ಅವು ತಿಳಿಸುವ ಪಾಂಗಿನ ಬಳಕೆಯೊಂದನ್ನು ಅದು ತಿಳಿಸುತ್ತದೆ; ಈ ಹುರುಳನ್ನು ತಿಳಿಸಲು ಕನ್ನಡದಲ್ಲಿ ಹೆಸರುಪದಗಳಿಗೆ ಬಳಕೆ ಎಂಬ ಪದವನ್ನು ಸೇರಿಸಬಹುದು:
rule |
ಕಟ್ಟಲೆ |
|
ruling |
ಕಟ್ಟಲೆಬಳಕೆ |
boat |
ಓಡ |
|
boating |
ಓಡಬಳಕೆ |
word |
ಸೊಲ್ಲು |
|
wording |
ಸೊಲ್ಲುಬಳಕೆ |
scaffold |
ಸಾರ |
|
scaffolding |
ಸಾರಬಳಕೆ |
panel |
ಪಡಿ |
|
panelling |
ಪಡಿಬಳಕೆ |
(4) ism ಎಂಬುದು ಕಲಿತ (doctrine) ಇಲ್ಲವೇ ಬಳಕೆ ಎಂಬ ಹುರುಳನ್ನು ಕೊಡುತ್ತದೆ; ಈ ಪದಗಳಿಗೆ ಸಾಟಿಯಾದ ಕನ್ನಡ ಪದಗಳನ್ನು ಉಂಟುಮಾಡುವಲ್ಲಿ ತನ ಇಲ್ಲವೇ ಒಲವು ಎಂಬವುಗಳನ್ನು ಬಳಸಲು ಬರುತ್ತದೆ:
hero |
ಕಲಿ |
|
heroism |
ಕಲಿತನ |
cynic |
ಜರೆಗ |
|
cynicism |
ಜರೆಗತನ |
magnet |
ಸೆಳೆಗಲ್ಲು |
|
magnetism |
ಸೆಳೆತನ |
native |
ನಾಡಿಗ |
|
nativism |
ನಾಡಿಗನೊಲವು |
race |
ತಳಿ |
|
racism |
ತಳಿಯೊಲವು |
(5) ship ಎಂಬುದು ಹೆಸರುಪದ ಗುರುತಿಸುವ ಮಂದಿಯ ಪರಿಚೆಯನ್ನು ಇಲ್ಲವೇ ಚಳಕವನ್ನು ಗುರುತಿಸುವಂತಹ ಪದವನ್ನು ಪಡೆಯುವಲ್ಲಿ ನೆರವಾಗುತ್ತದೆ; ಕನ್ನಡದಲ್ಲಿ ಇದಕ್ಕೆ ಸಾಟಿಯಾಗಬಲ್ಲ ಪದವನ್ನು ಪಡೆಯಲು ತನ ಒಟ್ಟನ್ನು ಬಳಸಬಹುದು:
citizenship |
ನಾಡಿಗತನ |
|
friendship |
ಗೆಳೆತನ |
kinship |
ನಂಟತನ |
|
dealership |
ಹರದತನ |
followership |
ಹಿಂಬಾಲಕತನ |
|
chiefship |
ಮುಂದಾಳುತನ |
studentship |
ಕಲಿಗತನ |
|
editorship |
ಅಳವಡಿಗತನ |
ಕೆಲವು ಬಳಕೆಗಳಲ್ಲಿ ಈ ಒಟ್ಟಿಗೆ ಹಲವರ ಕಲೆತವನ್ನು ತಿಳಿಸುವ ಹುರುಳೂ ಇದೆ; ಎತ್ತುಗೆಗಾಗಿ, readership ಎಂಬ ಪದಕ್ಕೆ ಒಟ್ಟು ಒದುಗರ ಎಣಿಕೆ ಎಂಬ ಹುರುಳೂ ಇದೆ.
(6) eer ಎಂಬುದು ಪಳಗಿದ ಇಲ್ಲವೇ ನುರಿತ ಎಂಬ ಹುರುಳನ್ನು ಕೊಡುತ್ತದೆ; ಕನ್ನಡದ ಗಾರ ಒಟ್ಟಿಗೂ ಇಂತಹದೇ ಹುರುಳಿದೆ. ಹಾಗಾಗಿ, ಈ ಒಟ್ಟನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಗಾರ ಒಟ್ಟನ್ನು ಬಳಸಿರುವ ಪದಗಳನ್ನು ಕೊಡಬಹುದು; ನುರಿತ ಎಂಬ ಹುರುಳನ್ನು ಒತ್ತಿಹೇಳಬೇಕಿದ್ದಲ್ಲಿ ಅರಿಗ ಎಂಬ ಪದವನ್ನು ಸೇರಿಸಿರುವ ಪದಗಳನ್ನೂ ಕೊಡಬಹುದು:
cameleer |
ಒಂಟೆಗಾರ |
|
pamphleteer |
ಕಯ್ಕಡತಗಾರ |
pistoleer |
ಕಯ್ಕೋವಿಗಾರ |
|
profiteer |
ಪಡಪುಗಾರ |
racketeer |
ಕೆಯ್ತಗಾರ |
|
summiteer |
ಮೇಲ್ಕೂಟಗಾರ |
engineer |
ಬಿಣಿಗೆಯರಿಗ |
|
rocketeer |
ಏರುಗಣೆಯರಿಗ |
(7) ess ಎಂಬುದು ಹೆಣ್ಣು ಎಂಬ ಹುರುಳನ್ನು ಕೊಡುತ್ತದೆ; ಈ ಒಟ್ಟನ್ನು ಬಳಸಿರುವ ಹೆಚ್ಚಿನ ಕಡೆಗಳಲ್ಲೂ ಕನ್ನಡದಲ್ಲಿ ತಿ ಇಲ್ಲವೇ ಇತ್ತಿ ಒಟ್ಟನ್ನು ಬಳಸಲು ಬರುತ್ತದೆ (ಗಾರ ಒಟ್ಟಿನ ಬಳಿಕ ತಿ ಮತ್ತು ಗ ಒಟ್ಟಿನ ಬಳಿಕ ಇತ್ತಿ):
author |
ಬರಹಗಾರ |
|
authoress |
ಬರಹಗಾರ್ತಿ |
champion |
ಗೆಲ್ಲುಗ |
|
championess |
ಗೆಲ್ಲುಗಿತ್ತಿ |
clerk |
ಬರೆಗ |
|
clerkess |
ಬರೆಗಿತ್ತಿ |
constable |
ಕಾಪುಗ |
|
constabless |
ಕಾಪುಗಿತ್ತಿ |
doctor |
ಮಾಂಜುಗ |
|
doctress |
ಮಾಂಜುಗಿತ್ತಿ |
hunter |
ಬೇಟೆಗಾರ |
|
huntress |
ಬೇಟೆಗಾರ್ತಿ |
(8) ette ಎಂಬುದು ಕಿರಿದು ಎಂಬ ಹುರುಳನ್ನು ಹೆಸರುಪದಕ್ಕೆ ಸೇರಿಸುತ್ತದೆ; ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೆಸರುಪದದ ಮೊದಲು ಕಿರು(ಕಿತ್ತ್) ಎಂಬ ಪದವನ್ನು ಬಳಸಲು ಬರುತ್ತದೆ (ಮುಚ್ಚುಲಿಗಳ ಮೊದಲು ಕಿರು ಮತ್ತು ತೆರೆಯುಲಿಗಳ ಮೊದಲು ಕಿತ್ತ್):
celler |
ನೆಲಮನೆ |
|
cellerette |
ಕಿರುನೆಲಮನೆ |
diner |
ಊಟಮನೆ |
|
dinerette |
ಕಿತ್ತೂಟಮನೆ |
farmer |
ಒಕ್ಕಲಿಗ |
|
farmerette |
ಕಿತ್ತೊಕ್ಕಲಿಗ |
kitchen |
ಅಡಿಗೆಮನೆ |
|
kitchenette |
ಕಿತ್ತಡಿಗೆಮನೆ |
room |
ಕೋಣೆ |
|
roomette |
ಕಿರುಕೋಣೆ |
ಬೇರೆ ಕೆಲವು ಪದಗಳಲ್ಲಿ ಇದಕ್ಕೆ ಅಣಕ ಇಲ್ಲವೇ ಸೋಗು ಎಂಬ ಹುರುಳಿದೆ (leather ತೊಗಲು leatherette ಸೋಗುತೊಗಲು)
(9) let ಎಂಬುದ ಚಿಕ್ಕ ಎಂಬ ಹುರುಳನ್ನು ಹೆಸರುಪದಕ್ಕೆ ಸೇರಿಸುತ್ತದೆ; ಕನ್ನಡದಲ್ಲಿ ಈ ಹುರುಳನ್ನು ಪಡೆಯಲು ಹೆಸರುಪದದ ಮೊದಲು ಕಿರು(ಕಿತ್ತ್) ಎಂಬುದನ್ನು ಸೇರಿಸಬಹುದು:
leaf |
ಓಲೆ |
|
leaflet |
ಕಿತ್ತೋಲೆ |
isle |
ಕುದುರು |
|
islet |
ಕಿರುಕುದುರು |
book |
ಕಡತ |
|
booklet |
ಕಿರುಕಡತ |
branch |
ಗೆಲ್ಲು |
|
branchlet |
ಕಿರುಗೆಲ್ಲು |
nut |
ಬಿತ್ತು |
|
nutlet |
ಕಿರುಬಿತ್ತು |
ಈ ಒಟ್ಟನ್ನು ಉಸಿರಿಗಳನ್ನು ಹೆಸರಿಸುವ ಪದಗಳೊಂದಿಗೆ ಬಳಕೆಯಾಗಿರುವಲ್ಲಿ ಪದಗಳ ಬಳಿಕ ಮರಿ ಎಂಬ ಪದವನ್ನು ಬಳಸಬಹುದು (piglet ಹಂದಿಮರಿ, eaglet ಹದ್ದುಮರಿ).
(10) ster ಎಂಬುದು ಒಂದು ಹೆಸರುಪದ ಗುರುತಿಸುವ ಪಾಂಗಿಗೆ ಸಂಬಂದಿಸಿರುವವರನ್ನು ಹೆಸರಿಸುತ್ತದೆ; ಕನ್ನಡದಲ್ಲಿ ಇಂತಹ ಪದಕ್ಕೆ ಸಾಟಿಯಾಗುವಂತೆ ಗಾರ ಒಟ್ಟನ್ನು ಬಳಸಲು ಬರುತ್ತದೆ:
pun |
ಹದಿರು |
|
punster |
ಹದಿರುಗಾರ |
song |
ಹಾಡು |
|
songster |
ಹಾಡುಗಾರ |
mob |
ದೊಂಬಿ |
|
mobster |
ದೊಂಬಿಗಾರ |
speed |
ಉರುಬು |
|
speedster |
ಉರುಬುಗಾರ |
(11) er ಎಂಬುದನ್ನೂ ಹೆಸರುಪದಗಳೊಂದಿಗೆ ಬಳಸಲು ಬರುತ್ತಿದ್ದು, ಅದು ಆ ಹೆಸರುಪದ ಗುರುತಿಸುವ ಪಾಂಗನ್ನು ಮುಕ್ಯ ಪರಿಚೆಯಾಗಿ ಪಡೆದಿರುವ ಮಂದಿಯನ್ನು ಹೆಸರಿಸುತ್ತದೆ. ಕನ್ನಡದಲ್ಲಿ ಈ ಒಟ್ಟಿಗೆ ಬದಲಾಗಿ ಗ/ಇಗ ಇಲ್ಲವೇ ಗಾರ ಒಟ್ಟನ್ನು ಬಳಸಲು ಬರುತ್ತದೆ:
office |
ಮಣಿಹ |
|
officer |
ಮಣಿಹಗಾರ |
research |
ಅರಕೆ |
|
researcher |
ಅರಕೆಗಾರ |
oil mill |
ಗಾಣ |
|
oil miller |
ಗಾಣಿಗ |
garden |
ತೋಟ |
|
gardener |
ತೋಟಗಾರ |
ಕೆಲವು ಬಳಕೆಗಳಲ್ಲಿ ಈ ಒಟ್ಟು ಮಂದಿಯಲ್ಲದ ಪಾಂಗುಗಳನ್ನು ಗುರುತಿಸುವ ಹೆಸರುಪದಗಳನ್ನೂ ಉಂಟುಮಾಡಬಲ್ಲುದು; ಇಂತಹ ಕಡೆಗಳಲ್ಲಿ ಗ ಇಲ್ಲವೇ ಗಾರ ಒಟ್ಟಿನ ಬದಲು ಕ ಒಟ್ಟನ್ನು ಬಳಸಬಹುದು:
(12) hood ಒಟ್ಟನ್ನು ಬಳಸಿ ಹೆಸರುಪದಗಳು ಗುರುತಿಸುವ ಪಾಂಗಿನ ಪರಿಚೆಯನ್ನು ತಿಳಿಸಬಲ್ಲ ಬೇರೆ ಹೆಸರುಪದಗಳನ್ನು ಪಡೆಯಲಾಗುತ್ತದೆ; ಇಂತಹ ಇಂಗ್ಲಿಶ್ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ತನ ಒಟ್ಟನ್ನು ಬಳಸಿ ಪಡೆಯಲು ಬರುತ್ತದೆ:
mother |
ತಾಯಿ |
|
motherhood |
ತಾಯ್ತನ |
man |
ಗಂಡಸು |
|
manhood |
ಗಂಡಸ್ತನ |
boy |
ಹುಡುಗ |
|
boyhood |
ಹುಡುಗತನ |
ಮೇಲಿನ ಹನ್ನೆರಡು ಒಟ್ಟುಗಳು ಮಾತ್ರವಲ್ಲದೆ, an, ist, ಮತ್ತು ese ಎಂಬ ಬೇರೆ ಮೂರು ಒಟ್ಟುಗಳನ್ನೂ ಹೆಸರುಪದಗಳಿಗೆ ಸೇರಿಸಿ ಬೇರೆ ಹೆಸರುಪದಗಳನ್ನು ಪಡೆಯಲು ಬರುತ್ತದೆ; ಆದರೆ, ಈ ಒಟ್ಟುಗಳನ್ನು ಬಳಸಿ ಪಡೆದ ಪದಗಳು ಹೆಸರುಪದಗಳಾಗಿ ಮಾತ್ರವಲ್ಲದೆ ಹೆಸರುಪರಿಚೆಗಳಾಗಿಯೂ ಬಳಕೆಯಾಗಬಲ್ಲುವು.
(13) an ಎಂಬುದು ಹೆಸರುಪದ ಗುರುತಿಸುವ ಪಾಂಗಿಗೆ ಸಂಬಂದಿಸಿದ ಇಲ್ಲವೇ ಅದರ ಕುರಿತಾಗಿ ಹೆಚ್ಚಿನ ಅರಿವನ್ನು ಪಡೆದ ಮಂದಿಯನ್ನು ಗುರುತಿಸುತ್ತದೆ; ಹಾಗಾಗಿ, ಈ ಒಟ್ಟನ್ನು ಬಳಸಿರುವ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಗ, ಗಾರ, ಇಲ್ಲವೇ ಅರಿಗ ಎಂಬುದನ್ನು ಸೇರಿಸಿರುವ ಹೆಸರುಪದಗಳನ್ನು ಬಳಸಲು ಬರುತ್ತದೆ:
music |
ಹಾಡಿಕೆ |
|
musician |
ಹಾಡುಗಾರ |
library |
ಕಡತಮನೆ |
|
librarian |
ಕಡತಗಾರ |
history |
ಹಿನ್ನಡವಳಿ |
|
historian |
ಹಿನ್ನಡವಳಿಯರಿಗ |
grammar |
ಸೊಲ್ಲರಿಮೆ |
|
grammarian |
ಸೊಲ್ಲರಿಗ |
logic |
ತೀರ್ಮೆ |
|
logician |
ತೀರ್ಮೆಯರಿಗ |
(14) ist ಎಂಬ ಒಟ್ಟಿಗೂ ಹೆಚ್ಚುಕಡಿಮೆ ಇದೇ ಹುರುಳಿದೆ, ಮತ್ತು ಇದನ್ನು ಬಳಸಿರುವ ಪದಗಳಿಗೂ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಗ, ಗಾರ, ಇಲ್ಲವೇ ಅರಿಗ ಎಂಬವುಗಳನ್ನು ಬಳಸಿ ಪಡೆಯಲು ಬರುತ್ತದೆ; ಕೆಲವೆಡೆಗಳಲ್ಲಿ ಒಲವಿಗ ಎಂಬ ಪದವನ್ನೂ ಸೇರಿಸಿ, ಪಡೆಯಬೇಗಾಗಿರುವ ಹುರುಳನ್ನು ಪಡೆಯಲು ಬರುತ್ತದೆ:
cartoon |
ಚಲ್ಲತಿಟ್ಟ |
|
cartoonist |
ಚಲ್ಲತಿಟ್ಟಗಾರ |
terror |
ದಿಗಿಲು |
|
terrorist |
ದಿಗಿಲುಗಾರ |
tour |
ಸುತ್ತಾಟ |
|
tourist |
ಸುತ್ತಾಟಗಾರ |
biology |
ಉಸಿರಿಯರಿಮೆ |
|
biologist |
ಉಸಿರಿಯರಿಗ |
Darwin |
ಡಾರ್ವಿನ್ |
|
Darwinist |
ಡಾರ್ವಿನ್ನರಿಗ |
geology |
ಮಣ್ಣರಿಮೆ |
|
geologist |
ಮಣ್ಣರಿಗ |
nude |
ಬೆತ್ತಲೆ |
|
nudist |
ಬೆತ್ತಲೆಯೊಲವಿಗ |
race |
ತಳಿ |
|
racist |
ತಳಿಯೊಲವಿಗ |
(15) ese ಎಂಬ ಇನ್ನೊಂದು ಒಟ್ಟಿಗೆ ಮೂರು ಬಗೆಯ ಹುರುಳುಗಳಿವೆ: ಒಂದು ನಾಡು, ಹೊಳಲು, ಇಲ್ಲವೇ ಜಾಗವನ್ನು ಹೆಸರಿಸುವ ಪದಗಳ ಬಳಿಕ ಬಳಸಿದಾಗ ಇದು ಅಲ್ಲಿ ನೆಲಸಿರುವ ಮಂದಿಯನ್ನು ಇಲ್ಲವೇ ಅವರ ನುಡಿಯನ್ನು ಹೆಸರಿಸಬಲ್ಲುದು. ಇಂತಹ ಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡಲು ಹೆಸರುಪದಗಳಿಗೆ ಇಗ ಎಂಬ ಒಟ್ಟನ್ನು ಇಲ್ಲವೇ ನುಡಿ ಎಂಬ ಪದವನ್ನು ಸೇರಿಸಲು ಬರುತ್ತದೆ:
Vienna |
ವಿಯೆನ್ನಾ |
|
Viennese |
ವಿಯೆನ್ನಿಗ, ವಿಯೆನ್ನಾ ನುಡಿ |
Bhutan |
ಬುತಾನ್ |
|
Bhutanese |
ಬುತಾನಿಗ, ಬುತಾನ್ ನುಡಿ |
Burma |
ಬರ್ಮಾ |
|
Burmese |
ಬರ್ಮಿಗ, ಬರ್ಮಾ ನುಡಿ |
Sudan |
ಸುಡಾನ್ |
|
Sudanese |
ಸುಡಾನಿಗ, ಸುಡಾನ್ ನುಡಿ |
Malta |
ಮಾಲ್ಟಾ |
|
Maltese |
ಮಾಲ್ಟಾನಿಗ, ಮಾಲ್ಟಾ ನುಡಿ |
China |
ಚೀನಾ |
|
Chinese |
ಚೀನಿಗ, ಚೀನೀ ನುಡಿ |
ಈ ಒಟ್ಟಿನ ಇನ್ನೊಂದು ಬಳಕೆಯಲ್ಲಿ ಅದು ಹೆಸರುಪದ ಗುರುತಿಸುವ ಒಂದು ಗುಂಪಿನ ಒಳನುಡಿಯನ್ನು ತಿಳಿಸುತ್ತದೆ. ಇಂತಹ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ತೊಂಡು ಪದವನ್ನು ಸೇರಿಸಿ ಹೇಳಬಹುದು:
computer |
ಎಣ್ಣುಕ |
|
computerese |
ಎಣ್ಣುಕತೊಂಡು |
education |
ಕಲಿಕೆ |
|
educationese |
ಕಲಿಕೆತೊಂಡು |
government |
ಆಡಳಿತ |
|
governmentese |
ಆಡಳಿತ ತೊಂಡು |
journal |
ಸುದ್ದಿಹಾಳೆ |
|
journalese |
ಸುದ್ದಿಹಾಳೆ ತೊಂಡು |
legal |
ಕಟ್ಟಲೆಯ |
|
legalese |
ಕಟ್ಟಲೆತೊಂಡು |
ತಿರುಳು:
ಇಂಗ್ಲಿಶ್ನಲ್ಲಿ ಹೆಸರುಪದಗಳಿಗೆ ಒಟ್ಟುಗಳನ್ನು ಸೇರಿಸಿ ಹಲವು ಬಗೆಯ ಹೆಚ್ಚಿನ ಹೆಸರುಪದಗಳನ್ನು ಪಡೆಯಲಾಗಿದೆ; ಈ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡಲು ಅವುಗಳ ಹುರುಳನ್ನವಲಂಬಿಸಿ ಬೇರೆ ಬೇರೆ ಹಮ್ಮುಗೆಗಳನ್ನು ಬಳಸಬೇಕಾಗುತ್ತದೆ. ಇವುಗಳಲ್ಲಿ ತನ, ಕೆ/ಇಕೆ, ಗ/ಇಗ, ತಿ/ಇತ್ತಿ ಎಂಬ ಹಿನ್ನೊಟ್ಟುಗಳು, ಪದಗಳ ಮೊದಲು ಸೇರಿಸುವ ಕಿರು/ಕಿತ್ ಪದಬೇರು, ಮತ್ತು ಪದಗಳ ಬಳಿಕ ಸೇರಿಸುವ ನಾಡು, ಅಂಗಡಿ, ಮನೆ, ಬಳಕೆ, ಒಲವು, ಆಳ್ವಿಕೆ, ಅರಿಗ ಮೊದಲಾದ ಪದಗಳು ಮುಕ್ಯವಾದವುಗಳು.
<< ಬಾಗ-6
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-6
ಒಟ್ಟುಗಳನ್ನು ಸೇರಿಸದೆ ಎಸಕಪದಗಳನ್ನು ಹೆಸರುಪದಗಳಾಗಿ ಬಳಸುವುದು
ಇಂಗ್ಲಿಶ್ನ ಹಲವು ಎಸಕಪದಗಳನ್ನು ಅವುಗಳಿಗೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳನ್ನಾಗಿ ಬಳಸಲು ಬರುತ್ತದೆ; ಎತ್ತುಗೆಗಾಗಿ, cover ಎಂಬ ಪದವನ್ನು ಹೊದೆ ಎಂಬ ಹುರುಳಿನಲ್ಲಿ ಒಂದು ಎಸಕಪದವಾಗಿಯೂ ಬಳಸಬಹುದು, ಮತ್ತು ಹೊದಿಕೆ ಎಂಬ ಹುರುಳಿನಲ್ಲಿ ಒಂದು ಹೆಸರುಪದವಾಗಿಯೂ ಬಳಸಬಹುದು. (ಇವನ್ನು ಎಸಕಪದಗಳಿಗೆ ಸೊನ್ನೆ ಒಟ್ಟನ್ನು ಸೇರಿಸಿ ಪಡೆದ ಹೆಸರುಪದಗಳೆಂದೂ ಹೇಳಲಾಗುತ್ತದೆ.)
ಕನ್ನಡದಲ್ಲಿಯೂ ಕೆಲವು ಎಸಕಪದಗಳನ್ನು ಈ ರೀತಿ ಅವಕ್ಕೆ ಯಾವ ಒಟ್ಟನ್ನೂ ಸೇರಿಸದೆ ಹೆಸರುಪದಗಳಾಗಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೂಗು, ಓದು, ಕೆಮ್ಮು, ನಗು ಮೊದಲಾದ ಕೆಲವು ಎಸಕಪದಗಳನ್ನು ಹಾಗೆಯೇ ಹೆಸರುಪದಗಳಾಗಿಯೂ ಬಳಸಲು ಬರುತ್ತದೆ. ಕೆಲವೆಡೆಗಳಲ್ಲಿ ಈ ರೀತಿ ಎಸಕಪದ ಮತ್ತು ಹೆಸರುಪದಗಳೆಂಬ ಎರಡು ಬಗೆಯ ಪದಗಳಾಗಿ ಬಳಕೆಯಾಗುವ ಕನ್ನಡ ಪದಗಳು ಅಂತಹವೇ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿಯೂ ಇರುತ್ತವೆ:
ಕರೆ |
call, a call |
|
ತಿರುವು |
turn, a turn |
ಅಳುಕು |
fear, a fear |
|
ಉಲಿ |
sound, a sound |
ತುರಿ |
itch, an itch |
|
ಅಳು |
cry, a cry |
ಒದೆ |
kick, a kick |
|
ನಗು |
laugh, a laugh |
ಗುದ್ದು |
box, a box |
|
ಹೇರು |
load, a load |
ಆದರೆ, ಬೇರೆ ಹಲವೆಡೆಗಳಲ್ಲಿ ಇಂಗ್ಲಿಶ್ ಎಸಕಪದಗಳಿಗೂ ಕನ್ನಡ ಎಸಕಪದಗಳಿಗೂ ನಡುವ ಇಂತಹ ಸಾಟಿ ಕಾಣಿಸುವುದಿಲ್ಲ; ಹಾಗಾಗಿ, ಈ ಎರಡು ಬಗೆಯ ಬಳಕೆಗಳಿರುವ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿರುವ ಹೆಸರುಪದಗಳನ್ನು ಇಲ್ಲವೇ ಎಸಕಪದಗಳನ್ನು ಹೊಸದಾಗಿ ಉಂಟುಮಾಡಬೇಕಾಗುತ್ತದೆ.
ಇದಲ್ಲದೆ, ಹೆಸರುಪದಗಳಾಗಿ ಬಳಕೆಯಾಗಬಲ್ಲ ಬೇರೆ ಕೆಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತಹ ಎಸಕಪದಗಳು ಕನ್ನಡದಲ್ಲಿದ್ದರೂ ಅವೆರಡು ಬೇರೆ ಬೇರೆ ಹುರುಳುಗಳಲ್ಲಿ ಈ ರೀತಿ ಹೆಸರುಪದಗಳಾಗಿ ಬಳಕೆಯಾಗುತ್ತಿರಬಹುದು. ಎತ್ತುಗೆಗಾಗಿ, ಇಂಗ್ಲಿಶ್ನ step ಮತ್ತು ಕನ್ನಡದ ಮೆಟ್ಟು ಎಂಬ ಎರಡು ಎಸಕಪದಗಳೂ ಹೆಸರುಪದಗಳಾಗಿ ಬಳಕೆಯಾಗಬಲ್ಲುವು; ಆದರೆ, ಇಂಗ್ಲಿಶ್ನ step ಎಂಬುದಕ್ಕೆ ಕನ್ನಡದ ಮೆಟ್ಟಲು ಎಂಬ ಪದದ ಹುರುಳಿದೆ, ಮತ್ತು ಕನ್ನಡದ ಮೆಟ್ಟು ಎಂಬುದಕ್ಕೆ ಇಂಗ್ಲಿಶ್ನ slipper(s) ಎಂಬ ಪದದ ಹುರುಳಿದೆ.
ಇಂಗ್ಲಿಶ್ನಲ್ಲಿ ಎಸಕಪದಗಳು ಹಲವು ಬಗೆಯ ಹುರುಳುಗಳಲ್ಲಿ ಈ ರೀತಿ ಹೆಸರುಪದಗಳಾಗಿ ಬಳಕೆಯಾಗುತ್ತವೆ: (1) ಎಸಕ ನಡೆಸುವ, ಇಲ್ಲವೇ ಎಸಕಕ್ಕೆ ಒಳಗಾಗುವ ಮಂದಿಯನ್ನು ಇಲ್ಲವೇ ಬೇರೆ ಬಗೆಯ ಪಾಂಗುಗಳನ್ನು ಅವು ಗುರುತಿಸಬಹುದು; (2) ಎಸಕವನ್ನು ಇಲ್ಲವೇ ಎಸಕದ ದೊರೆತವನ್ನು ಗುರುತಿಸಬಹುದು, ಮತ್ತು (3) ಎಸಕದ ಮುಟ್ಟನ್ನು ಇಲ್ಲವೇ ಜಾಗವನ್ನು ಗುರುತಿಸಬಹುದು; ಅವು ತಿಳಿಸುವ ಈ ಹುರುಳುಗಳಿಗೆ ಹೊಂದಿಕೆಯಾಗುವಂತೆ ಕನ್ನಡದಲ್ಲಿ ಒಟ್ಟುಗಳನ್ನು ಇಲ್ಲವೇ ಪದಗಳನ್ನು ಆರಿಸಿಕೊಂಡು ಅವಕ್ಕೆ ಸಾಟಿಯಾಗುವ ಹೆಸರುಪದಗಳನ್ನು ಕಟ್ಟಬೇಕಾಗುತ್ತದೆ.
(1) ಹೆಸರುಪದಗಳಾಗಿ ಬಳಕೆಯಾಗುವ ಎಸಕಪದಗಳು ಎಸಕ ನಡೆಸುವ ಇಲ್ಲವೇ ಅದಕ್ಕೆ ಒಳಗಾಗುವ ಮಂದಿಯನ್ನು ಗುರುತಿಸುತ್ತಿದೆಯಾದರೆ, ಅವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಉಂಟುಮಾಡಲು ಕನ್ನಡದಲ್ಲಿ ಗ ಇಲ್ಲವೇ ಗಾರ ಒಟ್ಟನ್ನು ಬಳಸಬಹುದು, ಮತ್ತು ಇವು ಮಂದಿಯನ್ನು ಗುರುತಿಸದೆ ಬೇರೆ ಬಗೆಯ ಪಾಂಗುಗಳನ್ನು ಗುರುತಿಸುತ್ತಿವೆಯಾದರೆ ಕ ಒಟ್ಟನ್ನು ಬಳಸಬಹುದು:
(1) ಮಂದಿಯನ್ನು ಗುರುತಿಸುವವು:
ಎಸಕಪದ |
|
ಹೆಸರುಪದವಾಗಿ ಬಳಕೆ |
cheat |
ಆಳವಾಡು |
|
cheat |
ಆಳಿಗ |
coach |
ಕಲಿಸು |
|
coach |
ಕಲಿಸುಗ |
cook |
ಅಡು |
|
cook |
ಅಟ್ಟುಳಿಗ |
(2) ಬೇರೆ ಬಗೆಯ ಪಾಂಗುಗಳನ್ನು ಗುರುತಿಸುವವು:
ಎಸಕಪದ |
|
ಹೆಸರುಪದವಾಗಿ ಬಳಕೆ |
bore |
ಕೊರೆ |
|
bore |
ಕೊರಕ |
lift |
ಎತ್ತು |
|
lift |
ಎತ್ತುಕ |
(2) ಹೆಸರುಪದವಾಗಿ ಬಳಕೆಯಾಗುವ ಎಸಕಪದಗಳು ಎಸಕವನ್ನು ಇಲ್ಲವೇ ಅದರ ನೆನಸಿನ ದೊರೆತವನ್ನು ಗುರುತಿಸುತ್ತಿದೆಯಾದರೆ, ಕನ್ನಡದಲ್ಲಿ ಇಕೆ ಇಲ್ಲವೇ ತ ಒಟ್ಟನ್ನು ಬಳಸಬಹುದು; ಇವುಗಳಲ್ಲಿ ಇಕೆ ಒಟ್ಟು ಉಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಬರುತ್ತದೆ, ಮತ್ತು ತ ಒಟ್ಟು ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುವ ಎಸಕಪದಗಳ ಬಳಿಕ ಬರುತ್ತದೆ:
ಎಸಕಪದ |
|
ಹೆಸರುಪದವಾಗಿ ಬಳಕೆ |
study |
ಕಲಿ |
|
study |
ಕಲಿಕೆ |
fear |
ಹೆದರು |
|
fear |
ಹೆದರಿಕೆ |
offer |
ನೀಡು |
|
offer |
ನೀಡಿಕೆ |
want |
ಬಯಸು |
|
want |
ಬಯಕೆ |
divide |
ಬಗೆ |
|
divide |
ಬಗೆತ |
display |
ಮೆರೆ |
|
display |
ಮೆರೆತ |
dance |
ಕುಣಿ |
|
dance |
ಕುಣಿತ |
hold |
ಹಿಡಿ |
|
hold |
ಹಿಡಿತ |
(3) ಹೆಸರುಪದವಾಗಿ ಬಳಕೆಯಾಗುವ ಎಸಕಪದಗಳು ಗುರುತಿಸುವ ದೊರೆತ ನನಸಿನದಾಗಿದ್ದಲ್ಲಿ, ಇಲ್ಲವೇ ಅವು ಎಸಕದ ಮುಟ್ಟನ್ನು (instrumentನ್ನು) ಗುರುತಿಸುವುದಿದ್ದಲ್ಲಿ ಇಗೆ/ಗೆ ಒಟ್ಟನ್ನು ಬಳಸಲು ಬರುತ್ತದೆ:
ಎಸಕಪದ |
|
ಹೆಸರುಪದವಾಗಿ ಬಳಕೆ |
cover |
ಮುಚ್ಚು |
|
cover |
ಮುಚ್ಚಿಗೆ |
comb |
ಬಾಚು |
|
comb |
ಬಾಚಣಿಗೆ |
drink |
ಕುಡಿ |
|
drink |
ಕುಡಿಗೆ |
dress |
ತೊಡು |
|
dress |
ತೊಡುಗೆ |
(4) ಕೆಲವೆಡೆಗಳಲ್ಲಿ ಈ ರೀತಿ ಹೆಸರುಪದಗಳಾಗಿ ಬಳಕೆಯಾಗಬಲ್ಲ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೆಸರುಪದಗಳೇ ಇರುತ್ತವೆ. ಎತ್ತುಗೆಗಾಗಿ, ಇಂಗ್ಲಿಶ್ನ hunt ಎಂಬ ಎಸಕಪದವನ್ನು ಬೇಟೆಯಾಡು ಎಂಬ ಹುರುಳಿನಲ್ಲಿ ಎಸಕಪದವಾಗಿಯೂ ಬಳಸಬಹುದು ಮತ್ತು ಬೇಟೆ ಎಂಬ ಹುರುಳಿನಲ್ಲಿ ಹೆಸರುಪದವಾಗಿಯೂ ಬಳಸಬಹುದು.
ಇಂತಹ ಕಡೆಗಳಲ್ಲಿ, ಮೇಲಿನ ಎತ್ತುಗೆಯೇ ತಿಳಿಸುವ ಹಾಗೆ, ಇಂಗ್ಲಿಶ್ನ ಈ ಪದಗಳು ಎಸಕಪದಗಳಾಗಿ ಬಳಕೆಯಾಗುವಂತಹ ಸಂದರ್ಬಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟಬೇಕಾಗುತ್ತದೆ, ಮತ್ತು ಇದಕ್ಕಾಗಿ ಈ ಇಂಗ್ಲಿಶ್ ಪದಗಳು ಎಸಕಪದಗಳಾಗಿ ಬಳಕೆಯಾಗುವಾಗ ಯಾವ ಹುರುಳನ್ನು ಕೊಡುತ್ತವೆಯೋ ಅವನ್ನು ತಿಳಿಸುವಂತಹ ಎಸಕಪದಗಳನ್ನು ಹೆಸರುಪದದೊಂದಿಗೆ ಸೇರಿಸಿರುವ ಕೂಡುಪದಗಳನ್ನು ಬಳಸಬೇಕಾಗುತ್ತದೆ:
ಎಸಕಪದ |
|
ಹೆಸರುಪದವಾಗಿ ಬಳಕೆ |
charge |
ದಾಳಿಮಾಡು |
|
charge |
ದಾಳಿ |
deal |
ಹರದುಗೆಯ್ಯು |
|
deal |
ಹರದು |
hunt |
ಬೇಟೆಯಾಡು |
|
hunt |
ಬೇಟೆ |
delay |
ತಡಮಾಡು |
|
delay |
ತಡ |
escape |
ಪಾರಾಗು |
|
escape |
ಪಾರು |
excuse |
ಹೆಳೆಯೊಡ್ಡು |
|
excuse |
ಹೆಳೆ |
grip |
ಪಟ್ಟುಹಿಡಿ |
|
grip |
ಪಟ್ಟು |
cost |
ಬೆಲೆಬೀಳು |
|
cost |
ಬೆಲೆ |
permit |
ಸೆಲವುಕೊಡು |
|
permit |
ಸೆಲವು |
ತಿರುಳು:
ಇಂಗ್ಲಿಶ್ ಎಸಕಪದ(verb)ಗಳಿಂದ ಹೆಸರುಪದ(noun)ಗಳನ್ನು ಪಡೆಯಲು ಹಲವು ಒಟ್ಟುಗಳನ್ನು ಬಳಸಲಾಗುತ್ತದೆ; ಇವು ಕೊಡುವ ಹುರುಳನ್ನವಲಂಬಿಸಿ ಕನ್ನಡದಲ್ಲಿ ಬೇರೆ ಬೇರೆ ಒಟ್ಟುಗಳನ್ನು ಬಳಸಬೇಕಾಗುತ್ತದೆ.
(1) ಎಸಕಪದಗಳಿಂದ ಪಡೆದ ಹೆಸರುಪದಗಳು ಎಸಕವನ್ನು ನಡೆಸುವ ಮಂದಿಯನ್ನು ಹೆಸರಿಸುತ್ತಿವೆಯಾದರೆ, ಕನ್ನಡದಲ್ಲಿ ಎಸಕಪದಕ್ಕೆ ಗ/ಇಗ ಒಟ್ಟನ್ನು ಸೇರಿಸಿ ಹೊಸ ಪದಗಳನ್ನು ಉಂಟುಮಾಡಿಕೊಳ್ಳಬಹುದು (read ಓದು, reader ಓದುಗ);
(2) ಎಸಕಕ್ಕೆ ಒಳಗಾದ ಮಂದಿಯನ್ನು ಹೆಸರಿಸುತ್ತಿವೆಯಾದರೆ ಹೆಸರುಪದದೊಂದಿಗೆ ಪಡೆಗ ಎಂಬುದನ್ನು ಸೇರಿಸಿರುವ ನುಡಿತವನ್ನು ಬಳಸಬಹುದು (payee ಹಣ ಪಡೆಗ);
(3) ಎಸಕವನ್ನು ನಡೆಸುವಲ್ಲಿ ಬಳಕೆಯಾಗುವ ಮುಟ್ಟು(instrument)ಗಳನ್ನು ಹೆಸರಿಸುತ್ತಿವೆಯಾದರೆ ಕ ಒಟ್ಟನ್ನು ಬಳಸಬಹುದು (peel ಸುಲಿ peeler ಸುಲಿಕ);
(4) ಎಸಕವನ್ನು ಇಲ್ಲವೇ ಅದರ ನೆನಸಿನ ದೊರೆತ(abstract result)ವನ್ನು ಹೆಸರಿಸುತ್ತಿವೆಯಾದರೆ ಇಕೆ/ಕೆ (ಇಲ್ಲವೇ ತ) ಒಟ್ಟನ್ನು ಬಳಸಬಹುದು (read ಓದು reading ಓದಿಕೆ, pierce ಇರಿ piercing ಇರಿತ); ಮತ್ತು
(5) ಎಸಕದ ನನಸಿನ (concrete) ದೊರೆತವನ್ನು ಹೆಸರಿಸುತ್ತಿವೆಯಾದರೆ ಗೆ/ಇಗೆ ಒಟ್ಟನ್ನು ಬಳಸಬಹುದು (sew ಹೊಲಿ sewing ಹೊಲಿಗೆ).
(6) ಹಲವೆಡೆಗಳಲ್ಲಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತಹ ಎಸಕಪದಗಳು ಕನ್ನಡದಲ್ಲಿರುವುದಿಲ್ಲ; ಅಂತಹ ಕಡೆಗಳಲ್ಲಿ ಕೂಡುಪದಗಳನ್ನು, ಇಲ್ಲವೇ ಬೇರೆ ಬಗೆಯ ನುಡಿತಗಳನ್ನು ಕನ್ನಡದಲ್ಲಿ ಉಂಟುಮಾಡಬೇಕಾಗುತ್ತದೆ.
ಕೂಡುಪದಗಳನ್ನು ಬಳಸಿರುವಲ್ಲಿ ಅವುಗಳಿಗೆ ನೇರವಾಗಿ ಮೇಲೆ ತಿಳಿಸಿದ ಒಟ್ಟುಗಳನ್ನು ಸೇರಿಸಬಹುದು (translate ನುಡಿಮಾರು, translator ನುಡಿಮಾರುಗ), ಇಲ್ಲವೇ ಅವುಗಳ ಮೊದಲನೆಯ ಪದವಾಗಿ ಬಂದ ಹೆಸರುಪದಕ್ಕೆ ಬೇರೆ ಒಟ್ಟುಗಳನ್ನು ಸೇರಿಸಿ ಇಂಗ್ಲಿಶ್ ಹೆಸರುಪದಗಳು ಕೊಡುವ ಹುರುಳನ್ನು ಪಡೆಯಬಹುದು (print ಅಚ್ಚುಹಾಕು, printer ಅಚ್ಚುಗಾರ).
(7) ಎಸಕಪದಕ್ಕೆ ಗ/ಇಗ ಒಟ್ಟನ್ನು ಸೇರಿಸಿ ಹೆಸರುಪದವನ್ನು ಪಡೆಯುವ ಬದಲು ಎಸಕಪದದಿಂದ ಪಡೆದ ಹೆಸರುಪದಕ್ಕೆ ಗಾರ ಒಟ್ಟನ್ನು ಸೇರಿಸಿಯೂ ಮಂದಿಯನ್ನು ಹೆಸರಿಸುವ ಮೇಲಿನ ಇಂಗ್ಲಿಶ್ ಪದಗಳಿಗೆ ಸಾಟಿಯಾದ ಕನ್ನಡ ಪದಗಳನ್ನು ಪಡೆಯಲು ಬರುತ್ತದೆ (play ಆಡು, ಆಟ; player ಆಟಗಾರ).
(8) ಇಂಗ್ಲಿಶ್ನ ಹಲವು ಎಸಕಪದಗಳನ್ನು ಹಾಗೆಯೇ ಯಾವ ಒಟ್ಟನ್ನೂ ಸೇರಿಸದ ಹೆಸರುಪದಗಳಾಗಿ ಬಳಸಲಾಗುತ್ತದೆ; ಈ ಹೆಸರುಪದಗಳು ಕೊಡುವ ಹುರುಳನ್ನವಲಂಬಿಸಿ, ಅವಕ್ಕೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಮೇಲಿನ ಹಮ್ಮುಗೆಗಳನ್ನು ಬಳಸಿ ಪಡೆಯಲು ಬರುತ್ತದೆ.
<< ಬಾಗ-5