ಕನ್ನಡ ನುಡಿ ನಡೆದು ಬಂದ ದಾರಿ


ಬರಹಗಾರರು:
ಡಾ. ಡಿ. ಎನ್. ಶಂಕರ ಬಟ್
ಪುಟಗಳು: 405
ಅಚ್ಚು: ಮೊದಲನೇ ಅಚ್ಚು, 2007
ಹೊರಪಡಿಕೆ: ಬಾಶಾ ಪ್ರಕಾಶನ

ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ   down_arrow

ಕೊಂಡುಕೊಳ್ಳಿರಿ
munnota
totalkannada
navakarnataka


 

ವಿವರಗಳು

ಮೂಲದ್ರಾವಿಡದಿಂದ ಇವತ್ತಿನ ಬರಹ ಕನ್ನಡದ ತನಕ ಮತ್ತು ಹಳೆಗನ್ನಡದಿಂದ ಇವತ್ತಿನ ಕನ್ನಡದ ಒಳನುಡಿ(ಆಡುನುಡಿ)ಗಳ ತನಕ ಕನ್ನಡ ನುಡಿಯಲ್ಲಿ ನಡೆದಿರುವ ಬದಲಾವಣೆಗಳನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಮೂಲತೆಂಕುದ್ರಾವಿಡದಿಂದ ಬೇರಾದ ಮೇಲೆ ಕರಾವಳಿ ಮತ್ತು ಒಳನಾಡುಗಳ ನಡುವೆ ನಡೆದ ಒಡೆತವೇ ಕನ್ನಡ ನುಡಿಯ ಮಟ್ಟಿಗೆ ಅತ್ಯಂತ ಹಳೆಯದಾದ ಮತ್ತು ಮುಕ್ಯವಾದ ಒಡೆತ ಎಂಬುದನ್ನೂ ಇಲ್ಲಿ ತೋರಿಸಿಕೊಡಲಾಗಿದೆ.

ಈ ಪುಸ್ತಕವನ್ನು ಬರೆದಿರುವ ಡಿ. ಎನ್. ಶಂಕರ ಬಟ್ ಅವರು ಸಂಸ್ಕ್ರುತದಲ್ಲಿ ಎಂ. ಎ. ಮತ್ತು ಬಾಶಾವಿಜ್ನಾನದಲ್ಲಿ ಪಿಹೆಚ್.ಡಿ. ಮಾಡಿ, ಪುಣೆ, ತಿರುವನಂತಪುರ, ಇಂಪಾಲ್ ಮತ್ತು ಮಯ್ಸೂರುಗಳಲ್ಲಿ ಸಂಶೋದನೆ ಮತ್ತು ಕಲಿಸುವಿಕೆಗಳನ್ನು ಮಾಡಿ ಬಿಡುವು ಪಡೆದಿದ್ದಾರೆ. ಇದಲ್ಲದೆ, ಇಂಗ್ಲೆಂಡಿನಲ್ಲಿ ಒಂದು ವರ್‍ಶ, ಅಮೇರಿಕಾದಲ್ಲಿ ಒಂದೂವರೆ ವರ್‍ಶ, ಬೆಲ್ಜಿಯಂನಲ್ಲಿ ಆರು ತಿಂಗಳು, ಜರ್‍ಮನಿಯಲ್ಲಿ ಆರು ತಿಂಗಳು ಮತ್ತು ಆಸ್ಟ್ರೇಲಿಯಾದಲ್ಲಿ ಮೂರು ತಿಂಗಳು ಸಂಶೋದನೆ ಮಾಡಿದ್ದಾರೆ. ಇಂಗ್ಲೀಶಿನಲ್ಲಿ ಇವರು ಬರೆದ ಪುಸ್ತಕಗಳು ಮತ್ತು ಇತರ ಬರಹಗಳು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪ್ರಕಟಿತವಾಗಿ ವಿಮರ್‍ಶಕರ ಮನ್ನಣೆ ಪಡೆದಿವೆ. ಇತ್ತೀಚಿಗೆ ಸರ್‍ವನಾಮಗಳ ಮೇಲೆ ಇವರು ಬರೆದ ಪುಸ್ತಕವನ್ನು ಆಕ್ಸ್ ಪರ್‍ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ.

ಕನ್ನಡ ನುಡಿಯ ಚರಿತ್ರೆಯ ಕುರಿತು ಇದಕ್ಕೂ ಮೊದಲೇ ಇವರು ಬರೆದಿದ್ದ ಒಂದು ಪುಸ್ತಕವನ್ನು (ಕನ್ನಡ ಬಾಶೆಯ ಕಲ್ಪಿತ ಚರಿತ್ರೆ) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತು. ಆ ಪುಸ್ತಕವನ್ನು ಬಳಸಿ ಮತ್ತು ಹಲವಾರು ಹೊಸ ವಿಶಯಗಳನ್ನೂ ಸೇರಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಕನ್ನಡ ನುಡಿ ಮತ್ತು ಮೂಲದ್ರಾವಿಡ ಕುರಿತಾಗಿ ಇತ್ತೀಚಿನ ವರೆಗೂ ನಡೆದಿರುವ ಸಂಶೋದನೆಗಳನ್ನು ಇದು ಒಳಗೊಂಡಿದೆ.

 

facebooktwitter