ಕಲಿಕೆನುಡಿ ಮತ್ತು ನುಡಿಕಲಿಕೆ

 

 

kalikenudi ಬರಹಗಾರರು: ಡಾ. ಡಿ. ಎನ್. ಶಂಕರ ಬಟ್
ಪುಟಗಳು: 104
ಅಚ್ಚು: ಮೊದಲನೇ ಅಚ್ಚು 2019
ಹೊರಪಡಿಕೆ: ಡಾ. ಡಿ. ಎನ್. ಶಂಕರ ಬಟ್

 

 

 

 

 

 


 ವಿವರಗಳು

ಮಕ್ಕಳು ತಮ್ಮ ಮೊದಲನೇ ನುಡಿಯನ್ನು ಹೇಗೆ ಕಲಿಯುತ್ತಾರೆ, ಮತ್ತು ಅದರೊಂದಿಗೆ ಬೇರೆಯೂ ಒಂದೆರಡು ನುಡಿಗಳನ್ನು ಹೇಗೆ ಕಲಿಯಬಲ್ಲರು ಎಂಬುದನ್ನು ಈ ಚುಟುಕು ಪುಸ್ತಕದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಮುಂದೆ ಶಾಲೆಯಲ್ಲಿ ಅದಕ್ಕಿಂತ ತುಸು ಬೇರಾಗಿರುವ ಎಲ್ಲರ ಕನ್ನಡದಲ್ಲಿ ಮಾತನಾಡಲು ಮತ್ತು ಓದಲು-ಬರೆಯಲು ಅವರಿಗೆ ಹೇಗೆ ಕಲಿಸಬಹುದು ಎಂಬುದನ್ನೂ ಇಲ್ಲಿ ತಿಳಿಸಲಾಗಿದೆ.

ಇಂಗ್ಲಿಶ್ ನಂತಹ ಎರಡನೇ ನುಡಿಯನ್ನು ಮಕ್ಕಳು ತಮ್ಮ ಮೊದಲನೇ ನುಡಿಯ ನೆರವಿನಿಂದ ಹೆಚ್ಚು ಸುಲಬವಾಗಿ ಕಲಿಯಬಲ್ಲರು, ಮತ್ತು ಹಾಗೆ ಕಲಿಯುವಲ್ಲಿ ಅವರು ತಮ್ಮ ಮೊದಲನೇ ನುಡಿಯ ತಿಳಿವನ್ನು ಒಂದು ಮೆಟ್ಟಲಾಗಿ ಬಳಸಿಕೊಳ್ಳಬಲ್ಲರು. ಈ ಮೆಟ್ಟಿಲು ಅವರಿಗೆ ಸಿಗದಂತೆ ಮಾಡಿ, ನೇರವಾಗಿ ಅವರಿಗೆ ಇಂಗ್ಲಿಶ್ ನುಡಿಯನ್ನು ಕಲಿಸಹೊರಟರೆ ಹೆಚ್ಚಿನ ಮಕ್ಕಳೂ ತಮ್ಮ ಕಲಿಕೆಯಲ್ಲಿ ಸರಿಯಾಗಿ ಮುಂದೆ ಹೋಗುವುದಿಲ್ಲ.

ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ಕಲಿಸಲು ಮಕ್ಕಳಿಗೆ ಚೆನ್ನಾಗಿ ತಿಳಿದಿರುವ ಅವರ ಮೊದಲನೇ ನುಡಿಯೇ ತಕ್ಕುದಾದ ಕಲಿಕೆನುಡಿ(ಶಿಕ್ಶಣ ಮಾದ್ಯಮ), ಇಂಗ್ಲಿಶ್ ನಂತಹ ಅವರಿಗೆ ತಿಳಿಯದಿರುವ ನುಡಿಯನ್ನು ಈ ಕೆಲಸಕ್ಕಾಗಿ(ಕಲಿಕೆನುಡಿಯಾಗಿ) ಬಳಸಬೇಕಿದ್ದಲ್ಲಿ ಅಯ್ದಾರು ವರುಶಗಳಾದರೂ ಅವರಿಗೆ ಆ ನುಡಿಯಲ್ಲಿ ಚೆನ್ನಾಗಿ ಮಾತನಾಡಲು ಮತ್ತು ಓದಲು, ಬರೆಯಲು ಕಲಿಸಬೇಕಾಗುತ್ತದೆಯೆಂದು ಹಲವು ಸಂಶೋದನೆಗಳು ತೋರಿಸಿಕೊಟ್ಟಿವೆ.

facebooktwitter