ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು

english_padagalige


ಬರಹಗಾರರು:
ಡಾ. ಡಿ. ಎನ್. ಶಂಕರ ಬಟ್
ಪುಟಗಳು: 487
ಅಚ್ಚು: ಎರಡನೇಅಚ್ಚು, 2011

ಹೊತ್ತಗೆಯನ್ನು ಕೆಳಗಿಳಿಸಿಕೊಳ್ಳಿ   down_arrow







ಕೊಂಡುಕೊಳ್ಳಿರಿ 
munnota     ಕೊಂಡುಕೊಳ್ಳಿರಿ  
totalkannada
navakarnataka


 

ವಿವರಗಳು

ಇದೊಂದು ಹೊಸ ಬಗೆಯ ಪದಕೋಶ. ಇಂಗ್ಲಿಶ್ ನುಡಿಯನ್ನು ಸಾಕಶ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮನಾದ ಕನ್ನಡದ್ದೇ ಆದ ಪದಗಳು ಯಾವುವಿವೆ ಎಂಬುದನ್ನು ತಿಳಿಯಬಯಸುವವರಿಗೆ ಇದನ್ನು ರಚಿಸಲಾಗಿದೆ.

ಸಾಮಾನ್ಯವಾಗಿ ಇಂಗ್ಲಿಶ್-ಕನ್ನಡ ಪದಕೋಶಗಳಲ್ಲಿ ಇಂಗ್ಲಿಶ್ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳಿಗಿಂತಲೂ ಸಂಸ್ಕ್ರುತದಿಂದ ಎರವಲಾಗಿ ಪಡೆದ ತತ್ಸಮ ಪದಗಳನ್ನು ಕೊಡುವುದೇ ಜಾಸ್ತಿ. ಹಾಗಾಗಿ ಕನ್ನಡವೇ ಆದ ಪದಗಳಿದ್ದರೂ ಅವು ಅಂತಹ ಪದಕೋಶಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ.

ಇದರಿಂದಾಗಿ ತಮ್ಮ ಬರಹಗಳಲ್ಲಿ ಕನ್ನಡದವೇ ಆದ ಪದಗಳನ್ನು ಬಳಸಬೇಕಿಂದಿರುವವರಿಗೆ ಅವು ಒತ್ತಾಸೆಯಾಗುವುದಿಲ್ಲ. ಆದರೆ ಈ ಪದಕೋಶದಲ್ಲಿ ಇಂಗ್ಲಿಶ್ ಪದಗಳಿಗೆ ಸಮಾನವಾಗಿರುವಂತಹ ಕನ್ನಡದವೇ ಆದ ಪದಗಳನ್ನು ಕೊಡಲಾಗಿದೆ ಮತ್ತು ಹೊಸಗನ್ನಡ ಪದಗಳನ್ನಲ್ಲದೆ ಹಳೆಗನ್ನಡ ಪದಗಳನ್ನೂ ಕೊಟ್ಟಿದ್ದು ಅವನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಪದಕಂತೆಗಳ ಮೂಲಕ ಮತ್ತು ಹೊಸಗನ್ನಡ ವಾಕ್ಯಗಳ ಮೂಲಕ ಸೂಚಿಸಲಾಗಿದೆ.

ಕನ್ನಡದವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಹೊಸದಾಗಿ ಪದಗಳನ್ನು ಉಂಟುಮಾಡಬೇಕೆಂದಿರುವವರಿಗೂ ಈ ಪದಕೋಶ ಒತ್ತಾಸೆಯಾಗಬಲ್ಲುದು. ಅಂತಹ ಹಲವು ಪದಗಳನ್ನು ಈ ಪದಕೋಶದಲ್ಲಿ ತಯಾರಿಸಿ ಕೊಡಲಾಗಿದೆ. ಅವನ್ನು ತಯಾರಿಸಿಕೊಳ್ಳುವಲ್ಲಿ ಕನ್ನಡದ ಒಲವೇನು ಎಂಬುದನ್ನು ವಿವರಿಸಲಾಗಿದೆ.

facebooktwitter